ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೨೦

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, ೬೨.] ದಶಮಸ್ಕಂಧವು. ೨೧೯೧ ಬಂದು, ನನ್ನನ್ನು ಮುತ್ತಿಕ್ಕಿ,ಒಂದಾವರ್ತಿ ನನಗೆ ತನ್ನ ಅಧರಾಮೃತವನ್ನೂ ಪಾನಮಾಡಿಸಿ, ನನ್ನನ್ನು ಹೀಗೆ ವ್ಯಸನಸಮುದ್ರದಲ್ಲಿ ಮುಳುಗಿಸಿಹೋಗಿರು ವನು. ಅವನು ಯಾವನೋ, ಎಲ್ಲಿರುವನೋ ತಿಳಿಯದೆ ನನ್ನ ಮನಸ್ಸು ಕಳ ನಳಿಸುತ್ತಿರುವುದು.” ಎಂದಳು. ಅದಕ್ಖಾ ಚಿತ್ರಲೇಖೆಯು” ಸಖಿ ! ಚಿಂತಿ ಸಬೇಡ : ನಿನ್ನ ವ್ಯಸನವನ್ನು ನಾನು ಹೇಗಾದರೂ ನೀಗಿಸುವೆನು, ನಿನ್ನ ಮನಸ್ಸನ್ನು ಮೋಸಗೊಳಿಸಿದ ಆ ಪುರುಷನು ಮೂರುಲೋಕಗಳಲ್ಲಿ ಎಲ್ಲಿದ್ದ ರೂ ನಿನ್ನಲ್ಲಿಗೆ ಕರೆತಂದು ಸೇರಿಸುವೆನು, ಆದರೆ ಇ೦ತವನೇ ನಿನ್ನ ಮನಃ ಪ್ರಿಯನೆಂಬುದನ್ನು ಮಾತ್ರ ಸೀನು ನನಗೆ ಸೂಚಿಸಬೇಕು.”ಎಂದಳು. ಆಕೆ ಯು ಚಿತ್ರಲೇಖನದಲ್ಲಿ ಬಹಳ ನೈಪುಣ್ಯವುಳ್ಳವಳಾದುದರಿಂದ, ಚಿತ್ರಪಟ ವನ್ನು ತೆಗೆದು, ಅದರಲ್ಲಿ, ದೇವ, ದಾನವ, ಸಿದ್ಧ, ಗಂಧ, ವಿದ್ಯಾಧರ, ಪನ್ನ ಗೆ, ಚಾರಣ, ಯಕ್ಷಾದೇವಜಾತಿಯಲ್ಲಿರುವ ಪ್ರಸಿದ್ದ ಪುರುಷರ ಭಾವ ಚಿತ್ರಗಳನ್ನೂ, ಭೂಲೋಕದಲ್ಲಿ ಸೌಂದಯ್ಯಾತಿಶಯದಿಂದ ಪ್ರಸಿದ್ಧರಾದ ರಾಜಕುಮಾರರ ಭಾವಚಿತ್ರಗಳನ್ನೂ ಬರೆದು ತೋರಿಸುತ್ತ ಬಂದಳು, ಮು ಖ್ಯವಾಗಿ ಮನುಷ್ಯರಲ್ಲಿ ಕೃಷಿ ಕುಲದವರನ್ನೂ, ವಸುದೇವನನ್ನೂ, ಅವನ ಮಕ್ಕಳಾದ ರಾ ಮಕೃಷ್ಣರನ್ನೂ , ಪ್ರದ್ಯುಮ್ನ ನನ್ನೂ ಬರೆದುತೋರಿಸಿದಳು. ಪ್ರದನ್ನು ನನ್ನು ನೋಡುವಾಗ, ಆ ಉಷೆಗೆ, ತಾನು ಸ್ವಪ್ನದಲ್ಲಿ ಕಂಡ ಪುರುಷನ ರೂಪಸಾದೃಶ್ಯವು ಮನಸ್ಸಿಗೆ ತೋರಿ ಸ್ವಲ್ಪವಾಗಿ ಲಜ್ಜೆಯು ಅಂಕುರಿಸುತ್ತ ಬಂದಿತು. ಆಮೇಲೆ ಚಿತ್ರಲೇಖೆಯು ಅವನ ಮಗನಾದ ಅನಿ ರುದ್ಧನ ರೂಪವನ್ನೂ ಚಿತ್ರಿಸಿದಳು. ಆರೂಪವನ್ನು ನೋಡಿದಾಗ ಉಷೆಯ ಸಂತೋಷವನ್ನು ಕೇಳಬೇಕೆ ! ಮೋಹದಿಂದಲೂ, ಲಜ್ಜೆಯಿಂದಲೂ, ಮೈ ಮರೆತು, ಮಾತಾಡಲಾರದೆ ತಲೆಯನ್ನು ತಗ್ಗಿಸಿ ಸ್ವಲ್ಪ ಹೊತ್ತಿನವರೆಗೆ ಸು ಮ್ಮನಿದ್ದಳು. ಆಮೇಲೆ ಥೈಲ್ಯವನ್ನು ತಂದುಕೊಂದು, ಮಂದಹಾಸಪೂರ ಕವಾಗಿ ಸಖಿಯನ್ನು ಕುರಿತು ಸಖ! ಇವನೇ! ಇವನನ್ನೇ ನಾನು ಕನಸಿನಲ್ಲಿ ನೋಡಿದುದು” ಎಂದಳು. ಚಿತ್ರಲೇಖೆಯು ತನ್ನ ಸಖಿಗೆ ಅನಿರುದ್ಯನಲ್ಲಿ ಆನು ರಾಗವು ಹುಟ್ಟಿರುವುದನ್ನು ತಿಳಿದು, ಒಡನೆಯೇ ಆಕಾಶಮಾರ್ಗದಿಂದ ಹೊರ ಟು, ಕೃಷ್ಣರಕ್ಷಿತವಾದ ದ್ವಾರಕಾಪುರಿಗೆ ಬಂದು, ಅಲ್ಲಿ ತನ್ನ ಮಾಯೆ