ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೮೫

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೫೪ ಶ್ರೀಮದ್ಭಾಗವತವು | [ಅಧ್ಯಾ.೭೨. ಇತರಪುರುಷಾ‌ಗಳನ್ನೂ ಸುಲಭವಾಗಿ ಪಡೆಯಬಲ್ಲರೇಹೊರತು, ನಿನ್ನಲ್ಲಿ ವಿಮುಖರಾದವರಿಗೆ ಯಾವ ಕೋರಿಕೆಯೂ ಕೈಗೂಡದು, ಆದುದರಿಂದ ಓ ದೇವದೇವಾ ! ನಿನ್ನ ಪಾದಸೇವಾಪ್ರಭಾವವೆಂತದೆಂಬುದು ಲೋಕದ ಸಮ ಸಜನಗಳಿಗೂ ತಿಳಿಯುವಂತೆ, ನಿನ್ನ ಭಕ್ತನಾದ ನನ್ನಲ್ಲಿ ಅನುಗ್ರಹವನ್ನು ತೋರಿಸಬೇಕು, ನಿನ್ನನ್ನೇ ನಂಬಿರತಕ್ಕ ನಮಗೂ, ನಿನ್ನಲ್ಲಿ ಉದಾಸೀನರಾದ ಕೌರವರಿಗೂ ಉಂಟಾಗುವ ಶುಭಾಶುಭತಾರತಮ್ಯಗಳನ್ನು ನೋಡಿ, ಲೋ ಕವೆಲ್ಲವೂ ನಿನ್ನ ಪಾದಸೇವಾಪ್ರಭಾವವೆಂತದೆಂಬುದನ್ನು ಚೆನ್ನಾಗಿ ತಿಳಿಯಲಿ! ಓ ಪ್ರಭೂ! ಸಮಸ್ತಕಲ್ಯಾಣಗುಣಪರಿಪೂರ್ಣನಾದ ಪರಬ್ರಹ್ಮವೇ ನೀನಾ ಗಿರುವೆ! ಮತ್ತು ನೀನು ಸಾಂತರಾತ್ಮನಾದುದರಿಂದ, ಪ್ರಪಂಚವೆಲ್ಲವೂ ನಿನಗೆ ಶರೀರವೆನಿಸಿರುವುದು, ಮನುಷ್ಯನಿಗೆ ತನ್ನ ಶರೀರಾವಯವಗಳಲ್ಲಿ, ಸ್ವಂ ತವೆಂದೂ, ಬೇರೆಯೆಂದೂ ಭೇದಬುಟ್ಟಯು ಹೇಗೆ ಹುಟ್ಟಲಾರದೋ, ಅದ ರಂತೆಯೇ ಸತ್ವಶರೀರಕನಾದ ನಿನಗೆ, ಈ ಪ್ರಪಂಚವೆಲ್ಲವೂ ಸ್ವಂತವೇ ಆಗಿರು ವುದರಿಂದ, ನಿನಗೆ ಭೇದಬುದ್ಧಿಯೆಂಬುದೇ ಇರುವುದಿಲ್ಲ, ಆ ವೈಷಮ್ಯ ಮೂಲಗಳೆನಿಸಿಕೊಂಡ ರಾಗದ್ವೇಷಾದಿಗಳೊಂದೂ ಇಲ್ಲದೆ, ಕೇವಲ ಆತ್ಮಾ ನಂದದಲ್ಲಿರತಕ್ಕೆ ನಿನಗೆ, ಎಲ್ಲರಲ್ಲಿಯೂ ಸಮದೃಷ್ಟಿಯಿರುವದೇನಾಶ್ಚರೈವು? ಆದರೆ ಕಲ್ಪವೃಕ್ಷವಾದರೂ, ತನ್ನಲ್ಲಿ ಬಂದು ಆಶ್ರಯಿಸಿದವರಿಗೆ ಮಾತ್ರವೇ ಅವರವರ ಇಷ್ಕಾರವನ್ನು ಕೈಗೂಡಿಸುವಂತೆ, ನಿನ್ನನ್ನು ಸೇವಿಸತಕ್ಕವರು ಮಾತ್ರವೇ ನಿನ್ನ ಅನುಗ್ರಹಕ್ಕೆ ಪಾತ್ರರಾಗುವರು, ಮತ್ತು ಅವರವರು ನಿನ್ನ ನ್ನು ಸೇವಿಸತಕ್ಕ ರೀತಿಯನ್ನ ನುಸರಿಸಿಯೇ ಫಲವನ್ನೂ ಪಡೆಯುವರು. ಇಷ್ಟು ಮಾತ್ರಕ್ಕೆ ನಿನ್ನಲ್ಲಿ ವೈಷಮ್ಯಬುದ್ಧಿಯನ್ನಾ ರೂಪಿಸುವುದು ಅಜ್ಞತೆ ಯಲ್ಲವೆ ? " ಎಂದನು. ಆಗ ಕೃಷ್ಣನು ಓ ಧರ್ಮರಾಜಾ ! ನಿನ್ನ ಉದ್ದೇ ಶವು ಬಹಳಸಮೀಚೀನವಾದುದು.ಇದರಿಂದ ನಿನ್ನ ಕೀರ್ತಿಯು ಸರೈ ಲೋಕ ವ್ಯಾಪಿಯಾಗಿ, ನಿನಗೆ ಸರೈ ವಿಧದಲ್ಲಿಯೂ ಕ್ಷೇಮವುಂಟು, ಈಗ ನೀನು ಉದ್ದೇಶಿಸಿರುವ ಯಾಗವು ಋಷಿಗಳಿಗೂ, ಪಿತೃದೇವತೆಗಳಿಗೂ, ಇತರಸಮ ಸಭೂತಗಳಿಗೂ ಪ್ರಿಯವಾದುದು, ನನಗೂ ಇದು ಬಹಳತೃಪ್ತಿಕರವಾ ಗಿರುವುದು. ಆದುದರಿಂದ ಈಗಲೇ ನೀನು ದಿಗ್ವಿಜಯಕ್ಕಾಗಿ ಸೈನ್ಯವನ್ನು