ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಿತೀಯಾಂಕ೦. ೨೧ ಪಕ್ವತಂ-ಕೋಪದಿಂದ) ಓ ಅಪ್ಪರಸಿಯರೆ ! ವೃಥಾ ಕಾಲಹರಣದಿಂದ ನನ್ನ ಆಗ್ರಹಕ್ಕೆ ಪಾತ್ರರಾಗದೆ ಬೇಗನೆ ಹೇಳಿರಿ ! ಏನಿದ್ದರೂ ನಿರ್ಭಯವಾಗಿ ತಿಳಿಸಬಹುದು. ೧-ನೆಯವಳು-ಪೂಜ್ಯರೆ ವಂದಿಸುವೆವು. ನಮಸ್ಕರಿಸಿ ಮನ್ನಿ ಸಬೇಕು.ಇದ್ದ ಸ್ಥಿತಿಯನ್ನು ತಿಳಿಸುವೆನು. ದೇವೇಂದ್ರನು ಈಗ ಶಾರದೋತ್ಸ ವವನ್ನಾರಂಭಿಸಿದನೆಂಬ ಸಂಗತಿಯನ್ನು ತಾವೂ ಕೇಳಿರಬಹುದು. ಪಕ್ವತಂ-ಹೌದು ! ಕೇಳಿ ಬಲ್ಲೆನು. ೧-ನೆಯವಳು-ಅದನ್ನು ಈ ವರ್ಷದಲ್ಲಿ ಎಂದಿಗಿಂತಲೂ ವಿಶೇಷವಿಜೃಂಭಣೆ ಯಿಂದ ನಡೆಸಬೇಕೆಂದುದ್ದೇಶಿಸಿ, ಅದರ ಕಾರಭಾರವನ್ನು ಕಾ ಮದೇವನಿಗೆ ವಹಿಸಿದ್ದನು. ಪಕ್ವತಂ-ಹೌದು ! ಇವೆಲ್ಲವೂ ಮನ್ಮಥನ ವೈಭವಗಳೇ ಆದುದರಿಂದ, ಅದೂ ಉಚಿತವಾಗಿಯೇ ಇರುವುದು, ಆಮೇಲೆ ? ೧-ನೆಯವಳು-ಆಗ ಮನ್ಮಥನ ಕಾರನಿಲ್ಯಾಹನೈಪುಣ್ಯವನ್ನು ನೋಡಿ, ದೇ ವೇಂದ್ರನು ಪರಮಸಂತುಷ್ಟನಾಗಿ, ಅವನನ್ನು ತನ್ನ ಅರ್ಧಾ ಸನದಲ್ಲಿ ಕುಳ್ಳಿರಿಸಿ ಆಗ್ರಪೂಜೆಯನ್ನು ಮಾಡಿದನು. ಪಕ್ವತಂ-ಕೋಪದಿಂದ) ಏನೇನು ? ಇಂದ್ರನು ಮನ್ಮಥನನ್ನು ತನ್ನ ಅರ್ಧಾಸನದಲ್ಲಿ ಕುಳ್ಳಿರಿಸಿ, ಅಗ್ರಪೂಜೆಯನ್ನು ಮಾಡಿದನೆ ? ಆ ಯಿತು ! ಆಮೇಲೆ? ೧-ನೆಯವಳು-ಅದನ್ನು ನೋಡಿ ನಾರದಮಹರ್ಷಿಗೆ ಆಕ್ರೋಶವುಂಟಾ ಯಿತು. ಪಕ್ವತಂ-ನ್ಯಾಯವೇ ! ಇಂತಹ ಅನುಚಿತವಾದ ಕಾಠ್ಯವನ್ನು ಕಣ್ಣಾರೆ ನೋಡಿದಮೇಲೆ, ಯಾರಿಗೆತಾನೇ ಕೋಪವುಂಟಾಗದು! ಅದರಿಂ ದಾಚೆಗೆ ? ೧-ನೆಯವಳು-ಇದೇ ವಿಷಯಕ್ಕಾಗಿ ನಾರದಮುನಿಯು ಇಂದ್ರನನ್ನು ಥಿ ಕ್ಕರಿಸಿ ಮಾತನಾಡುತಿದ್ದಾಗ, ಮನ್ಮಥನಿಗೂ, ನಾರದ ಮಹರ್ಷಿ ಗೂ ಕೆಲವು ವಾಗ್ವಾದಗಳು ನಡೆದುವು.