ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೧೬

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, ೭೬.] ದಶಮಸ್ಕಂಧವು. ථෆ ಯುತಿದ್ದುವು, ಪ್ರಚಂಡವಾದ ಬಿರುಗಾಳಿಯು ಹೊರಟು, ಆ ಪಟ್ಟಣದ ನಾನಾಕಡೆಗಳಿಗೂ ಮಳಲನ್ನು ತಂದೆರಚುತಿತ್ತು, ದೊಡ್ಡ ಮಳೆಯು ಸುರಿ ಯಲಾರಂಭಿಸಿತು. ಅಲ್ಲಲ್ಲಿ ಭಯಂಕರವಾದ ಸುಳಿಗಾಳಿಯು ನೆಲದ ಧೂಳನ್ನೆ ಬ್ಬಿಸಿ, ದಿಕ್ಕುಗಳೇ ಕಣ್ಣಿಗೆ ಕಾಣದಂತಾಯಿತು, ನಾನಾವಿಧಗಳಾದ ಈ ಅನಾಹುತಗಳಿಂದ, ಪೂತ್ವದಲ್ಲಿ ತ್ರಿಪುರಾಸುರನ ಬಾಧೆಯಿಂದ ಈ ಭೂಮಿ ಯು ಹೇಗೋಹಾಗೆ, ದ್ವಾರಕಾಪುರಿಯೆಲ್ಲವೂ ನಿಮಿಷಮಾತ್ರವೂ ನೆಮ್ಮದಿಯಿ ಇದೆ ತತ್ತಳಿಸುತಿತ್ತು, ಆಗ ಮಹಾತ್ಮನಾದ ಪ್ರದ್ಯುಮ್ನನು, ತನ್ನ ಪ್ರಜೆಗ ಆಗುಂಟಾದ ಬಾಧೆಯನ್ನು ನೋಡಿ ಸಹಿಸಲಾರದೆ,ಅವರಿಗೆ ಭಯಪಡಬೇಡಿ, ರೆಂದು ಸಮಾಧಾನವನ್ನು ಹೇಳಿ, ಸಾಲ್ವನನ್ನಿ ದಿರಿಸುವುದಕ್ಕಾಗಿ ರಥವನ್ನೇರಿ ಹೊರಟುಬಂದನು. ಸಾತ್ಯಕಿ, ಚಾರಧೇಷ್ಯ, ಸಾಂಬ, ಅಕ್ಕೂರ, ಹಾರ್ಡಿ ಕ್ಯ, ಭಾನುವಿಂದ, ಗದ, ಶುಕ, ಸಾರಣ, ಮುಂತಾದ ಯಾದವಪ್ರಧಾನ ರೂ, ಮತ್ತು ಪ್ರದ್ಯುಮ್ಮನ ಇತರಸಹೋದರರೂ, ಇನ್ನೂ ಕೆಲವು ಧನುರ್ಧಾರಿಗಳೂ, ರಥಿಕರಲ್ಲಿ ಅಗ್ರೇಸರರೆನಿಸಿಕೊಂಡವರೂ, ಯುದ್ಧಕವ ಚಗಳನ್ನು ತೊಟ್ಟು, ತಮ್ಮ ತಮ್ಮ ಚತುರಂಗಸೈನ್ಯಗಳನ್ನು ಬೆಂಗಾವಲಾಗಿ ಟ್ಟುಕೊಂಡು, ಆ ಪ್ರದ್ಯುಮ್ನ ನನ್ನು ಹಿಂಬಾಲಿಸಿ ಯುದ್ಧಕ್ಕೆ ನಿಂತರು.ಸಾಲ್ವ ನಕಡೆಯವರಿಗೂ, ಯಾದವರಿಗೂ ದೇವಾಸುರಯುದ್ಧದಂತೆ ಭಯಂ ಕರಯುದ್ಧವು ಆರಂಭಿಸಿತು. ಆರಂಭದಲ್ಲಿಯೇ ಪ್ರದ್ಯುಮ್ನ ನು ತನ್ನ ದಿವ್ಯಾಸ್ತಪ್ರಭಾವದಿಂದ, ಸೂರನು ಅಂಧಕಾರವನ್ನು, ಹೇಗೋ ಹಾಗೆ, ಸಾಲ್ವನ ಮಾಯಾಶಕ್ತಿಯನ್ನು ಅಡಗಿಸಿಬಿಟ್ಟನು, ಮತ್ತು ಸುವ ರ್ಣದ ಹಿಡಿಗಳಿಂದಲೂ, ಉಕ್ಕಿನ ಆಲಗುಗಳಿಂದಲೂ ಕೂಡಿದ ಇಪ್ಪತ್ತೈದು ಬಾಣಗಳನ್ನು ಸಾಲ್ಪನ ಮುಖ್ಯಸೇನಾಪತಿಗೆ ಗುರಿಯಿಟ್ಟು ಹೊಡೆದನು. ಏಕ ಕಾಲದಲ್ಲಿ ನೂರುಬಾಣಗಳಿಂದ ಸಾಲ್ಪನನ್ನೂ ಹೊಡೆದನು. ಅವನು ಪ್ರಯೋ ಗಿಸಿದ ಒಂದೊಂದು ಬಾಣವನ್ನೂ ಒಂದೊಂದು ಬಾಣದಿಂದ ಕತ್ತರಿಸುತ್ತ ಬಂದನು. ಹತ್ತು ಹತ್ತು ಬಾಣಗಳಿಂದ ಇತರ ಸೇನಾಪತಿಗಳನ್ನೂ, ಮೂರು ಮೂರು ಬಾಣಗಳಿಂದ ಆನೆ ಕುದುರೆ ಮೊದಲಾದ ವಾಹನಗಳನ್ನೂ ಪ್ರಹ ರಿಸುತ್ತ ಬಂದನು. ಮಹಾತ್ಮನಾದ ಪ್ರದ್ಯುಮ್ನ ಈ ಯುದ್ಧಚಾತುರ