ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೪೨

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, ೬೫.] ದಶಮಸ್ಕಂಧವು. ೨೨೧೧ ಆಷ್ಟು ಚಕ್ಕಂದವಾಗಿ ಮಾತಾಡಿದಮೇಲೆ ಏನೂ ತಿಳಿಯದ ಹಳ್ಳಿಯ ಹೆಂಗಸ ರಾದನಾವು ಹೇಗೆತಾನೇ ನಂಬದಿರಬಹುದು? ಮನಸ್ಸನ್ನು ಒಂದು ನೆಲೆಯಲ್ಲಿ ನಿಲ್ಲಿಸಲಾರದೆ, ಉಪಕಾರಸ್ಕರಣೆಯೂ ಇಲ್ಲದಿರುವ ಆ ಕೃಷ್ಣನ ಮಾತುಗ ಳನ್ನು ಲೋಕವ್ಯವಹಾರದಲ್ಲಿ ಚತುರರೆನಿಸಿಕೊಂಡ ಆ ಪುರಸ್ತಿಯರು ಹೇಗೆ ನೀಜವೆಂದು ನಂಬುವರೋ ಕಾಣೆವು!” ಎಂದು ಹೇಳುತ್ತಿರುವಾಗ, ಮತ್ತೆ ಕೆಲವು ಸ್ತ್ರೀಯರು, ಆ ಮಾತಿಗಡ್ಡವಾಗಿ ಏನಮ್ಮ ! ಅವನ ವಿಚಿತ್ರ ವಾದ ಮಾತುಗಳಿಗೂ, ಸುಂದರವಾದ ಅವನ ಮುಗುಳುನಗೆಗೂ, ಅಂದ ವಾಗಿ ಅವನ ನೋಟಕೂ ಎಂತವರು ತಾನೇ ಮರುಳಾಗದಿರುವರು ? ಗೋಪಿಯರೇ ! ಸಾಕುಬಿಡಿರಿ ! ಇನ್ನು ನಮಗೆ ಅವನ ಮಾತುಗಳಿಂದ ಪ್ರಯೋಜನವೇನು ? ಬೇರೇನಾದರೂ ಹೇಳಬೇಕಾದುಕಿದ್ದರೆ ಹೇಳಿರಿ! ನಾವಿಲ್ಲದೆ ಅವನಿಗೆ ಹೊತ್ತು ಹೋಗುವಂತೆ, ನಮಗೂ ಅವನಿಲ್ಲದಂತೆಯೇ ಹೊತ್ತು ಹೋಗಲಾರದೇನು?” ಎಂದರು. ಹೀಗೆ ಆ ಗೋಪಿಯರೆಲ್ಲರೂ ಕೃಷ್ಣನನ್ನು ಹಂಗಿಸುವನೆವದಿಂದ, ಅವನ ನಗೆನೋಟಗಳನ್ನೂ , ಅವನ ಮುದ್ದು ಮಾತುಗಳನ್ನೂ, ಅವನ ನಡೆನುಡಿಗಳನ್ನೂ , ಅವನ ದೇಹಾಲಿಂಗನ ಸೌಖ್ಯವನ್ನೂ ಸ್ಮರಿಸಿಕೊಂಡು ದುಃಖಿಸುತಿದ್ದರು. ಆಗ ಬಲರಾಮನು,ತನೊ ಡನೆ ಕೃಷ್ಣನು ಇವರಿಗಾಗಿ ಹೇಳಿದ್ದ ಸಂದೇಶವಾಕ್ಯಗಳನ್ನು ತಿಳಿಸಿ, ನಾನಾ ವಿಧಸಮಾ ಧಾನಗಳಿಂದ ಅವರ ದುಃಖೋಪಶಮನವನ್ನು ಮಾಡಿದನು. ಆಮೇಲೆ ಬಲರಾಮನು, ಅಲ್ಲಿ ಮೊದಲು ತನ್ನಲ್ಲಿ ಅನುರಕ್ತರಾಗಿದ್ದ ಕೆಲವು ಮಂದಿ ಗೋಪಿಯರಡನೆ ರಾತ್ರಿ ಕಾಲಗಳಲ್ಲಿ ಸರಸಗೋಷ್ಠಿಯನ್ನು ನಡೆ ಸುತ್ತ, ಚೈತ್ರ ವೈಶಾಖಮಾಸಗಳೆರಡನ್ನೂ ಆ ನಂದಗೋಕುಲದಲ್ಲಿಯೇ ಕಳೆದನು. ಆಗ ಬಲರಾಮನ ರಾತ್ರಿ ವಿಹಾರವೈಭವಗಳನ್ನು ಕೇಳಬೇಕೆ ? ಬಿಕ್ಕುಗಳೆಲ್ಲವೂ ಪೂರ್ಣಚಂದ್ರಕಲೆಗಳಿಂದ ಶೋಭಿಸುತ್ತಿರುವುವು! ನಾನಾ ಕಡೆಗಳಿಂದ ಕುಮುದಪುಷ್ಪಗಳ ಸುಗಂಧದೊಡನೆ ಮಂದಮಾರುತವು ಬೀಸುತ್ತಿರುವುದು, ಇಂತಹ ಕಾಲದಲ್ಲಿ ರಾಮನು,ಸೀಗಣಗಳೊಡನೆ ಯಮು ನಾತೀರದಲ್ಲಿ ವಿಹರಿಸುತ್ತಿದ್ದನು, ಆಗ ವರುಣದೇವನ ಪ್ರೇರಣೆಯಿಂದ ಮರದ ಪೊಟ್ಟರೆಗಳಲ್ಲಿ ತಾನಾಗಿ ಸ್ರವಿಸುತ್ತಿರುವ ವಾರುಣಿಯೆಂಬ ಮ