ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೫೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೧೪ ಶ್ರೀಮದ್ಭಾಗವತವು [ಅಧ್ಯಾ, ೮೨. ದೊಮ್ಮೆ ಶಸ್ತ್ರಧಾರಿಗಳಲ್ಲಿ ಮೇಲೆನಿಸಿಕೊಂಡ ಪರಶುರಾಮನು, ಯಾವನೋ ಒಬ್ಬ ಕ್ಷತ್ರಿಯನು ತನ್ನ ತಂದೆಯಾದ ಜಮದಗ್ನಿ ಯನ್ನು ಕೊಂದನೆಂಬ ಕೋಪಕ್ಕಾಗಿ, ಭೂಮಿಯಲ್ಲಿ ಕ್ಷತ್ರಿಯರ ಹುಟ್ಟೇ ಇಲ್ಲದಂತೆ ಮಾಡುವುದಾಗಿ ಸಂಕಲ್ಪಿಸಿ, ಅದರಂತೆ ಕಂಡಕಂಡ ಕ್ಷತ್ರಿಯರನ್ನು ಕೊಲ್ಲುತ್ಯ, ಅವರ ರಕ್ತ ಪ್ರವಾಹದಿಂದ ಐದುಮಡುಗಳನ್ನು ತುಂಬಿಟ್ಟನು. ಅದನ್ನೇ ಸ್ಯಮಂತ ಪಂಚಕವೆಂದು ಹೇಳುವರು. ಆ ಪರಶುರಾಮನು ಭಗವಂತನ ಅಂಶಾವತಾರ ವಾದುದರಿಂದ, ಅವನಿಗೆ ಪುಣ್ಯಪಾಪಕರ್ಮಗಳ ಸಂಬಂಧವಿಲ್ಲದಿದ್ದರೂ, ಲೋಕಕ್ಕೆ ತಿಷ್ಟಾಚಾರವನ್ನು ತಿಳಿಸುವುದಕ್ಕಾಗಿಯೂ, ಸಾಮಾನ್ಯಜನಗಳಿಗೆ ಪಾಪನಿವೃತ್ತಿಯ ಮಾರ್ಗವನ್ನು ತಿಳಿಸುವುದಕ್ಕಾಗಿಯೂ, ತಾನು ಕ್ಷತ್ರಿಯ ರನ್ನು ಕೊಂದ ಪಾಪಕ್ಕೆ ಪ್ರಾಯಶ್ಚಿತ್ತರೂಪವಾಗಿ ಅಲ್ಲಿ ಒಂದಾನೊಂದು ಯಾಗವನ್ನೂ ಮಾಡಿದನು. ಅದು ಲೋಕದಲ್ಲಿ ಪ್ರಸಿದ್ಧವಾದ ಪುಣ್ಯ ಕ್ಷೇತ್ರವೆನಿಸಿಕೊಂಡುದರಿಂದ, ಭರತವರ್ಷದ ಪ್ರಜೆಗಳೆಲ್ಲರೂ ತೀರ್ಥಯಾ ತ್ರೆಗಾಗಿ ಅಲ್ಲಿಗೆ ಹೋಗುವುದುಂಟು. ಆ ಸಂಪ್ರದಾಯವನ್ನ ನುಸರಿಸಿಯೇ ಈಗಿನ ಗ್ರಹಣ ಕಾಲದಲ್ಲಿ, ಅನೇಕವೃಷ್ಟಿಗಳೊಡನೆ ಅಕ್ರೂರನೂ, ವಸುದೇ ವನೂ, ಆಹುಕನೂ, ಗದ, ಪ್ರದ್ಯುಮ್ನ, ಸಾಂಬ, ಸುಚಂದ್ರ, ಶುಕ, ಸಾರಣ, ಮುಂತಾದ ಅನೇಕಯಾದವರೂ, ತಮ್ಮ ಪಾಪಪರಿಹಾರಾರ್ಥ ವಾಗಿ ಗ್ರಹಣಸ್ನಾನವನ್ನು ಮಾಡಬೇಕೆಂದು ಆ ಕ್ಷೇತ್ರಕ್ಕೆ ಹೋದರು. ಯಾದವಸೇನಾಪತಿಯಾದ ಅನಿರುದ್ಧನೂ, ಕೃತವರ್ಮನೂ, ಇವರಿಬ್ಬರು ಮಾತ್ರ, ಪಟ್ಟಣದ ಕಾವಲಿಗಾಗಿ ದ್ವಾರಕೆಯಲ್ಲಿಯೇ ನಿಂತುಬಿಟ್ಟರು. ಅತ್ರ ಲಾಗಿ ತೀರ್ಥಯಾತ್ರೆಗಾಗಿ ಹೊರಟವರೆಲ್ಲರೂ, ತನ್ನೊಡನೆ ದೇವಭವ ನಗಳಿಂತಿರುವ ರಥಗಳನ್ನೂ , ಅಲೆಗಳಂತಿರುವ ಕುದುರೆಗಳನ್ನೂ, ಮೇಘಗಳಂ ತಿರುವ ಆನೆಗಳನ್ನೂ, ವಿದ್ಯಾಧರರಂತೆ ಕಾಂತಿವಿಶಿಷ್ಯರಾದ ಕಾಲಾಳುಗ ಇನ್ನೂ ಕರೆದುಕೊಂಡು, ಸುವರ್ಣಹಾರಗಳು, ದಿವ್ಯವಸ್ಥೆಗಳು, ಗಂಧ ಪುಷ್ಪಗಳು,ಮೊದಲಾದ ಅಲಂಕಾರಸಾಮಗ್ರಿಗಳನ್ನೂ ಸಿದ್ಧಪಡಿಸಿಕೊಂಡು, ತಮ್ಮ ತಮ್ಮ ಪತ್ನಿ ಯರೊಡನೆ ಬರುವಾಗ ಸಾಕ್ಷಾದಿವ್ಯಪುರುಷರಂತೆ ತೋರುತಿದ್ದರು. ಇವರೆಲ್ಲರೂ ಆ ತೀರ್ಥದಲ್ಲಿ ಸ್ನಾನಮಾಡಿ, ನಿಯಮದಿಂದ