ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೯೭

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೬೪ ಶ್ರೀಮದ್ಭಾಗವತವು [ಅಧ್ಯಾ, ೭೩. ದ ಭಗವಂತನು ಆ ರಾಜರಿಗೆ ಹೀಗೆಂದಾಜ್ಞಾಪಿಸಿ, ಅವರಿಗೆ ಅಭ್ಯಂಗಸ್ನಾ ನಾಡಿಗಳನ್ನು ಮಾಡಿಸುವುದಕ್ಕಾಗಿ ಕೆಲವುಪುರುಷರನ್ನೂ, ಸ್ತ್ರೀಯರನ್ನೂ ನಿಯಮಿಸಿದನು. ಮಗಧರಾಜನಾದ ಸಹದೇವನಿಂದ ಅವರಿಗೆ ಉತ್ತಮವ ಸ್ನಾಭರಣಗಳನ್ನೂ, ಗಂಧಪುಷ್ಪಾದಿಗಳನ್ನೂ ತರಿಸಿಕೊಟ್ಟು ಅಲಂಕಾರ ಮಾಡಿಸಿದನು. ಆಮೇಲೆ ಅವರಿಗೆ ಮೃಷ್ಟಾನ್ನ ಭೋಜನಗಳನ್ನು ಮಾಡಿಸಿ, ರಾಜೋಚಿತಗಳಾದ ತಾಂಬೂಲಾದ್ಯುಪಚಾರಗಳಿಂದಲೂ ಸತ್ಕರಿಸಿದನು. ಹೀಗೆ ಕೃಷ್ಣಾನುಗ್ರಹದಿಂದ ಬಂಧಮುಕ್ತರಾಗಿ, ಕಿರೀಟಕುಂಡಲಾದ್ಯಾಭರ ಣಗಳಿಂದಲಂಕೃತರಾದ ಆ ರಾಜಕುಮಾರರೆಲ್ಲರೂ, ವರ್ಷಾಕಾಲವು ಕಳೆದ ಮೇಲೆ, ಆಕಾಶದಲ್ಲಿ ಸ್ವಚ್ಛವಾಗಿ ಪ್ರಕಾಶಿಸುವ ಗ್ರಹಸಮೂಹಗಳಂತೆ ತಮ್ಮ ಮೊದಲಿನ ರಾಜತೇಜಸ್ಸಿನಿಂದ ಬೆಳಗುತಿದ್ದರು. ಆಮೇಲೆ ಕೃಷ್ಣನು ಅವರೆಲ್ಲರನ್ನೂ ರತ್ನಖಚಿತವಾದ ಸುವರ್ಣರಥಗಳಮೇಲೆ ಕುಳ್ಳಿರಿಸಿ, ಪ್ರಿಯ ವಾಕ್ಯಗಳಿಂದ ಆದರಿಸಿ, ಅವರವರ ದೇಶಕ್ಕೆ ಕಳುಹಿಸಿಕೊಟ್ಟನು. ಆ ರಾಜಕು ಮಾರರೆಲ್ಲರೂ ತಮಗೆ ಮಹಾವಿಪತ್ತನ್ನು ತಪ್ಪಿಸಿದ ಆಕೃಷ್ಣನನ್ನು ಅನವ ರತವೂ ಮನಸ್ಸಿನಲ್ಲಿ ಧ್ಯಾನಿಸುತ್ತ, ಅವನ ಅದ್ಭುತಚರಿತ್ರೆಗಳನ್ನು ಕೊಂ ಡಾಡುತ್ತ, ತಮ್ಮ ತಮ್ಮ ದೇಶಗಳಿಗೆ ಹೋಗಿ ಸೇರಿದರು, ಅಲ್ಲಿ ತಮ್ಮ ಪ್ರಜೆ ಗಳೆಲ್ಲರಿಗೂ ಶ್ರೀಕೃಷ್ಣನು ತಮಗೆ ಮಾಡಿದ ಮಹೋಪಕಾರವನ್ನು ತಿಳಿಸಿ, ಆ ಭಗವಂತನು ತಮಗೆ ನಿಯಮಿಸಿದ ರೀತಿಯಲ್ಲಿಯೇ ಎಚ್ಚರಿಕೆಯಿಂದ ಪ್ರ ಜೆಗಳನ್ನು ಪಾಲಿಸುತ್ತಿದ್ದರು. ಇತ್ತಲಾಗಿ ಕೃಷ್ಣನೂಕೂಡ, ಜರಾಸಂಧನ ವಥವಾದಮೇಲೆ, ಅವನ ಮಗನಾದ ಸಹದೇವನಿಂದ ಪೂಜಿತನಾಗಿ,ಭೀಮಾ ರ್ಜುನರೊಡನೆ ಅಲ್ಲಿಂದ ಹಿಂತಿರುಗಿ ಇಂದ್ರಪ್ರಸ್ಥ ಪುರವನ್ನು ಪ್ರವೇಶಿಸಿದನು. ಆಪಟ್ಟಣದ ಬಾಗಿಲಿಗೆ ಬರುವಾಗಲೇ, ತನ್ನ ಇಷ್ಟಮಿತ್ರರಿಗೆ ಸಂತೋಷ ವನ್ನೂ, ಶತ್ರುಗಳಿಗೆ ಸಂಕಟವನ್ನೂ ಹುಟ್ಟಿಸುವಂತೆ, ವಿಜಯಸೂಚಕ ವಾದ ಪಾಂಚನ್ಯವೆಂಬ ಶಂಖವನ್ನು ಧ್ವನಿಮಾಡಿದನು. ಈ ಧ್ವನಿಯನ್ನು ಕೇಳಿ ಪುರವಾಸಿಗಳಲ್ಲರೂ ಜರಾಸಂಧನು ಹತನಾದನೆಂದು ತಿಳಿದು ಸಂ ತೋಷದಿಂದ ಉಬ್ಬುತಿದ್ದರು. ಧರ್ಮರಾಜನೂಕೂಡ ಅಂದಿಗೆ ತನ್ನ ಮನೋ ರಥವು ಕೈಗೂಡಿತೆಂದು ಹರ್ಷಿತನಾದನು, ಆಮೇಲೆ ಕೃಷ್ಣನು, ಭೀಮಾ