ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೩೮

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೭. ಅಧ್ಯಾ, ೬.೪.] ದಶಮಸ್ಕಂಧವು. ಜಗನ್ನಾ ಥಾ! ಗೋವಿಂದಾ:ಪುರುಷೋತ್ತಮಾ! ನಾರಾಯಣಾ!ಹೃ ಷೀಕೇಶಾ! ಪುಣ್ಯಶೈಕಾ ! ಅಚ್ಯುತಾ ! ಅವ್ಯಯಾ ! ಕೃಷ್ಣಾ ! ಪ್ರ ಭೂ! ಇನ್ನು ದೇವಲೋಕಕ್ಕೆ ಹೋಗುವುದಕ್ಕೆ ನನಗೆ ಅನುಜ್ಞೆಯನ್ನು ಕೊಡಬೇಕು! ನಾನು ಅಲ್ಲಿದ್ದರೂ, ನನ್ನ ಮನಸ್ಸು ಯಾವಾಗಲೂ ನಿನ್ನ ಪಾದಾರವಿಂದವನ್ನು ಧ್ಯಾನಿಸುವಂತೆ ಅನುಗ್ರಹಿಸಬೇಕು. ಸತ್ವವನ್ನು ರೀರಕನಾದ ನಿನಗೆ ನಮಸ್ಕಾರವು ! ಅನಂತಶಕ್ತಿಯುಳ್ಳ ಬ್ರಹ್ಮ ಸ್ವರೂಪ ನಾದ ನಿನಗೆ ನಮಸ್ಕಾರವು ! ಕೃಷ್ಣಾ ! ವಾಸುದೇವಾ ! ಯೋಗೀ ಶ್ವರಾ! ನಿನಗೆ ನಮಸ್ಕಾರವು” ಎಂದು ಹೇಳಿ, ಆ ದಿವ್ಯಪುರುಷನು, ಕೃಷ್ಣ ನಿಗೆ ಪ್ರದಕ್ಷಿಣನಮಸ್ಕಾರಗಳನ್ನು ಮಾಡಿ, ಅವನ ಆಜ್ಞೆಯನ್ನು ಪಡೆದು, ಅಲ್ಲಿದ್ದ ಜನರೆಲ್ಲರೂ ನೋಡುತ್ತಿದ್ದ ಹಾಗೆಯೇ ತನಗಾಗಿ ಸಿದ್ಧವಾಗಿ ಕಾ ಡಿದ್ದ ಒಂದು ದಿವ್ಯವಿಮಾನವನ್ನೇರಿ, ಅಂತರಿಕ್ಷಮಾರ್ಗವಾಗಿ ಹೊರಟು ಹೋದನು. ಆಮೇಲೆ ಇತ್ತಲಾಗಿ ಬ್ರಾಹ್ಮಣಪ್ರಿಯನಾಗಿಯೂ, ಧಮ್ಮಸ್ಸ ರೂಪನಾಗಿಯೂ ಇರುವ ಶ್ರೀ ಕೃಷ್ಣನು, ರಾಜರೆಲ್ಲರಿಗೂ ಸದೊಥೆ ಯನ್ನು ಮಾಡುವ ಉದ್ದೇಶದಿಂದ, ಅಲ್ಲಿದ್ದ ತನ್ನ ಸಹಚರರನ್ನು ನೋಡಿ, ( ಆಹಾ ! ಮಿತ್ರರೇ! ಈ ರಾಜನ ಅವಸ್ಥೆಯನ್ನು ನೋಡಿದಿರಾ ! ಬ್ರಹ್ಮ ಸ್ವವೆಂಬುದು ಕೇವಲ ವಿಷಪ್ರಾಯವು ! ಅದನ್ನು ಸ್ವಲ್ಪ ಮಾತ್ರ ಭುಜಿಸಿದ `ರೂ, ಅದು ಆಗ್ನಿ ಯಂತೆ ಎಂತಹ ತೇಜಸ್ವಿಗಳಿಗಾದರೂ ಜೀರ್ಣಿಸಿಕೊ ಳ್ಳುವುದು ಬಹಳ ಕಷ್ಟವು. ಹೀಗಿರುವಾಗ ತಾವೇ ಪ್ರಭುಗಳೆಂಬ ಹೆಮ್ಮೆ ಯಿಂದ ಬೀಗುತ್ತಿರುವ ರಾಜರಿಗೆ, ಆದರಿಂದುಂಟಾಗುವ ಅಪಾಯವನ್ನು ಹೇಳತಕ್ಕುದೇನು ? ಹಾಲಾಹಲವನ್ನೂ ಕೂಡ ನಾನು ಅಷ್ಟು ಕೂರವಿ ಷವೆಂದೆಣಿಸಲಾರೆನು! ಏಕೆಂದರೆ, ಅದಕ್ಕೆ ಪ್ರತೀಕಾರವುಂಟು, ಬ್ರಹ್ಮಪ್ಪ ವೆಂಬುದು ಮಹಾವಿಷವು, ಇದಕ್ಕೆ ಭೂಮಿಯಲ್ಲಿ ಯಾವವಿಧದಿಂದಲೂ ಪ್ರತೀಕಾರವಿಲ್ಲ. ಇದಲ್ಲದೆ, ವಿಷವೆಂಬುದು ತಿಂದವರನ್ನು ಮಾತ್ರ ಕೊಲ್ಲು ವುದು, ಬ್ರಹ್ಮಸ್ವವೆಂಬ ವಿಷವು ವಂಶವನ್ನೇ ನಿರ್ಮೂಲಮಾಡುವುದು. ಅಗ್ನಿ ಯನ್ನು ನೀರಿನಿಂದ ನಂದಿಸಬಹುದು. ಬ್ರಹ್ಮಸ್ವವೆಂಬ ಅಗ್ನಿ ಯನ್ನು ನಂದಿಸುವುದಕ್ಕೂ ಉಪಾಯವಿಲ್ಲ. ಅದು ಕುಲವನ್ನೇ ದಹಿಸುವುದು.ಬ್ರಾಹ್ಮ