ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೩೪

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೯ಕ್ ಅಧ್ಯಾ, ೭೯.] - ದಶಮಸ್ಕಂಧವು. ೭ನು (ದುರೊಧನನು) ಗದಾಯುದ್ಧಶಿಕ್ಷೆಯಲ್ಲಿಯೂ .ಮೇಲೆನಿಸಿರು ವುದರಿಂದ, ಸಮಾನಬಲರೆನಿಸಿದ ನಿಮ್ಮಲ್ಲಿ ಯಾವನೊಬ್ಬನೂ ಸೋಲುವ ಹಾಗೆ ನನಗೆ ತೋರಲಿಲ್ಲ. ಆದುದರಿಂದ ನಿಮ್ಮ ಯುದ್ಧವು ನಿಚ್ಛಯೋಜ ನವೇ ! ಈಗ ನೀವು ಯುದ್ಧವನ್ನು ನಿಲ್ಲಿಸಿ ಸುಮ್ಮನಿರುವುದೇ ಉತ್ತಮವು.” ಎಂದನು. ಭೀಮದುಧನರಿಬ್ಬರೂ ಆ ಬಲರಾಮನ ಮಾತಿಗೆ ಕಿವಿ ಗುಡದೆ, ಬಾಲ್ಯದಿಂದಲೂ ತಮತಮಗೆ ಹೆಚ್ಚಿ ಬರುತ್ತಿದ್ದ ದ್ವೇಷವನ್ನೂ , ಒಬ್ಬರಿಗೊಬ್ಬರು ಮಾಡಿದ ವಿರೋಧಗಳನ್ನೂ , ನಿಂದಾವಾಕ್ಯಗಳನ್ನೂ ಸ್ಮರಿಸಿಕೊಂಡು, ಹೊಡೆದಾಡುತ್ತಲೇ ಇದ್ದರು. ಅದನ್ನು ನೋಡಿ ಬಲರಾಮನು ಅವರ ಪ್ರಾಚೀನಕರ್ಮವಿದ್ಯಂತಾಗಲೆಂದು ತಿಳಿದು, ದ್ವಾರಕೆಗೆ ಹಿಂತಿರುಗಿ, -ಅಲ್ಲಿ ಉಗ್ರಸೇನಾದಿಗಳೊಡನೆ ಕಲೆತು ಸಂತೋಷದಿಂದಿದ್ದನು. ಅಲ್ಲಿ ಕೆಲವುದಿವಸಗಳನ್ನು ಕಳೆದಮೇಲೆ, ತಿರುಗಿ ಋಷಿಗಳು ಸತ್ರಯಾಗವನ್ನು ನಡೆಸುತಿದ್ದ ನೈಮಿಶಾರಣ್ಯಕ್ಕೆ ಬಂದನು.ಆ ಬಲರಾಮನನ್ನು ಅಲ್ಲಿದ್ದ ಋಷಿಗ ಬೆಲ್ಲರೂ ಗೌರವಿಸಿ, ಅವನಿಂದ ಸಾಂಗವಾಗಿ ಅನೇಕಕ್ರತುಗಳನ್ನು ಮಾಡಿಸಿ ದರು. ಆಮೇಲೆ ಬಲರಾಮನು ಅವರಿಗೆ ಶುದ್ಧವಾದ ಆತ್ಮಜ್ಞಾನವನ್ನು ಪದೇಶಿಸಿ, ಪರಮಾತ್ಮನಾದ ತನ್ನಲ್ಲಿ ಸಮಸ್ತ ಪ್ರಪಂಚವೂ ಆಧಿಷ್ಟಿತವಾಗಿರು ವುದನ್ನೂ, ತಾನು ಸಕಲಪ್ರಪಂಚವನ್ನೂ ವ್ಯಾಪಿಸಿರುವುದನ್ನೂ ತಿಳಿಸಿದನು. ಆಮೇಲೆ ತನ್ನ ಪತ್ನಿ ಯೊಡಗೂಡಿ, ಇಷ್ಟಮಿತ್ರಬಂಧುಗಳಿಂದ ಪರಿವೃತ ನಾಗಿ, ಆವಭ್ಯಥಸ್ಸಾ ನವನ್ನು ಮುಗಿಸಿದನು. ಈ ಸ್ನಾನವಾದಮೇಲೆ ಉತ್ತ ಮವಾದ ವಸ್ತ್ರಗಳಿಂದಲೂ, ಆಭರಣಗಳಿಂದ ಅಲಂಕೃತನಾಗಿ, ಪೂರ್ಣ ಕಳೆಗಳಿಂದ ಕೂಡಿದ ಚಂದ್ರನಂತೆ ಪ್ರಕಾಶಿಸುತ್ತಿದ್ದನು. ಓ ! ಪರೀಕ್ಷೆ ದ್ರಾಜಾ ! ಅನಂತಾಂಶದಿಂದವತರಿಸಿ, ಅಪ್ರಮೇಯಪ್ರಭಾವವುಳ್ಳ ಆ ಬಲ ರಾಮನು, ಹೀಗೆ ಮಾಯಾಮನುಷ್ಯನಾಗಿ ನಡೆಸಿದ ಅದ್ಭುತಕಾರಗಳು ಇನ್ನೂ ಅನೇಕವಾಗಿರುವುವು. ಈ ಬಲರಾಮನ ಅದ್ಭುತಚರಿತ್ರೆಗಳನ್ನೂ , ಕೃತ್ಯಗಳನ್ನೂ ಯಾವನು ಮನಸ್ಸಿನಿಂದ ಸ್ಮರಿಸುವನೋ, ಕಿವಿಯಿಂದ ಕೇಳು ವನೋ, ಬಾಯಿಂದ ನುಡಿಯುವನೋ, ಅಂತವನು ಭಗವಂತನಿಗೆ ವಿಶೇಷ ಪ್ರಿಯನಾಗುವನು” ಎಂದನು. ಇದು ಎಪ್ಪತ್ತೊಂಬತ್ತನೆಯ ಅಧ್ಯಾಯವು -