ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೮೩

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೨ ಶ್ರೀಮದ್ಭಾಗವತವು [ಅಧ್ಯಾ, ೬೧. ನಲ್ಲಿಯೇ ಆತನ ಅಂಗಸ್ಪರ್ಶಸೌಖ್ಯವನ್ನನುಭವಿಸುತ್ತ, ಮಂದಹಾಸವಿತಿ ವ್ಯವಾದ ತಮ್ಮ ದೃಷ್ಟಿಯಿಂದ ಅವನಿಗೆ ಸುಖಾಗಮನವನ್ನು ' ಕೇಳು ವಂತೆ ಆನಂದಪರವಶರಾಗಿ ನೋಡುತಿದ್ದರು, ಮತ್ತು ಅವರು, ಚಂದ್ರನನ್ನು ಬಳಸಿರುವ ನಕ್ಷತ್ರಗಳಂತೆ, ಆ ಕೃಷ್ಣನ ಸುತ್ತಲೂ ನೆರೆದು ಬರುತ್ತಿದ್ದ ಆತನ ಪತ್ನಿ ಯರನ್ನು ನೋಡಿ « ಆಹಾ ! ಇವರ ಭಾಗ್ಯವಲ್ಲವೇ ಭಾಗ್ಯವು! ಪುರುಷ ಶ್ರೇಷ್ಠ ನಾದ ಈ ಕೃಷ್ಣನು, ಮಂದಹಾಸದಿಂದಲೂ, ವಿಲಾಸವಿಶಿಷ್ಟ ವಾದ ನೋಟದಿಂದಲೂ ಆಗಾಗ ಇವರ ಕಣ್ಣಿಗೆ ಮಹೋತ್ಸವವವನ್ನುಂಟು ಮಾಡುತ್ತಿರುವನಲ್ಲವೆ? ಇವರು ಪೂರೈಜನ್ಮದಲ್ಲಿ ಯಾವಪುಣ್ಯವನ್ನು ಮಾಡಿ ದರೋ” ಎಂದು ತಮ್ಮೊಳಗೆ ತಾವು ಅವರನ್ನು ಕೊಂಡಾಡುತ್ತಿದ್ದರು. ಆ ಪಟ್ಟಣದಲ್ಲಿರುವ ಶಿಲ್ಪಿಗಳು, ವರ್ತಕರು, ಮುಂತಾದವರೆಲ್ಲರೂ, ತಮ ತಮಗೆ ಲಭಿಸಿದ ಉತ್ತಮವಸ್ತುಗಳನ್ನು ಕಾಣಿಕೆಯಾಗಿ ತಂದು ಕೃಷ್ಣನ ಪಾದಗಳಲ್ಲಿಟ್ಟು, ತಮ್ಮ ಜನ್ಮವು ಸಾರ್ಥಕವಾಯಿತೆಂದು ಭಾವಿಸಿ ಸಂತೋಷಿಸುತ್ತಿದ್ದರು. ಕೃಷ್ಣನು ಅರಮನೆಯ ಬಾಗಿಲಿಗೆ ಬಂದೊಡನೆ, ರಾಜಾಂತಃಪುರದ ಜನವೆಲ್ಲವೂ ಸಡಗರದಿಂದ ಇದಿರುಗೊಂಡು ಬಂದಿತು. ಅವರೆಲ್ಲರೊಡನೆ ಕೃಷ್ಣನು ಅರಮನೆಯನ್ನು ಪ್ರವೇಶಿಸಿದನು. ತನಗೆ ಸೋದ ರಳಿಯನೆನಿಸಿಕೊಂಡ ಲೋಕೇಶ್ವರನಾದ ಕೃಷ್ಣನನ್ನು ಕಂಡು ಕುಂತೀದೇ ವಿಯು ಸಂತೋಷದಿಂದ ಇದಿರೆದ್ದು ಬಂದು, ಅವನನ್ನು ಪ್ರೀತಿಯಿಂದಾಲಂ ಗಿಸಿಕೊಂಡಳು. ದಾಪದಿ, ಸುಭದ್ರೆ, ಮೊದಲಾದ ಅವಳ ಸೊಸೆಯರೂ, ಕೃಷ್ಣನನ್ನು ಯಥೋಚಿತವಾಗಿ ಪೂಜಿಸಿದರು, ಕೃಷ್ಣನು ತನ್ನ ಮನೆಗೆ ಬಂದನೆಂಬ ಸಂತೋಷದಿಂದ ಧರ್ಮರಾಜನಿಗೆ ಮೈಮರೆಯುವಂತಾಯಿತು. ಆತನನ್ನು ಮನೆಗೆ ಕರೆತಂದು ಯಾವವಿಧದಲ್ಲಿ ಸತ್ಕರಿಸಬೇಕೆಂದು ತೋರದೆ ಸುಮ್ಮನೆ ನಿಂತುಬಿಟ್ಟನು. ಅಲ್ಲಿ ಕೃಷ್ಣನು ತನ್ನ ಅತ್ತೆಯಾದ ಕುಂತೀದೇವಿಗೂ, ಇತರ ವೃದಯರಿಗೂ ನಮಸ್ಕರಿಸಿ, ಪ್ರೌಪದೀ ಸುಭದ್ರೆಯರನ್ನು ಪ್ರೀತಿಯಿಂದ ಮನ್ನಿಸಿದನು. ಆಗ ದಪದಿಯು, ಅತ್ತೆ ಯಾದ ಕುಂತಿಯ ಆಜ್ಞೆಯಿಂದ ಕೃಷ್ಣನ ಪತ್ನಿ ಯರಾದ, ರುಕ್ಷ್ಮಿಣಿ, ಸತ್ಯ ಭಾಮೆ, ಭದ್ರೆ, ಜಾಂಬವತಿ, ಕಾಳಿಂದಿ, ಮಿತ್ರವಿಂದೆ, ಲಕ್ಷ್ಮಣೆ, ನಾಗ್ನ