ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೫

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

soe ಶ್ರೀದುದ್ಭಾಗವತ [ಅಧ್ಯ. ೫. ಅವನಿಗೆ ಅಸಾಧ್ಯವಾಗಿರಲಿಲ್ಲ. ಹಾಗಿದ್ದರೂ ಆತನು ಮನುಷ್ಯಾವತಾರವನ್ನೇ ಅದಕ್ಕನುಗುಣವಾದ ನಟನೆಗಳನ್ನೇ ತೋರಿಸಬೇಕಾಗಿದ್ದುದರಿಂದ, ಆ ಕಾಲದೇಶಕ್ಕನುಗುಣವಾಗಿ ತಾನುಭೂಮಿಯಲ್ಲಿ ಅವತರಿಸಿದುದಕ್ಕೆ ಪ್ರಯೋ ಜನವೇನೆಂಬುದನ್ನು ವಿಚಾರಮಾಡಿ, ತನ್ನಲ್ಲಿ ತಾನು ಹೀಗೆಂದು ನಿಶ್ಚಯಿಸಿ ಕೊಂಡನು. ಮಗಧರಾಜನಾದ ಜರಾಸಂಧನು ಉತ್ತಮಕುಲದಲ್ಲಿ ಹುಟ್ಟಿ ದ ಅನೇಕರಾಜರ ಸೈನ್ಯಗಳನ್ನು ಸೇರಿಸಿಕೊಂಡು, ಈ ಪಟ್ಟಣಕ್ಕೆ ಮುತ್ತಿಗೆ ಹಾಕಿರುವನು. ರಥ, ಗಜ, ತುರಗ, ಪದಾತಿಗಳೆಂಬ ಚತುರಂಗಗಳಿಂದ ಕೂಡಿ ದ ಈ ಸೈನ್ಯವು, ಮೂರಕ್ಷೆಹಿಣಿಗಳವರೆಗೆ ಬಂದು ಸೇರಿರುವುದು, ಭೂ ಮಿಗೆ ಭಾರಭೂತವಾದ ಈ ಸೈನ್ಯವನ್ನು ನಾನು ಮೊದಲು ಧ್ವಂಸಮಾಡುವೆ ನು.ಆದರೆ ಜರಾಸಂಧನನ್ನು ಮಾತ್ರ ಈಗಲೇಕೊಂದುಬಿಡುವುದು ಸರಿಯಲ್ಲ. ಭೂಭಾರವನ್ನು ಪರಿಹರಿಸುವುದಕ್ಕಾಗಿಯೂ, ದುಷ್ಟರನ್ನ ಡಗಿಸಿ ಶಿಷ್ಯರನ್ನು ರಕ್ಷಿಸುವುದಕ್ಕೂ ನಾನು ಈ ಅವತಾರವನ್ನೇ ತಿರುವೆನು. ಇಷ್ಟೇ ಅಲ್ಲದೆ ಆ ಗಾಗ ಹೆಚ್ಚುತ್ತಿರುವ ಅಧರ್ಮವನ್ನ ಡಗಿಸಿ,ಧರ್ಮವನ್ನು ಹೆಚ್ಚಿಸುವುದೂ ಈ ನನ್ನ ಅವತಾರಕ್ಕೆ ಪ್ರಯೋಜನವಾಗಿರುವುದು.ಈ ಉದ್ದೇಶದಿಂದಲೇ ಹಿಂದೆ ಯೂ ನಾನು ಮತ್ಯಕೂರ್ಮಾದೃವತಾರಗಳನ್ನೆತ್ತಿದೆನು. ಈಗಲೇ ಈ ಜರಾಸಂಧನನ್ನು ಕೊಂದಪಕ್ಷದಲ್ಲಿ, ಭೂಭಾರವನ್ನು ಸಂಪೂರ್ಣವಾಗಿ ಪರಿ ಹರಿಸಿದಂತಾಗುವುದಿಲ್ಲ. ಹಾಗಿಲ್ಲದೆ ಈಗ ಇಲ್ಲಿ ಬಂದ ಸೈನ್ಯಗಳನ್ನು ಸಂಹರಿಸಿ, ಆ ಜರಾಸಂಧನನ್ನು ಮಾತ್ರ ಕೊಲ್ಲದೆ ಬಿಟ್ಟಿದ್ದ ಪಕ್ಷದಲ್ಲಿ, ಅವನು ತಿರುಗಿತಿರುಗಿ ಸೈನ್ಯಗಳನ್ನು ತರುತ್ತಿರುವನು. ಆಸೈನ್ಯಗಳಲ್ಲವನ್ನೂ ಕೊಂದ ಮೇಲೆಯೇ ನನ್ನ ಅವತಾರಪ್ರಯೋಜನವು ಪೂರ್ತಿಯಾಗುವುದು. ಆದುದ ರಿಂದ ಈ ಜರಾಸಂಧನನ್ನು ಮಾತ್ರ ಈಗಲೇ ಕೊಲ್ಲದೆ, ಅವನು ತನ್ನ ಸಹಾ ಯಕ್ಕಾಗಿ ತರತಕ್ಕ ಸೈನ್ಯಗಳೆಲ್ಲವನ್ನೂ ಕೊಲ್ಲುತ್ತಾ ಬರುವೆನು” ಎಂದು ಮ ನಸ್ಸಿನಲ್ಲಿ ಯೋಚಿಸುತ್ತಿರುವಾಗಲೇ, ಆಕಾಶದಲ್ಲಿ, ಸಾಲಂಕಾರಭೂಷಿತ ಗಳಾಗಿ, ಸಾರಥಿ ಮೊದಲಾದ ಸಮಸ್ತಸಾಧನಗಳೊಳಗೂಡಿ,ಸೂರತೇಜಸ್ಸಿ ನಿಂದ ಜ್ವಲಿಸುತ್ತಿದ್ದ ಎರಡುರಥಗಳು ಕಾಣಿಸಿಕೊಂಡುವು ಮತ್ತು ಆರಥದ ಕ್ಲ ಪುರಾತನಗಳಾದ ದಿವ್ಯಾಯುಧಗಳೂ ಕಾಣಿಸಿದುವು. ಆದನ್ನು ನೋಡಿ ಕೃ