ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೬೫

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೩೪ ಶ್ರೀಮದ್ಭಾಗವತವು [ಅಧ್ಯಾ, ೬೯. ಇದಕ್ಕಿಂತಲೂ ನನಗೆ ಇನ್ನೇನಾಗಬೇಕು ? ಇನ್ನು ಕೃತಾದ್ಧನಾದೆನು. ನಾನು ಎಂದೆಂದಿಗೂ ಈ ನಿನ್ನ ಪಾದಯುಗಳವನ್ನು ಮರೆಯದೆ ಧ್ಯಾನಿ ಸುತ್ತ, ಲೋಕಸಂಚಾರವನ್ನು ಮಾಡುವಂತೆ ಅನುಗ್ರಹಿಸಬೇಕು. ಇಷ್ಟೆ ನನ್ನ ಕೋರಿಕೆ! "ಎಂದನು. ನಾರದನು ಇಷ್ಟು ಮಾತ್ರವನ್ನು ಹೇಳಿ ಅಲ್ಲಿಂದ ಹೊರಟು ಬಿಟ್ಟನು. ಯೋಗೇಶ್ವರನಾದ ಕೃಷ್ಣನ ಮಾಯೆಯ ಪ್ರಭಾವವ ನ್ನು ಇನ್ನೂ ಚೆನ್ನಾಗಿ ತಿಳಿಯಬೇಕೆಂಬ ಉದ್ದೇಶದಿಂದ, ಆ ಕೃಷ್ಣನ ಬಾಲ್ಯ ಯರಲ್ಲಿ ಮತ್ತೊಬ್ಬಳಮನೆಗೆ ಪ್ರವೇಶಿಸಿದನು, ಅಲ್ಲಿ ಕೃಷ್ಣನು, ತನ್ನ ಪ್ರಿಯೆ ಯೊಡನೆಯೂ, ಉದ್ಧವನೊಡನೆಯೂ ಪಗಡೆಯನ್ನಾ ಡುತಿದ್ದನು. ನಾರದನು ಬಂದೊಡನೆ ಕೃಷ್ಣನು, ಪರಮಭಕ್ತಿಯಿಂದ ಇದಿರೆದ್ದು ಬಂದು, ಅವನಿಗೆ ಯಥೋಚಿತವಾದ ಅಸನಾದಿಗಳನ್ನು ಕೊಟ್ಟು ಸತ್ಕರಿಸಿ, ಆಗಲೇ ಹೊಸ ದಾಗಿ ಅವನನ್ನು ಕಂಡಂತೆ ನಟಿಸುತ್ತ “ ಓಹೋ ! ಯಾವಾಗ ಬಂದುದು! ಪೂರ್ಣಕಾಮರಾದ ನಿಮಗೆ ಅಕಿಂಚನರಾದ ನಮ್ಮಿಂದಾಗಬೇಕಾದುದೇ ನೂ ಇಲ್ಲ! ಹಾಗಿದ್ದರೂ ನೀವು ನಮ್ಮಲ್ಲಿಗೆ ಬಂದ ಉದ್ದೇಶವನ್ನು ತಿಳಿಸಬೇಕು. ನಮ್ಮ ಜನ್ಮವನ್ನು ಸಾರಕಗೊಳಿಸಬೇಕು” ಎಂದನು. ಈ ಮಾತನ್ನು ಕೇಳಿ ನಾರದನು, ತನ್ನಲ್ಲಿ ತಾನು ಆಶ್ಚಯ್ಯಪಡುತ್ತ, ಯಾವ ಮಾತನ್ನೂ ಆಡದೆ ಅಲ್ಲಿಂದೆದ್ದು, ಸಮೀಪದಲ್ಲಿದ್ದ ಮತ್ತೊಂದು ಮನೆಗೆ ಪ್ರವೇಶಿಸಿದನು. ಅಲ್ಲಿ ಕೃಷ್ಣನು ತನ್ನ ಬಾಲಕರನ್ನೂ, ಎಳಮಕ್ಕಳನ್ನೂ ಮುಚ್ಚಿಸಿ ಲಾಲಿಸು ತಿದ್ದನು. ಅಲ್ಲಿಯೂ ಕೃಷ್ಣನು ನಾರದನನ್ನು ಹೊಸದಾಗಿ ಕಂಡಂತೆ ಥಟ್ಟನೆ ಇದಿರೆದ್ದು ಸತ್ಕರಿಸಿ, ಕುಶಲ ಪ್ರಶ್ಯಾದಿಗಳನ್ನು ಕೇಳಿದಮೇಲೆ, ನಾರ ದನು ಅಲ್ಲಿಂದ ಹೊರಟು, ಮತ್ತೊಬ್ಬಳ ಮನೆಗೆ ಹೋದನು, ಅಲ್ಲಿ ಕೃ ಹೈನು ಅಭ್ಯಂಗನಕ್ಕಾಗಿ ಯತ್ನಿಸುತ್ತಿದ್ದನು. ಆದನ್ನು ಬಿಟ್ಟು, ಮತ್ತೊಂ ದು ಮನೆಗೆ ಹೋದಾಗ, ಅಲ್ಲಿ ಕೃಷ್ಣನು ಗೃಹಸ್ಥಾ ಯಲ್ಲಿ ಹೋಮಕಾರ ವನ್ನು ನಡೆಸುತಿದ್ದನು. ಅದನ್ನು ಬಿಟ್ಟು, ಮತ್ತೊಂದು ಮನೆಗೆ ಪ್ರವೇಶಿಸಿ ದಾಗ, ಅಲ್ಲಿ ಕೃಷ್ಣನು, ಪಂಚಮಹಾಯಜ್ಞಗಳನ್ನು ನಡೆಸುತ್ತಿದ್ದನು, ಹೀಗೆಯೇ ನಾರದನು ಒಂದೊಂದುಮನೆಯನ್ನು ಪ್ರವೇಶಿಸುವಾಗಲೂ, ಕೃಷ್ಣನು, ಒಂದುಮನೆಯಲ್ಲಿ ಬ್ರಾಹ್ಮಣಸಂತರ್ಪಣೆಯನ್ನು ನಡೆಸಿ ಆ ಶೇ