ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತೃತೀಯಾಂಕ೦. ವಿಷಯವನ್ನೂ ಬಾಯಿಂದಾಡಿಸುವಂತಿದೆ ! ಹೀಗೆ ಸ್ವಾರತ್ಯಾ ಗಪೊಕವಾಗಿಯಾದರೂ ಪರರಿಗೆ ಉಪಕಾರವನ್ನು ಮಾಡ ಬೇಕೆಂದು ಬಯಸುವುದು ತಮ್ಮಂತಹ ಮಹಾತ್ಮರಿಗೆ ಸಹಜ ಗುಣವಾಗಿದೆ! ತಮ್ಮ ಈ ಉಪಚಾರೋಕ್ತಿಗಳೇ ನನ್ನ ಮನಸ್ಸಿಗೆ ಎಷ್ಟೋ ಆಪ್ಯಾಯನವನ್ನುಂಟುಮಾಡಿರುವುವು. ನಾರದಂ-ರಾಜೇಂದ್ರಾ! ನಾನು ಕೇವಲ ಉಪಚಾರೋಕಿಗಾಗಿ ಈ ಮಾತನ್ನು ಹೇಳಿದೆನೆಂದೆಣಿಸಬೇಡ ! ವಾಸ್ತಸವಾಗಿಯೇ ಹೇ ಳುತ್ತಿರುವೆನು. ರಾಜಂ-ಪೂಜ್ಯರೆ ! ನಾನು ನನ್ನ ಮಗಳ ವಿವಾಹವಿಷಯವಾಗಿ ಆತುರಹ ಡುತ್ತಿರುವುದನ್ನು ನೋಡಿ, ನನ್ನ ಮನಸ್ಸನ್ನು ಪರೀಕ್ಷಿಸುವುದ ಕ್ಯಾಗಿ ಹಂಗಿಸುವಂತಿದೆ ! ಪರಮವಿರಕ್ಕಶಿಖಾಮಣಿಗಳಾದ ತ ಮ್ಮಂತವರು, ಈ ಸಂಸಾರಮಾರ್ಗವನ್ನು ಎಷ್ಟು ಹೇಯವಾಗಿ ಎಣಿಸಿರುವಿರೆಂಬುದನ್ನು ನಾನು ಕಾಣೆನೆ? ಈವಿಚಾರವು ಸಾಕು! ಆತಿಥ್ಯಕ್ಕಾಗಿ ದಯೆಮಾಡಿಸಬೇಕು ! ನಾರದಂ-(ಸ್ವಗತಂ) ಇವನಿಗೆ ಇನ್ನೂ ನನ್ನ ಮಾತಿನಲ್ಲಿ ನಂಬಿಕೆಯಿಲ್ಲ ! ಯಾವವಿಧದಿಂದ ನಂಬಿಕೆಯನ್ನು ಹುಟ್ಟಿಸಲಿ! ಇರಲಿ! ಬೇರೊಂ ದುಪಾಯವನ್ನು ಮಾಡುವೆನು. (ಪ್ರಕಾಶಂ) ರಾಜಾ ! ನಾನು ನನ್ನ ಮನಃಪೂರಕವಾದ ಅಭಿಪ್ರಾಯವನ್ನು ತಿಳಿಸಿದರೂ, ನೀನು ಬೇರೆಬೇರೆ ನೆವದಿಂದ ಅದಕ್ಕೆ ವಿರುದ್ಧವಾಗಿ ಹೇಳುವುದ ನ್ನು ನೋಡಿದರೆ, ಈ ತಾಪವೇಷದಲ್ಲಿರುವ ನನಗೆ ನಿನ್ನ ಮಗಳ ನ್ನು ವಿವಾಹಮಾಡಿಕೊಡುವುದಕ್ಕೆ ಇಷ್ಟವಿಲ್ಲದಂತೆ ತೋರುವು ದು.ನಿಜವಾಗಿಯೂ ನಿನ್ನ ಮಗಳಲ್ಲಿ ನನಗೆ ಹುಟ್ಟಿದ ಮೋಹ(ಎಂದು ಆರ್ಥೋಕ್ಕಿಯಲ್ಲಿ ನಿಲ್ಲಿಸಿ) ಅನುಗ್ರಹಬುದ್ಧಿಯಿಂದಲೇ ನಾನು ಹೇಳಿದೆನು. ಇದರಮೇಲೆ ನಿನ್ನ ಇಷ್ಟದಂತೆ ನಡೆಸು. (ಎಂದು ಕೋಪದಿಂದ ಹಿಂತಿರುಗುವನು.)