ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮತೀಪರಿಣಯಂ ಆ ರಾಜನು ಈ ನನ್ನ ಜಡೆಯನ್ನೂ, ಈ ಜಪಮಣಿಯನ್ನೂ ನೋಡಿ ನಾನು ಪರಮವಿರಕ್ತನೆಂದೂ, ಯಾವಾಗಲೂ ಹರಿಧ್ಯಾನಪರನೆಂ ದೂ ತಿಳಿದು, ನನ್ನಲ್ಲಿ ಎಷ್ಟೋ ಗೌರವವನ್ನು ತೋರಿಸುತ್ತಿರು ವನು, ಈ ವೇಷದಿಂದ ನಾನು ಅವನಮುಂದೆ ನಿಂತು ನಿನ್ನ ಮಗ ಇನ್ನು ನಾನು ಮೋಹಿಸಿದೆ ” ನೆಂದರೆ, ಅವನು ನನ್ನನ್ನು ಎಷ್ಟು ತುಚ್ಛವಾಗಿ ಕಾಣುವನು? ಪತನಾದರೂ ಈ ವಿಷಯವನ್ನು ಕೇಳಿದರೆ, ಅವನು ನನ್ನನ್ನು ಎಷ್ಟು ಹೇಳೆನಮಾಡುವನು? ನಾನು ಲೋಕವನ್ನು ವಂಚಿಸುವುದಕ್ಕಾಗಿಯೇ ಈ ವೇಷವನ್ನು ಧರಿಸಿದಂ ತಾಯಿತಲ್ಲಾ ! ವಾಸ್ತವದಲ್ಲಿ ಈಗ ನನ್ನ ಸ್ಥಿತಿಯನ್ನು ನೋ ಡಿದರೆ; ಕಂ|| ಜಪಮಾಲೆ ಕಾಮಮಂತ್ರವ | ಜಪಿಸಿನಗಾಯ್ತು ! ತಲೆಗೆ ಸುತ್ತಿದ ಜಡೆಯುಂ! ತೃಪಕನ್ಯಾಮೋಹರ | ವಿಪುಲಶಿರೋವ್ಯಥೆಗೆ ತಲೆಯ ಕಟ್ಟಾಯ್ತ ಕಟಾ! || ಇದಕ್ಕೇನು ಮಾಡಲಿ! (ಎಂದು ಸ್ವಲ್ಪ ಹೊತ್ತಿನವರೆಗೆ ಚಿಂತಿ ಸುತಿದ್ದು) ಇನ್ನು ಚಿಂತಿಸುವುದರಿಂದ ಪ್ರಯೋಜನವಿಲ್ಲ! ಈಗ ಈ ನನ್ನ ಚಪಲಬುದ್ಧಿಯನ್ನು ತಿರುಗಿಸುವುದೇನೋ ಸಾಧ್ಯವಲ್ಲ ! ಪ್ರಯತ್ನಿಸಿದಹೊರತು ಕೆಲಸವಾಗುವುದಿಲ್ಲ! ನಾನಾಗಿಯೇ ಹೋ ಗಿ ರಾಜನಿಗೆ ನನ್ನ ಉದ್ದೇಶವನ್ನು ತಿಳಿಸಿಬಿಡುವೆನು ! (ಆತುರ ದಿಂದ ಮುಂದೆ ಹೋಗಿ ಛೇ! ಈ ತುಚ್ಛವಿಷಯವನ್ನು ಲಜ್ಜೆಯಿ ಅದೆ ಹೇಗೆ ಕೇಳಲಿ! (ಹಿಂದೆ ಸರಿಯುವನು.) ತೆರೆಯಲ್ಲಿ ಹೆಜ್ಜೆಯ ಸದ್ದಾಗುವುದನ್ನು ಕೇಳಿ ಸಂಭ್ರಮದಿಂದ) ಓಹೋ ರಾಜನೇ ಇಲ್ಲಿಗೆ ಬರುವಂತಿದೆ ! ಈಗೇನುಮಾಡಲಿ ! ಮಾಡುವುದೇನು ? ಏನಾದರೂ ಆಗಲಿ! (ಕಾಮಾತುರಾಣಾಂ ನ ಭಯಂ ಅಜ್ಞಾ !” ಈಗ ಲಜ್ಜೆಯನ್ನೂ , ಭಯವನ್ನೂ ಬಿಟ್ಟ ಹೊರತು, ಕಾರಸಾಧನೆ ಯಾಗಲಾರದು! ಕೇಳಿಯೇ ಬಿಡುವೆನು.