ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1೩ ಶ್ರೀಮತೀಪರಿಣಯಂ ರಾಜಪ-(ಸಂತೋಷದಿಂದ) ಏನು ! ಮಹಾತ್ಮರಾದ ನಾರದಪರೈತರು ಬಂದಿರುವರೆ ! ಅವರನ್ನು ಕರೆತರುವುದಕ್ಕೆ ಸಮಯನಿರೀಕ್ಷಣೆ ಯೇನು? ಹೋಗು ! ಈಗಲೇ ಕರೆದುಕೊಂಡು ಬಾ (ಶ್ರೀಮತಿ ಯನ್ನು ನೋಡಿ)ವತ್ಸೆ ಏಳೇಳು! ಮಹಾತ್ಮರಾದ ನಾರದಪರೈತ ರಿಬ್ಬರೂ ಅತಿಥಿಗಳಾಗಿ ಬಂದಿರುವರಂತೆ ! ಲೋಕಪೂಜ್ಯರಾದ ಆ ಮಹರ್ಷಿಗಳಿಬ್ಬರೂ,ನಿನ್ನ ವತಸಮಾಪ್ತಿ ಕಾಲಕ್ಕೆ ಇಲ್ಲಿಗೆ ಬಂ ದುದು ನಮ್ಮ ಭಾದಯವು!ಇಷ್ಟರಲ್ಲಿ ನೀನು ಈ ಸುಮಂ ಗಲಿಯರಿಗೆ ಕುಂಕುಮತಾಂಬೂಲಗಳನ್ನು ಕೊಟ್ಟು ಸತ್ಕರಿಸಿ ಕಳುಹಿಸು! ಈ ವೃದ್ದ ಸುಮಂಗಲಿಯರಿಗೆ ನಮಸ್ಕರಿಸಿ, ಅಮೋ ಫುವಾದ ಅವರ ಆಶೀರ್ವಾದಕ್ಕೆ ಪಾತ್ರಳಾಗು ! (ಶ್ರೀಮತಿಯು ಎಲ್ಲರಿಗೂ ಕುಂಕುಮತಾಂಬೂಲವನ್ನು ಕೊಟ್ಟು ನಮಸ್ಕರಿಸುವಳು.) (ಅವರಲ್ಲಿ ವೃದ್ದ ತಾಪಸಿಯೊಬ್ಬಳು ಮುಂದೆ ಬಂದು ಆಶೀರ್ವದಿಸುವಳು.) ವೃದ್ಧತಾಪಸಿ ಕಂ | ಕುಲವೃದ್ದರ ಕುಲಗುರುಗಳ ಕುಲದೇವತೆಯರ ನಿರಂತರಾನುಗ್ರಹದಿಂ | ಎಲೆಸುತೆ! ನೀಂ ದೀರ್ಘಸುಮಂ ಗಲಿಯಾಗಿ ಚಿರಾಯುವಾಗಿ ಸುಖದಿಂ ಬಾಳli (ಸುಮಂಗಲಿಯರೆಲ್ಲರೂ ಆಕ್ಷತೆಯನ್ನು ಹಾಕುವರು. ಕಂಚುಕಿಯು ನಾರದಪರೈತರೊಡನೆ ಪ್ರವೇಶಿಸುವನು.) ಕಂಚುಕಿ ಪೂಜ್ಯರೆ ! ಇತ್ರದಿಮಾಡಿಸಬೇಕು! ಇದೇ ಮಹಾರಾಜನ ವಸಂತೋದ್ಯಾನವು. (ನಾರದ ಪರೈತರಿಬ್ಬರೂ ಪ್ರವೇಶಿಸಿ, ಉದ್ಯಾನದ ಸೌಂದಯ್ಯ ವನ್ನು ನೋಡುತ್ತಿರುವಾಗ, ಮನ್ಮಥನು ಧನುರ್ಬಾಣಗಳೊಡನೆ ಹಿಂದಿನಿಂದ ಬಂದು, ಅವರಮೇಲೆ ಪುಷ್ಪಬಾಣಗಳನ್ನು ಕರೆಯು ವನು.)