ಈ ಪುಟವನ್ನು ಪರಿಶೀಲಿಸಲಾಗಿಲ್ಲ.

K ಶ್ರೀಮತೀಕರಿಸಯಂ ರಾಜಂ-(ಭಯಾಶ್ ಲ್ಯಗಳೊಡನೆ) ಸ್ವಗತಂ) ಓಹೋ! ಇದೇನು! ಇವರು ಹೀಗೆ ಉಪಕ್ರಮಿಸಿದರು ? ಇದುವರೆಗೆ ಇವರು ಹೇಳಿದುದೆಲ್ಲವೂ ಕೇವಲವಿನೋದಾದ್ಧವೆಂದು ತಿಳಿದಿದ್ದೆನು. ನಿಜವಾಗಿಯೇ ಅವರಿಗೆ ವಿವಾಹಾಭಿಲಾಷೆಯು ಹುಟ್ಟಿದಂತಿದೆ. ಒಂದುವೇಳೆ ನನ್ನ ಮನಸ್ಸನ್ನು ಪರೀಕ್ಷಿಸುವುದಕ್ಕಾಗಿ ಹೀಗೆ ಹೇಳಿರಬಹುದೆ? ಹೇಗಿ ದರೂ ಇರಲಿ ! ಇವರ ಕೋಪಕ್ಕೆ ಪಾತ್ರನಾಗಬಾರದು, (ಪ್ರ ಕಾಶಂ ಮುನೀಂದ್ರಾ ! ಕ್ಷಮಿಸಬೇಕು ! ಬೇರೆವಿಧವಾಗಿ ಭಾವಿ ಸಕೂಡದು ! ನಿಜವಾಗಿಯೂ ತಾವು ನನ್ನ ಕನೈಯನ್ನು ಬಯಸು ವಪಕ್ಷದಲ್ಲಿ, ಅದು ನನ್ನ ಭಾಗ್ಯೂದಯವಲ್ಲವೆ ? ಕನ್ಯಾದಾನಕ್ಕೆ ತಮಗಿಂತಲೂ ಸತ್ಪಾತ್ರವೆಲ್ಲಿ ದೊರೆಯುವುದು ! ಅವಶ್ಯವಾಗಿ ಪರಿಗ್ರಹಿಸಬಹುದು ! ನಾಳೆಯೇ ಅಗ್ನಿ ಸಾಕ್ಷಿಕವಾಗಿ ಧಾರೆಯೆರೆ ದು ಕೊಡುವೆನು. ನಾರದಂ- ಸಂತೋಷದಿಂದ ರಾಜನ ಕೈಯನ್ನು ಹಿಡಿದು) ರಾಜೇಂದ್ರಾ! ಇಷ್ಟೇ ನನ್ನ ಉದ್ದೇಶವು! ಆದರೆ ಶ್ರೇಯಾಂಸಿ ಬಹುವಿಫಾ ನಿ” ಎಂಬಂತೆ, ಅನುಕೂಲಕಾರಿಗಳಿಗೆ ಅನೇಕವಿಸ್ಸು ಗಳುಂಟಾ ಗುವುದು ಸಹಜವು. ಆದುದರಿಂದ ಕಾರಸಿಲ್ವಾಹವಾಗುವವರೆಗೆ ಈ ರಹಸ್ಯವನ್ನು ಹೊರಗೆ ಬಿಡದೆ ಶುಭ ಕಾವ್ಯವನ್ನು ಶೀಘ್ರದಲ್ಲಿ ನಡೆಸಿಬಿಡಬೇಕು. ರಾಜಂತಮ್ಮ ಇಷ್ಟದಂತೆಯೇ ಆಗಲಿ ! ನಾಳೆಯೇ ನಡೆಸಿಬಿಡುವೆವು. ಆದರೆ ಕನೈಯರ ವಿವಾಹವಿಷಯದಲ್ಲಿ ತಾಯಿಯ ಅನುಮತಿಯು ಬಹಳ ಮುಖ್ಯವಾದುದರಿಂದ, ನನ್ನ ಪತ್ನಿ ಯಲ್ಲಿ ಈ ವಿಷಯ ವನ್ನು ತಿಳಿಸಿ, ಹೇಗಾದರೂ ಅವಳನ್ನೊಪ್ಪಿಸಿ, ವಿವಾಹಲಗ್ರ ವನ್ನು ನಿರ್ಣಯಿಸುವೆನು. ನಾರದಂ-ರಾಜೇಂದ್ರಾ: ನಿನ್ನ ಪತ್ನಿಯು ಎಂದಿಗೂ ಈ ಕಾಠ್ಯಕ್ಕೆ ಸಮ್ಮತಿ ಸದಿರಲಾರಳು ! ಮುಖ್ಯವಾಗಿ « ಮಾತಾ ವಿತ್ತಂ” ಎಂಬಂತೆ ಹೆಣ್ಣು ಮಕ್ಕಳು ಭಾಗ್ಯವಂತರಾಗಿ ಬಾಳುತ್ತಿರಬೇಕೆಂಬುದೇ ತಾ