ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೩೦

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, ೬೩.] ದಶಮಸ್ಕಂಥವು. ೨೧೪೯ ಕೃತಿಯು ಲೋಕಮಯವಾಗಿರುವುದು, ಅಂತಹ ನೀನು ಯದುಕುಲ ದಲ್ಲಿ ಅವತರಿಸಿರುವುದು ಥರ ಮರಾದೆಯನ್ನು ರಕ್ಷಿಸಿ ಲೋಕವನ್ನು ಕ್ಷೇಮ ದಿಂದಿರಿಸುವುದಕ್ಕಾಗಿಯೇ ಹೊರತು ಬೇರೆಯಲ್ಲ. ಈ ಅವತಾರದಲ್ಲಿಯೂ ನಿನ್ನ ಸತ್ವಜ್ಞತ್ಯಾದಿಗುಣಗಳಿಗೆ ಏನೂ ಕೊರತೆಯಿರುವುದಿಲ್ಲ. ಲೋಕ ಪಾಲಕರಾದ ನಾವೆಲ್ಲರೂ ನಿನಗಥೀನರಾಗಿ ಕಾಕ್ಯಗಳನ್ನು ನಡೆಸತಕ್ಕವರೇ ಹೊರತು ಸ್ವತಂತ್ರರಲ್ಲ. ಈ ಜಗತ್ತಿಗೆ ಮೂಲಕಾರಣನಾದ ಆದಿಪುರು ಷನು ನೀನೊಬ್ಬನೇ ! ಮತ್ತು ಈ ಪ್ರಪಂಚವೆಲ್ಲವೂ ನಿನ್ನೊಬ್ಬನ ಸ್ವರೂ ಪವೇ ! ನಿನಗೆ ಕಾರಣವಸ್ತುವು ಬೇರೊಂದಿಲ್ಲ! ಈ ಪ್ರಪಂಚವನ್ನು ನಿರ್ಮಿ ಸಿದವನೂ, ಈ ಪ್ರಪಂಚರೂಪದಿಂದ ತೋರತಕ್ಕವನೂ ನೀನೇ ! ಆದುದ ರಿಂದ ಈ ಜಗತ್ತಿನ ನಿಮಿತ್ತೋಪದಾನಕಾರಣಗಳೆರಡೂ ನೀನೇ ! ನೀನು ಜ್ಞಾನಸ್ವರೂಪನಾದುದರಿಂದ, ಜಡಪ್ರಕೃತಿಗಿಂತಲೂ ಬೇರೆಯಾದವನು. ಜಾಗರ ಸ್ವಪ್ನ ಸುಷುಪ್ತಿಗಳೆಂಬ ಅವಸ್ಥಾತ್ರಯವನ್ನೂ ಮೀರಿದವನಾದು ದರಿಂದ ಜೀವಕ್ಕಿಂತಲೂ ವಿಲಕ್ಷಣನು. ಸರೈಶ್ಚರನು, ನೀನು ಆಕಾಶ ದಂತೆ ನಿರ್ವಿಕಾರನೆಂಬುದೂ, ಜಗತ್ತಿಗೆ ಉಪಾದಾನಕಾರಣನಾಗಿ ವಿಕಾ ರವನ್ನು ಹೊಂದುತ್ತಿರುವೆಯೆಂಬುದೂ ಪರಸ್ಪರವಿರುದ್ಧವಾಗಿದ್ದರೂ, ಪ್ರ ಕೃತಿಪುರುಷರಲ್ಲಿರುವ ಸಮಸ್ತಗುಣಗಳನ್ನೂ, ಪ್ರಸಿದ್ಧಿಗೊಳಿಸುವುದಕ್ಕಾಗಿ ನಿನ್ನ ಸಂಕಲ್ಪದಿಂದ ನೀನೇ ಹಾಗೆ ತೋರುವೆ. ಈನಿನ್ನ ಸತ್ವಶಕ್ತತ್ವವನ್ನು ತಿಳಿ ಸುವುದಕ್ಕೆ ವೇದಾಂತವಾಕ್ಯಗಳಲ್ಲದೆ ಬೇರೆ ಪ್ರಮಾಣಗಳಿಲ್ಲ. ಸೂರನ ಶಕ್ತಿ ಯಿಂದಲೇ ಹೊರಕ್ಕೆ ಕಾಣುತ್ತಿರುವ ಮೇಘಜಗಳು ಅವನಿಗೆ ಅಡ್ಡಲಾಗಿ ಬಂದಾಗಲೂ, ಅದರಿಂದ ಅವನು ಮರೆಸಲ್ಪಡದೆ ಅದರ ಒಳಗೂ ಹೊರಗೂ, ತನ್ನ ಕಾಂತಿಯನ್ನು ಪ್ರಸರಿಸಿ, ಇತರರೂಪಗಳನ್ನು ಪ್ರಕಾಶಪಡಿಸುವಂತೆ, ನೀನೂಕೂಡ ಸತ್ಯಾದಿಗುಣಗಳಿಂದ ಮರೆಸಲ್ಪಟ್ಟಂತೆ ತೋರಿದರೂ, ಆದ ರಿಂದ ನಿನ್ನ ಸ್ವರೂಪಸ್ವಭಾವಗಳು ಮರೆಸಲ್ಪಡದೆ,ನೀನ್ನು ಪ್ರಕೃತಿಮೊದಲಾ ದುವುಗಳನ್ನು ಪ್ರಕಾಶಪಡಿಸುವೆ ! ಮತ್ತು ನೀನು ಸ್ವಯಂಪ್ರಕಾಶವುಳ್ಳವ ನು, ನಿನ್ನ ಮಾಯೆಯಿಂದ ಮೋಹಿತರಾದವರೇ, ಮನೆಮಂದಿಮಕ್ಕಳಲ್ಲಿ ತಗು ಲುಬಿದ್ದು, ದುಃಖಸಮುದ್ರದಲ್ಲಿ ಮುಳುಗಿ ತೇಲುತ್ತಿರುವರು. ನಿರತಿಶಯಕ್ಕ 139 B