ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮತೀಪರಿಣ್ಯಂ ಯದಲ್ಲಿ, ನಾನು ನನ್ನಿಂದಾಗಬಹುದಾದ ಸಹಾಯವನ್ನು ಮಾ ಡಬಹುದು, ಇಲ್ಲದಿದ್ದರೆ ಉ8 ! ನನ್ನ ಮುಂದೆ “ ಆ ಮಾತ ನೈ ಎತ್ತಬೇಡ ? ವಿದೂ - ಸಂತೋಷದಿಂದ ವಿದೂಷಕನ ಬೆನ್ನನ್ನು ತಟ್ಟಿ) ಆಧ್ಯಾ ! ಭಲೆ ! ಭಲೆ ! ನಾನು ಮನಸ್ಸಿನಲ್ಲಿ ಉದ್ದೇಶಿಸಿದುದನ್ನೇ ನೀನೂ ಹೇಳುತ್ತಿರುವೆ ? ನಮ್ಮ ನಾಟಕವು ಸಕಲಜನಮನೋರಂಜಕ ವಾಗುವುದೆಂಬುದಕ್ಕೆ ಇದೇ ಶುಭಸೂಚನೆಯಾಗಿದೆ. ಶ್ರೀಮ ತೀಪರಿಣಯವೆಂಬ ಒಂದು ಹೊಸನಾಟಕವು ಈಗ ನನ್ನ ಹಸ್ತ ಗತವಾಗಿರುವುದು, ಅದು ನಿನ್ನ ಇಷ್ಟಾನುಸಾರವಾಗಿಯೇ ಹಾ ಸ್ಯರಸಪ್ರಚುರವಾಗಿ, ಮಹರ್ಷಿಗಳ ಚರಿತ್ರದಿಂದ ಮಿಶ್ರಿತವಾ ಗಿರುವುದು, ಇತರವಿಷಯಗಳಲ್ಲಿ ಆ ನಾಟಕದ ಪ್ರಶಂಸೆಯನ್ನು ಕುರಿತು ನಾನು ಬೇರೇನೂ ಹೇಳಬೇಕಾದುದಿಲ್ಲ.ಕೇಳು! ಕ೦ll ಲೋಕೈಕನಾಯಕನೆ ತಾ| ನೀಕೃತಿನಾಯಕನಶೇಷಜಗದೀಶ್ವರಿ ಲ || ಶ್ರೀಕಾಂತ ನಾಯಿಕೆಯನ ° ಕಾವ್ಯದ ಮಹಿಮೆ ಬಣ್ಣಿಸಲ್ಪಂದಪುದೇ! ವಿದೂ-ಭರತಾಚಾರಾ ! ಚೆನ್ನಾಗಿ ಹೇಳಿದೆ ! ಪೂರೈಕವಿಗಳಿಂದ ರಚಿತ ವಾದ ಎಷ್ಟೋ ನಾಟಕಗಳಿರುವಾಗ, ಅವೆಲ್ಲವನ್ನೂ ಬಿಟ್ಟು, ಅನಾಮಧೇಯನಾದ ಯಾವನೋ?: ಒಬ್ಬನಿಂದ ರಚಿತವಾದ ಈ ಹೊಸನಾಟಕದಲ್ಲಿ, ಈ ಸಭಾಸದರಿಗೆ ಹೇಗೆತಾನೇ ಗೌ ರವಬುದ್ದಿಯು ಹುಟ್ಟುವುದು ? -ಮಿತ್ರನೆ! ಹಾಗೆಣಿಸಬೇಡ ! ಕಂ॥' ಪಳದು ಪೊಸತೆಂಬಮಾತ್ರದಿ ನಿಳೆಯೊಳ್ ಗುಣದೋಷಗಣನೆಯಜ್ಞತೆಯೆನಿಕುಂ | ತಿಳಿವಳ್ಳರಖಿಲವಸ್ತುವ ನೊಳಪೊಕ್ಕಾರಯ್ಯರಿ! ಗುಣದೋಷಗಳಂ || ಸೂತ್ರ