ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೨೨

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, ೬೨] ದಶಮಸ್ಕಂಧವು. ೨೧೯೩ ಳ ವಿಷಯದಲ್ಲಿ ರಾಜದೂತರು ಹೇಳುತ್ತಿರುವ ಅಪವಾದವನ್ನು ಕೇಳಿದೊಡ ನೆ, ಚಿಂತಾಕುಲನಾಗಿ, ಅಲ್ಲಿಂದ ಹೊರಟು ಕನ್ಯಾಂತಃಪುರಕ್ಕೆ ಬಂದು, ಅಲ್ಲಿ ಅನಿರುದ್ಧನನ್ನು ಕಂಡನು. ಸಾಕ್ಷಾನನ್ಮಥಕುಮಾರನಾದ ಆ ಅನಿರುದ್ಧ ನ ಅದ್ಭುತಸೌಂದಠ್ಯವನ್ನು ಕೇಳಬೇಕೆ ? ಶ್ಯಾಮಲವಾದ ದೇಹಕಾಂತಿ! ಲೋಕಸುಂದರವಾದ ದಿವ್ಯಮೂರ್ತಿ ನಡುವಿನಲ್ಲಿ ಪೀತಾಂಬರದ ದಟ್ಟೆ!ಕಮ ಲದಂತೆ ಕಣ್ಣು' ನೀಡಿದ ತೋಳುಗಳು: ಕಿವಿಯಲ್ಲಿ ಕುಂಡಲಗಳು ! ಕುಂಡ ಲಕಾಂತಿಯಿಂದಲೂ, ಮುಂಗುರುಳುಗಳಿಂದಲೂ, ಮುಗುಳ್ಳ ಗೆಯಿಂದಲೂ, ಅಂದವೇರಿದ ಮುಖದ ಸೊಗಸು!ಹೀಗೆ ದಿವಸುಂದರಮೂರ್ತಿಯಾದ ಅನಿ ರುದ್ಧನು, ಅಲ್ಲಿ ಉಷೆಯೊಡನೆ ವಿನೋದದಿಂದ ಪಗಡೆಯಾಡುತ್ತಿ ದ್ದನು. ಆ ಉಷೆಯ ಮೈಮೇಲಿನ ಕುಂಕುಮದ ರೇಖೆಯೆಲ್ಲವೂ ಅವನ ಮೈ ಮೇಲೆ ಕಾಣುತ್ತಿರುವುದು, ಅವಳ ಸ್ವನಕುಂಕುಮದಿಂದ ಲೇಪಿತವಾದ ಮಲ್ಲಿಗೆಯ ಹಾರವು ಇವನ ಕಂಠದಲ್ಲಿ ತೂಗಾಡುತ್ತಿರುವುದು, ಹೀಗೆ ಆಸಿ ರುದ್ಧ ನು ಯಾರಿಗೂ ತಿಳಿಯದಂತೆ ಬಂದು, ತನ್ನ ಮಗಳೊಡನೆ ಸರಸವಾಡು ದನ್ನು ಕಂಡು, ಬಾಣಾಸುರನಿಗೆ ಅತ್ಯಾಶ್ರವುಂಟಾಯಿತು. ಒಡನೆಯೇ ಬಾ ಇನು, ಆಯುಧಪಾಣಿಗಳಾದ ಭಟರನ್ನು ಕರೆದು ಅನಿರುದ್ಧನನ್ನು ಕೊಲ್ಲುವು ದಕ್ಕಾಗಿ ಪ್ರೇರಿಸಿದನು. ಅನಿರುದ್ಧನೂ ಸಮೀಪದಲ್ಲಿದ್ದ ಲೋಹಮಯ ವಾದ ಪರಿಫುವೊಂದನ್ನು ಕೈಗೆತ್ತಿಕೊಂಡು, ದಂಡಧಾರಿಯಾದ ಯಮ ನಂತೆ ಅವರನ್ನು ಕೊಲ್ಲುವುದಕ್ಕೆ ಸಿದ್ಧನಾಗಿ ನಿಂತನು, ಕಾಡಿನಲ್ಲಿ ಕೊಬ್ಬಿಬೆ ಳೆದ ಒಂದಾನೊಂದು ಕಾಡುಹಂದಿಯು, ತನ್ನನ್ನು ಕಚ್ಚುವುದಕ್ಕಾಗಿ ಸುತ್ತಿ ಮುತ್ತಿಬರುತ್ತಿರುವ ನಾಯಿಗಳನ್ನು ಹೇಗೋಹಾಗೆ, ಅನಿರುದ್ಧನು ತನ್ನನ್ನು ಹಿಡಿಯುವುದಕ್ಕಾಗಿ ಬಂದ ಆ ಭಟರೆಲ್ಲರನ್ನೂ ನಿಮಿಷ ಮಾತ್ರದಲ್ಲಿ ಧ್ವಂಸ ಮಾಡಿಬಿಟ್ಟನು. ಅನೇಕರು ತಲೆತಪ್ಪಿಸಿಕೊಂಡು ಓಡಿಹೋದರು. ಕೆಲವರು ಅಲ್ಲಿಯೇ ಕೈ ಕಾಲುಮುರಿದು ಕೆಳಗೆ ಬಿದ್ದರು. ಹೀಗೆ ತನ್ನ ಸೈನ್ಯವೆಲ್ಲವೂ ಹತ ವಾಗುತ್ತಿರುವುದನ್ನು ನೋಡಿ ಬಾಣಾಸುರನು, ಕೋಪದಿಂದ ನಾಗಪಾಶವ ನ್ನು ಪ್ರಯೋಗಿಸಿ, ಅದರಿಂದ ಅನಿರುದ್ಧನನ್ನು ಬಂಧಿಸಿಬಿಟ್ಟನು. ಈ ವಿಚಾರ ವನ್ನು ಕೇಳಿ ಉಷೆಯು, ಮಹಾದುಃಖದಿಂದ ಕೊರಗುತ್ತ ಧಾರೆಧಾರೆ