ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೨೭

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೯೨ ಶ್ರೀಮದ್ಭಾಗವತವು [ಅಧ್ಯಾ, ೭೮' w+ ಬಲರಾಮನ ಶೀರ್ಥಯಾತ್ರೆ ಮುಂತಾದ ವೃತ್ತಾಂತಗಳು+w ಓ! ಪರೀಕ್ಷಿದ್ರಾಜಾ ! ಬಲರಾಮನ ವಿಷಯವಾದ ಮತ್ತೊಂದು ಕಥೆಯನ್ನು ತಿಳಿಸುವೆನು ಕೇಳು! ಕೌರವಪಾಂಡವರಿಬ್ಬರಿಗೂ ಯುದ್ಧಪ್ರಯ ತೃವು ನಡೆಯುತ್ತಿತ್ತು, ಬಲರಾಮನು ಈ ಉಭಯಪಕ್ಷದವರನ್ನೂ ಸಮಾನ ವಾಗಿ ನೋಡುತ್ತಿದ್ದನು. ಆ ಉಭಯಪಕ್ಷದವರಲ್ಲಿ ಯಾರಲ್ಲಿಯೂ, ತಾನು ಪ ಕ್ಷಪಾತವನ್ನು ತೋರಿಸುವುದಕ್ಕಿಲ್ಲದೆ ಹೋದುದರಿಂದಲೇ, ಅವನು ತೀರ್ಥ ಯಾತ್ರೆಯೆಂಬ ನೆವವನ್ನು ಹಿಡಿದು ಹೊರಟುಹೋದನೆಂದು ಹೇಳುವರು. ಈ ತೀರ್ಥಯಾತ್ರೆಯಲ್ಲಿ ಆತನು ಮೊದಲು ಪ್ರಭಾಸವೆಂಬ ತೀರ್ಥದಲ್ಲಿ ಸ್ನಾನಮಾಡಿ, ಅಲ್ಲಿ ದೇವತೆಗಳಿಗೂ, ಋಷಿಗಳಿಗೂ, ಪಿತೃಗಳಿಗೂ, ಮನುಷ್ಯ ರಿಗೂ ವಿಧ್ಯುಕ್ತವಾಗಿ ನಡೆಸಬೇಕಾದ ತರೂಣಕಾಠ್ಯಗಳನ್ನು ನಡೆಸಿ, ಬ್ರಾ ಹ್ಮಣರೊಡನೆ ಅಲ್ಲಿಂದ ಹೊರಟು, ಪಶ್ಚಿಮದಿಕ್ಕಿನ ಸರಸ್ವತೀನದಿಗೆ ಹೋದ ನು. ಅಲ್ಲಿಯೂ ಸ್ನಾನಾದಿಕರ್ಮಗಳನ್ನು ನಡೆಸಿಕೊಂಡು ಅಲ್ಲಿಂದ ಹೊರಟು ಕ್ರಮವಾಗಿ ಪೃಥದಕ, ಬಿಂದುಸರಸ್ಸು, ತ್ರಿಕೂಟ, ಸುದರ್ಶನ, ವಿಶಾಲ, ಬ್ರಹ್ಮತೀರ್ಥ, ಚಕ್ರತೀರ್ಥ, ಪೂತ್ವ ದಿಕ್ಕಿನಲ್ಲಿ ತ್ರಿವೇಣಿಯೆಂಬ ಹೆಸರುಳ್ಳ ಸರಸ್ವತೀನದಿ, ಯಮುನೆ, ಅದಕ್ಕೆ ಸೇರಿದ ಪುಣ್ಯತೀರ್ಥಗಳು, ಗಂಗಾ ನದಿ, ಅದಕ್ಕೆ ಸೇರಿದಂತಿರುವ ಪುಣ್ಯತೀರ್ಥಗಳು, ಇವೇ ಮೊದಲಾದ ಪುಣ್ಯ ಕ್ಷೇತ್ರ, ಪುಣ್ಯತೀರ್ಥ ಯಾತ್ರೆಗಳನ್ನು ಮಾಡಿ, ಅಲ್ಲಿಂದ ನೈಮಿಶಕ್ಷೇತ್ರಕ್ಕೆ ಬಂದನು. ಅಲ್ಲಿ ಅನೇಕಮಹರ್ಷಿಗಳು ಸೇರಿ ಬಹುಕಾಲದಿಂದ ಸತ್ರ ಯಾಗವನ್ನು ನಡೆಸುತಿದ್ದರು. ಬಲರಾಮನು ಆಕಸ್ಮಿಕವಾಗಿ ಅಲ್ಲಿಗೆ ಬಂದುದನ್ನು ನೋಡಿದೊಡನೆ, ಎಲ್ಲರೂ ಸಂತೋಷದಿಂದ ಇದಿ ರೆದ್ದು ಅವನನ್ನು ಅಭಿನಂದಿಸಿ ಸತ್ಕರಿಸಿದರು. ಹೀಗೆ ಬಲರಾಮನೂ, ಅವ ನೊಡನೆ ಬಂದಿದ್ದ ಬ್ರಾಹ್ಮಣರೂ, ಋಷಿಗಳಿಂದ ಸತ್ಯತರಾಗಿ ತಮತಮಗೆ ಯೋಗ್ಯವಾದ ಆಸನದಲ್ಲಿ ಕುಳಿತು, ಅಲ್ಲಿದ್ದ ಋಷಿಗಳೆಲ್ಲರೂ ಬಲ ರಾಮನನ್ನು ಕಂಡೊಡನೆ, ಇದಿರೆದ್ದು, ಎಷ್ಟೋ ಗೌರವದಿಂದ ಪೂಜಿಸಿ,ಸತ್ಯ ರಿಸುತ್ತಿರುವಾಗಲೂ,ಅವರಲ್ಲಿ ವ್ಯಾಸಶಿಷ್ಯನಾದ ರೋಮಹರ್ಷಣನೆಂಬವ ನೊಬ್ಬನುಮಾತ್ರ,ಉಚ್ಛಾಸನದಲ್ಲಿ ಕುಳಿತು,ಬಲರಾಮನು ಬಂದಾಗ ಎಲ್ಲರಂತೆ