ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮತೀಪರಿಣ್ಯಂ ಯೆಂಬುದು ಇದರಿಂದಲೇ ಸ್ಪಷ್ಟವಾಗುವುದು, ದೇವಿ! ಇನ್ನು ಕಾಲವಿಳಂಬವು ಸಾಕು ! ವಿವಾಹಕ್ಕೆ ಬೇಕಾದ ಸನ್ನಾ ಹಗಳೆಲ್ಲ ವನ್ನೂ ಸಿದ್ಧಪಡಿಸುವೆವು. ರಾಣಿ-ನಾಥಾ ! ಹೌದು ! ಶುಭ ಕಾಠ್ಯವನ್ನು ಶೀಘ್ರದಲ್ಲಿಯೇ ನಡೆಸಿ. ಬಿಡಬೇಕು. ರಾಜಂ-ಯಾರಲ್ಲಿ ! ಕಂಚುಕಿಯು ಪ್ರವೇಶಿಸಿ) ಮಹಾರಾಜನೆ ! ಏನಪ್ಪಣೆ ! ರಾಜಂ- ಜಯಂಥರಾ ! ಈಗಲೇ ನೀನು ಹೋಗಿ, ವಿವಾಹಕ್ಕೆ ಬೇಕಾದ ಸಕಲಸನ್ನಾ ಹಗಳನ್ನೂ ಸಿದ್ಧಪಡಿಸುವಂತೆ ನಮ್ಮ ಗೃಹಾಧ್ಯಕ್ಷ ನಿಗೆ ತಿಳಿಸು ! ನಮ್ಮ ಶ್ರೀಮತೀಕುಮಾರಿಯನ್ನು ದೇವರ್ಷಿ ಯಾದ ನಾರದನಿಗೆ ಕೊಟ್ಟುರಾಣಿ-(ನಗು) ನಾಥಾ ! ಇದೇನು ? ಈ ಸಂತೋಷಸಂಭ್ರಮದಲ್ಲಿ ವರನ ಹೆಸರನ್ನೇ ಮಾರಿಸಿಬಿಟ್ಟಿಯಲ್ಲಾ ' ಪರೈತಮಹರ್ಷಿಯೆಂ ದು ಹೇಳು ! ರಾಜಂ- ಪ್ರಿಯೆ ! ಚೆನ್ನಾ ಯಿತು ! ಆ ಮಹರ್ಷಿಗಳ ಹೆಸರಿನಲ್ಲಿ ನಿನಗೇ। ಭ್ರಾಂತಿಯುಂಟಾಗಿರುವಹಾಗಿದೆ. ನಮ್ಮಲ್ಲಿ ಕನ್ಯಾರಿಯಾಗಿ ಬಂ ವಿದ್ದವನು ನಾರದನು ! ರಾಣಿ-ನಾಥಾ ! ಇಲ್ಲ ! ನಾರದನನ್ನು ನಾನು ಕಾಣೆನೆ ? ನನ್ನಲ್ಲಿಗೆ ಬಂ ಡಿದ್ದವನು ಪರತಮುನಿ. ರಾಜಂ -(ಬೆಜ್ಜರಬಿದ್ದು) ಏನು ? ನಿಜವಾಗಿಯೂ ನಿನ್ನಲ್ಲಿ ಬಂದಿದ್ದವನು ಪರೈತನೆ ? ರಾಣಿ-ನಾಧಾ ! ನಿಜವಲ್ಲದೆ ನಿನ್ನೊಡನೆ ನಾನು ಸುಳ್ಳಾಡುವೆನೆ ? ನಿಜ ವಾಗಿಯೂ ನನ್ನಲ್ಲಿ ಬಂದು ಕೇಳಿದವನು ಪಕ್ವತನು. ರಾಜಂ- ಪಕ್ವತನಿಗೇ ನೀನು ನಿನ್ನ ಮಗಳನ್ನು ಕೊಡುವುದಾಗಿ ವಾಗ್ದಾನ ಮಾಡಿದುದು ?