ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭! ಶ್ರೀಮತೀಪರಿಷಯಂ ರುವನು, ಆ ಸ್ವಯಂವರಕಾಲದಲ್ಲಿ ಶ್ರೀಮತಿಯು ಪರೈತನನ್ನು ವರಿಸದಹಾಗೆ ಮಾಡಬೇಕು, ಇಷ್ಟೆ ನನ್ನ ಪ್ರಾದ್ಧನೆ ! ವಿಷ್ಣು- ಆಶ್ವ ವ್ಯವನ್ನು ನಟಿಸುತ್ತ) ಆಹಾ ! ನಾರದಾ ! ಇದೇನು ? ದೇವಸಭೆಯಲ್ಲಿ ರಂಭಾದ್ಯಪ್ಪರಸ್ತ್ರೀಯರ ಗಾನನರ್ತನಗಳನ್ನು ನೋಡುವಾಗಲೂ, ಅವರ ರೂಪಕ್ಕೆ ಮೋಹಿಸದೆ ಜಿತೇಂದ್ರಿಯ ನಾಗಿದ್ಯ ನಿನ್ನನ್ನೂ ಮೋಹಪಾಶದಲ್ಲಿ ಸಿಕ್ಕಿಸಬೇಕಾದರೆ ಆಕಸ್ಯೆ ಯ ಪ್ರಭಾವವು ಲೋಕಾದ್ಭುತವಾಗಿರಬೇಕಲ್ಲವೆ ? ನಾರದಂ-ದೇವಾ! ಅದನ್ನು ಹೇಳಿ ಪ್ರಯೋಜನವೇನು, ಕಂ || ಸುರರ್ಗಮೃತಮನೀವೆಡೆಯೊಳ ಹರನಂ ವೃಕಬಾಧೆಯಿಂದ ತಪ್ಪಿಸುವೆಡೆಯೊಳ6 ಹರಿ ! ನೀಂ ಧರಿಸಿದ ನಾರೀ ಸ್ವರೂಪಮೇ ಮತ್ತ ಮಿಲ್ಲಿಬಂದಂತಿರ್ಕ್ಕು೦ || ವಿಷ್ಣು-ನಾರದಾ ! ಹಾಗಿದ್ದರೆ ನೀನು ಮೋಹಿಸಿದುದು ಯುಕ್ತವೇ ! ಇದಕ್ಕಾಗಿ ನನ್ನಿಂದಾಗಬೇಕಾದ ಸಹಾಯವೇನು ? ನಾರದಂ-ಬೇರೇನೂ ಇಲ್ಲ ! ನಾಳೆ ಪದ್ವತನು ಸ್ವಯಂವರಮಂಟಪವ ನ್ನು ಪ್ರವೇಶಿಸಿದೊಡನೆ, ಆತನ ಮುಖವು ಕಪಿಯಂತೆ ಕಾಣಿಸಭೆ ಕು, ಇದೇ ನನ್ನ ಪ್ರಾಮ್ಮನೆ! ವಿಷ್ಣು-ನಾರದಾ ! ನಿನ್ನ ಇಷ್ಟದಂತೆಯೇ ಆಗಲಿ ! ನಾರದಂ-ದೇವಾ ! ಧನ್ಯನಾದೆನು, ನಿನಗೆ ಜಯವಾಗಲಿ ! ವಂದಿಸುವೆನು ನಾನು ಹೋಗಿಬರುವೆನು.(ಹಾಡುತ್ತ ಹೋಗುವನು.) ವಿಷ್ಣು-ದೇವಿ! ಕಾಮಿಗಳ ಸ್ವಭಾವವನ್ನು ನೋಡಿದೆಯಾ : ಮನಸ್ಸಿನಲ್ಲಿ ಕಾಮವು ಅಂಕುರಿಸುವಾಗಲೇ, ಕೋಧ, ದ್ವೇಷ, ಮಾತ್ಸಲ್ಯ, ಮೊದಲಾದ ದುರ್ಗುಣಗಳೆಲ್ಲವೂ ತಲೆಯೆತ್ತುವುವು, ಏಕದೇಹ ನ್ಯಾಯದಿಂದ ಅನ್ನೋನ್ಯವಾಗಿದ್ದ ನಾರದಪರೈತರ ಸ್ನೇಹವು