ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೩

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦t 4 ಶ್ರೀಮದ್ಭಾಗವತವು [ಅಧ್ಯಾ, ೫೧. ಕತರತ್ನ ಖಚಿತವಾದ ಚಿನ್ನದ ನೆಲಗಟ್ಟುಗಳಿಂದಲೂ ಕಂಗೊಳಿಸುತ್ತಿದ್ದುವು. ಮತ್ತು ಅಲ್ಲಿ ಚಂದ್ರಶಾಲೆಗಳೂ, ದೇವಗೃಹಗಳೂ, ಬ್ರಾಹ್ಮಣಾದಿಚತು ರ್ವಣ್ರದವರಿಗೆ ಬೇರೆಬೇರೆ ನಿವಾಸಯೋಗ್ಯಗಳಾದ ಸ್ಥಳಗಳೂ ಶೋಭಿಸು ತಿದ್ದುವು. ಇಷ್ಟರಲ್ಲಿಯೇ ಮಹೇಂದ್ರನು, ಶ್ರೀಕೃಷ್ಣನಿಗಾಗಿ ಸುಧರೆಯೆಂ ಬ ತನ್ನ ಸಭೆಯನ್ನೂ, ಪಾರಿಜಾತವೃಕ್ಷವನ್ನೂ ಅಲ್ಲಿಗೆ ಕಳುಹಿಸಿಕೊಟ್ಟನು. ಅದರಿಂದ ಅಲ್ಲಿರತಕ್ಕವರಿಗೆ, ಮನುಷ್ಯಧಮ್ಮಗಳಾದ ಹಸಿವು, ಬಾಯಾರಿಕೆ, ದುಃಖ, ಮೋಹ, ಜರೆ, ಮರಣ, ಮೊದಲಾದ ಬಾಧೆಗಳೇ ಕಾಣದಂತಾ ದುವು. ವರುಣದೇವನು ಶ್ರೀಕೃಷ್ಣನಿಗಾಗಿ ಒಂದುಕಿವಿಯಲ್ಲಿ ಮಾತ್ರ ಶ್ಯಾಮಲವಾಗಿ, ಬೇರೆ ಅವಯವಗಳೆಲ್ಲವೂ ಬಿಳುಪಾಗಿ, ಮನೋವೇಗವಳ್ಳ ಕುದುರೆಗಳನ್ನು ಕಳುಹಿಸಿಕೊಟ್ಟನು. ನವನಿಧಿಗಳಿಗೆ ಅಧಿಪತಿಯಾದ ಕುಬೇ ರನು, ತನ್ನ ವಶದಲ್ಲಿದ್ದ ಎಂದುಬಗೆಯ ಬೊಕ್ಕಸಗಳನ್ನೂ ಕಳುಹಿಸಿಕೊಟ್ಟ ನು, ಹೀಗೆಯೇ ಇತರಸಿದ್ಧಾದಿಗಳೆಲ್ಲರೂ, ತಮ್ಮ ತಮ್ಮ ಅಧಿಕಾರಸಿದ್ಧಿಗಾ ಗಿ,ಆ ಭಗವದನುಗ್ರಹದಿಂದಲೇ ತಮತಮಗೆ ಪ್ರಾಪ್ತವಾಗಿದ್ದ ಐಶ್ವರಗಳೆಲ್ಲ ವನ್ನೂ , ಅವನು ಭೂಮಿಯಲ್ಲಿ ಅವತರಿಸಿದ್ಯಾಗ,ಹಿಂತಿರುಗಿ ಅವನಲ್ಲಿಯೇ ಸ ಮರ್ಪಿಸಿದರು, ಕೃಷ್ಣನು ತನ್ನ ಯೋಗಪ್ರಭಾವದಿಂದ ಮಧುರೆಯಲ್ಲಿದ್ದ ತ « ಜನವೆಲ್ಲವನ್ನೂ ಆ ಹೊಸಪಟ್ಟಣಕ್ಕೆ ತಂದುಸೇರಿಸಿ, ಅಲ್ಲಿಂದ ಬಲ ರಾಮನ ಬಳಿಗೆ ಬಂದು, ಆತನೊಡನೆ ಮಂತ್ರಾಲೋಚನೆಯನ್ನು ಮಾಡಿ, ಆ ದರಂತೆ ಒಂದು ಪುಷ್ಪಮಾಲಿಕೆಯನ್ನು ಮಾತ್ರ ಧರಿಸಿ, ನಿರಾಯುಧನಾಗಿ ಪುರದ್ವಾರದಿಂದ ಹೊರಗೆ ಬಂದನು. ಇದು ಐವತ್ತನೆಯ ಅಧ್ಯಾಯವು. + ಮುಚುಕುಂದ ವೃತ್ತಾಂತವು.nw ಇತ್ತಲಾಗಿ ಕಾಲಯವನನು, ಆಗಲೇ ಉದಿಸಿ ಬರುತ್ತಿರುವ ಪೂರ್ಣ ಚಂದ್ರನಂತೆ ಪುರದ್ವಾರದಿಂದ ಹೊರಟುಬರುತ್ತಿರುವ ಶ್ರೀಕೃಷ್ಣನನ್ನು ಕಂ ಡನು. ಆಗ ಶ್ರೀಕೃಷ್ಣ ಪರಮಾತ್ಮನ ದಿವ್ಯಾದ್ಭುತರೂಪವನ್ನು ಕೇಳಬೇಕೆ ? ನೋಡಿದಷ್ಟೂ ಮೇಲೆ ಮೇಲೆ ಆಸೆಯನ್ನು ಹೆಚ್ಚಿಸತಕ್ಕ ಸುಂದರಾಕೃತಿ! ಶ್ಯಾಮಲವರ್ಣವಾದ ಮೈ! ಮೈಮೇಲೆ ಹೊಂಬಣ್ಣದ ಪಟ್ಟೆ ಮಡಿ! ಎದೆಯ