ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೨೫

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೯೩ ಶ್ರೀಮದ್ಭಾಗವತವು [ಅಧ್ಯಾ, ೬೩, ಕತ್ತರಿಸಿ ಕೆಡಹಿದುದಲ್ಲದೆ, ಮೇಲೆಮೇಲೆ ಬಾಣವರ್ಷದಿಂದ, ಆ ಬಾಣಾ ಸುರನ ರಥ, ರಥಾಶ್ವ, ಸಾರಥಿಗಳೆಲ್ಲವನ್ನೂ ಧ್ವಂಸಮಾಡಿ, ಜಯಸೂಚಕ ವಾದ ಶಂಖಧ್ವನಿಯನ್ನೂ ಮಾಡಿದನು. ಇಷ್ಟರಲ್ಲಿ ಬಾಣಾಸುರನ ತಾಯಿ ಯಾದ ಕೋಟಕಿಯೆಂಬವಳು ತನ್ನ ಮಗನಿಗೆ ಕೃಷ್ಣನ ಕೈಯಿಂದುಂಟಾ ಗುವ ಮರಣವನ್ನು ತಪ್ಪಿಸಬೇಕೆಂಬ ಉದ್ದೇಶದಿಂದ, ತಲೆಯನ್ನು ಕೆದರಿ ಕೊಂಡು, ಮೈಮೇಲೆ ಬಟ್ಟೆಯಿಲ್ಲದೆ ಓಡಿಬಂದು, ಕೃಷ್ಣನ ಮುಂದೆ ನಿಂತಳು. ಈ ಆಭಾಸವನ್ನು ನೋಡಲಾರದೆ ಕೃಷ್ಣನು, ಹಿಮ್ಮೊಗವಾಗಿ ತಿರುಗಿ ನಿಂತಿದ್ದಾಗ, ಬಾಣಾಸುರನು ತಲೆತಪ್ಪಿಸಿಕೊಂಡು ಓಡಿಹೋಗಿ ತನ್ನ ಪಟ್ಟಣದಲ್ಲಿ ಸೇರಿಕೊಂಡನು. ಇಷ್ಟರಲ್ಲಿ ಇತ್ತಲಾಗಿ ರುದ್ರನು ತನ್ನ ಭೂತಗಣಗಳೆಲ್ಲವೂ ಕೃಷ್ಣನಿಂದ ಪರಾಜಿತವಾಗಿ ಓಡಿ ಹೋದುದನ್ನು ಸಹಿಸಲಾರದೆ, ಮಾಹೇಶ್ವರರವೆಂಬ ಮಹಾಭಯಂಕರವಾದ ಒಂಬಾ ನೊಂದುಜ್ವರವನ್ನು ಕೃಷ್ಣನಮೇಲೆ ಪ್ರಯೋಗಿಸಿದನು, ಆ ಜ್ವರವು ಮೂರು ತಲೆಗಳಿಂದಲೂ, ಮರು ಪಾದಗಳಿಂದಲೂ ಕೂಡಿದ ಭಯಂ ಕರವಾದ ಪುರುಷಾಕೃತಿಯನ್ನು ತಾಳಿ, ಹತ್ತು ದಿಕ್ಕುಗಳನ್ನೂ ಏಕಕಾಲದಲ್ಲಿ ದಹಿಸುವಂತೆ ಜ್ವಾಲೆಯನ್ನೆ ರಚುತ್ಯ, ಕೃಷ್ಣನನ್ನಿ ದಿರಿಸಿ ಬಂದಿತು. ಆಗಲೇ ಕೃಷ್ಣನು, ಆದನ್ನಡಗಿಸುವುದಕ್ಕಾಗಿ ವೈಷ್ಣವಜ್ರರವನ್ನು ಕಳು ಹಿಸಿದನು, ಮಾಹೇಶ್ವರ ವೈಷ್ಣವಜ್ರರಗಳೆರಡೂ ಬಹಳ ಹೊತ್ತಿನವರೆಗೆ ಒಂದಕ್ಕೊಂದು ಹೆಣಗಾಡುತ್ತಿದ್ದುವು. ಕೊನೆಗೆ ವೈಷ್ಟವಜ್ವರದ ವೇಗ ವನ್ನು ತಡೆಯಲಾರದೆ ಮಾಹೇಶ್ವರಜ್ವರವು, ದೈನ್ಯದಿಂದ ಕೂಗಿಡುತ್ಯ, ಆಗ ತನಗೆ ಅಭಯವನ್ನು ಕೊಡತಕ್ಕವರು ಬೇರೆ ಯಾರೂ ಇಲ್ಲದುದನ್ನು ನೋಡಿ, ಭಯದಿಂದ ಕೃಷ್ಣನಲ್ಲಿಯೇ ಶರಣಾರ್ಥಿಯಾಗಿ ಬಂದು, ಅಂಜಲಿಬಂಧ ಪೂರೈಕವಾಗಿ ಹೀಗೆಂದು ಸೋತ್ರಮಾಡತೊಡಗಿತು. “ಓ ದೇವಾ ! ಅನಂತಶಕ್ತಿಯುಳ್ಳವನಾಗಿಯೂ, ಸತ್ಯೇಶ್ವರನಾಗಿಯೂ, ಸಮಸ್ತಭೂತ ಗಳಿಗೂ ಅಂತರಾತ್ಮನಾಗಿಯೂ,ಕೇವಲ ಜ್ಞಾನಮಯನಾಗಿಯೂ,ಲೋಕದ ಸೃಷ್ಟಿ ಸ್ಥಿತಿಸಂಹಾರಗಳಿಗೆ ಕಾರಣನಾಗಿಯೂ, ವೇದೈಕಗೋಚರನಾದ ಬ್ರಹ್ಮಸ್ವರೂಪನಾಗಿಯೂ, ಹಸಿವು, ಬಾಯಾರಿಕೆ, ಶೋಕ, ಮೋಹ ಜರಾ