ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುರ್ಥಾ೦ಕಂ. ಲಕ್ಷ್ಮಿ - ನಾಥಾ : ನಿನಗೆ ನನ್ನಲ್ಲಿಯೂ ಮರೆಸಿಡತಕ್ಕ ರಹಸ್ಯವುಂಟೆ? ನೀನು ಹೇಳದೆ ಮರೆಸಿದಷ್ಟೂ, ನನಗೆ ಅದನ್ನು ಕೇಳಿಯೇ ತೀರ ಬೇಕೆಂಬ ಹಟವೂ, ಕುತೂಹಲವೂ ಹೆಚ್ಚು ತಿರುವುದು, ಅದೇನು ಹೇಳು. ವಿಷ್ಣು - ಪ್ರಿಯೆ ! ನಾರದ ಪಕ್ವತರೆಂಬ ಮಹರ್ಷಿಗಳಿಬ್ಬರೂ ಪರಮ ವೈರಾಗ್ಯ ನಿಷ್ಠರೆಂಬುದನ್ನು ನೀನೂ ಕೇಳಿ ಬಲ್ಲೆಯಷ್ಟೆ. ಲಕ್ಷ್ಮಿ- ಆಹಾ ! ಚೆನ್ನಾಗಿ ಕೇಳಿಬಲ್ಲೆನು, ಜಿತೇಂದ್ರಿಯರೆಂದರೆ ಅವರಿಗೇ ಸಲ್ಲು ವುದು. ವಿಷ್ಣು ಅವರಿಬ್ಬರೂ ಒಂದು ಸ್ತ್ರೀವ್ಯಕ್ತಿಯನ್ನು ನೋಡಿ ಮೋಹಿತರಾಗಿ ರುವರು. ಅವಳನ್ನು ಹೇಗಾದರೂ ವಿವಾಹವಾಗಬೇಕೆಂಬ ಉ ದೇಶದಿಂದ ಇಬ್ಬರೂ ಯತ್ನಿ ಸುತ್ತಿರುವರು. ಈ ಹೆಣ್ಣಿನ ವಿಚಾ ರವಾಗಿಯೇ, ಆಬಾಲ್ಯಸ್ನೇಹದಿಂದ ಏಕದೇಹದಂತಿದ್ದ ಅವ ರವರಲ್ಲಿಯೇ ಅಂತಃಕಲಹವುಂಟಾಗಿ, ಒಬ್ಬರನ್ನೊಬ್ಬರು ವಂಚಿ ಸುವುದಕ್ಕೂ ಉಪಾಯವನ್ನು ಹುಡುಕುತ್ತಿರುವರು. ಲಕ್ಷ್ಮಿ- ಆಶ್ಚರದಿಂದ) ಏನಿದು ! ಅಂತಹ ಪರಮವಿರಕ್ತರೂ ಕಾಮ ಪಾಶದಲ್ಲಿ ಕಟ್ಟು ಬಿದ್ದರೆ ? ನಾಥಾ ! ಸ್ತ್ರೀಯರ ಪ್ರಭಾವವನ್ನು ನೋಡಿದೆಯಾ ? ಎಷ್ಮೆ ಧೀರರನ್ನಾದರೂ ಆಕರ್ಷಿಸತಕ್ಕ ಶಕ್ತಿಯು ನಮ್ಮಲ್ಲಿರುವುದು, ನೀವಶ್ಯನಲ್ಲದ ಪುರುಷನೊಬ್ಬನೂ ಇಲ್ಲವೆಂಬುದು ಈಗಲಾದರೂ ನಿನಗೆ ವ್ಯಕ್ತವಾಯಿತೆ ? ವಿಷ್ಣು -.- ಪ್ರಿಯೆ ! ಇದು ಸ್ತ್ರೀಯರ ಪ್ರಭಾವವಲ್ಲ : ನನ್ನ ಮಾಯೆಯ ಪ್ರಭಾವವೆಂದು ತಿಳಿ ! ಲಕ್ಷ- ನಾಥಾ ! ಹಾಗಿದ್ದರೂ, ಆ ನಿನ್ನ ಮಾಯೆಗೂ ಸೀಲಿಂಗಸಂ

  • ಬಂಧದಿಂದಲೇ ಈ ವಕೀಕರಣಶಕ್ತಿಯುಂಟಾಗಿರಬೇಕು. ವಿಷ್ಣು ಪ್ರಿಯೆ ! ಇಷ್ಟು ಮಾತ್ರಕ್ಕಾಗಿಯೇ ನೀನು ನಿಮ್ಮ ಜಾತಿಯ

ಹೆಮ್ಮೆಯನ್ನು ಹೇಳಿಕೊಳ್ಳಬೇಡ ! ಆ ಸ್ತ್ರೀಯರೇ ಮಹಾನರಕ್ಕೆ ಮೂಲವೆಂಬುದನ್ನೂ, ಆ ಸ್ತ್ರೀ ಮೋಹಪಾಶದಲ್ಲಿ ಸಿಕ್ಕಿಬಿದ್ದವರ