ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೬೩

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೬ ಶ್ರೀಮದ್ಭಾಗವತರು [ಅಧ್ಯಾ, ೮೩. ಹೀಗೆ ನನ್ನ ತಂದೆಯು ಮಯಂತ್ರಭೇದನವನ್ನೇ ಕನ್ಯಾಶುಲ್ಕವಾಗಿ ಟೈರುವುದನ್ನು ಕೇಳಿ, ನಾನಾಕಡೆಯಿಂದ ಅನೇಕ ಶಸ್ತ್ರಾಸ್ತ್ರಗಳ ತತ್ವವನ್ನು ತಿಳಿದ ರಾಜರೆಲ್ಲರೂ, ತಮ್ಮ ತಮ್ಮ ಧನುರ್ವಿದ್ಯಾಚಾತ್ಯರೊಡನೆ ಅಲ್ಲಿಗೆ `ಬಂದು ಸೇರಿದರು.ನನ್ನ ತಂದೆಯು ಅವರವರ ವಯಸ್ಸಿಗೂ, ಪಾಕ್ರಮಕ್ಕೂ ತಕ್ಕಂತೆ ಅವರೆಲ್ಲರನ್ನೂ ಯಥೋಚಿತವಾಗಿ ಸತ್ಕರಿಸಿ ಸಭೆಗೂಡಿಸಿದನು. ಎಲ್ಲರಿಗೂ ನನ್ನ ಮೇಲೆ ಕಣ್ಣಿದ್ದುದರಿಂದ, ಒಬ್ಬೊಬ್ಬರೂ ಆ ಯಂತ್ರಭೇದ ನಕ್ಕಾಗಿ ಪ್ರಯತ್ನಿ ಸುತ್ತಿದ್ದರು. ಆದರೇನು ? ಕೆಲವರು ಆ ಯಂತ್ರಭೇದನ ಕ್ಯಾಗಿ ಇಟ್ಟಿದ್ದ ಬಿಲ್ಲನ್ನು ಕೈಗೆತ್ತಿಕೊಂಡು, ಅದರ ನಾಣನ್ನೆಳೆದು ಕಟ್ಟುವು ದಕ್ಕೆ ಸಾಧ್ಯವಿಲ್ಲದೆ ಬಿಟ್ಟು ಹೋದರು. ಮತ್ತೆ ಕೆಲವರು ಆ ಬಿಲ್ಲಿನ ಕೊನೆಯವರೆಗೆ ಪ್ರಯತ್ನ ಪೂರಕವಾಗಿ ನಾಣನ್ನೆಳೆದು, ಅದನ್ನು ತಗುಲಿಸು ವಷ್ಟರಲ್ಲಿ, ಅದು ಹಿಡಿತಪ್ಪಿ, ಚಿಮ್ಮಿ ಮುಖಕ್ಕೆ ಬಡಿದುದರಿಂದ ಹಾಗೆಯೇ ಮೂರ್ಛಿತಲಾಗಿ ಬಿದ್ದರು. ಅದರಿಂದಾಚೆಗೆ ಜರಾಸಂಧ, ಅಂಭ ಪೈ, ಶಿಶುಪಾಲ, ಭೀಮ, ಕರ್ಣ, ದುರೊಧನ, ಮೊದಲಾದ ಕೆಲವು ಮಹಾವೀರರು, ತಮ್ಮ ಅಸಾಧಾರಣಶಕ್ತಿಯಿಂದ ಅದಕ್ಕೆ ನಾಣ ನ್ಯೂ ಎಳೆದುಕಟ್ಟೆ, ಬಾಣಪ್ರಯೋಗವನ್ನು ಮಾಡುವಾಗ, ಆ ಮದ ಗುರಿಯನ್ನು ಕಂಡುಹಿಡಿಯಲಾರದೆ ಹೋದರು. ಕೊನೆಗೆ ನಿನ್ನ ಪತಿಯಾದ ಅರ್ಜುನನು ಬಂದು, ನಾಣನ್ನೂ ಎಳೆದುಕಟ್ಟೆದನು. ಜಲದಲ್ಲಿ ಆ ಮೀನಿನ ಪ್ರತಿಬಿಂಬವನ್ನು ನೋಡಿ ಯಂತ್ರದ ಗುರಿಯನ್ನೂ ಕಂಡುಕೊಂಡನು. ಯಂತ್ರಕ್ಕೆ ಗುರಿಯಿಟ್ಟು ಬಾಣವನ್ನೂ ಪ್ರಯೋಗಿಸಿದನು. ಆದರೇನು? ಆ ಬಾಣವು ಯಂತ್ರವನ್ನು ಸುಮ್ಮನೆ ತಾಗಿ ಕೆಳಗೆ ಬಿದ್ದು ಹೋಯಿತೇ ಹೊರತು, ಆ ಮತ್ತ್ವವನ್ನು ಭೇದಿಸಲಾರದೆ ಹೋಯಿತು. ಹೀಗೆ ರಾಜ ರೆಲ್ಲರೂ ವಿಫಲಪ್ರಯತ್ನರಾಗಿ ಲಜ್ಜೆಯಿಂದ ಹಿಂತಿರುಗಿದುದನ್ನು ನೋಡಿ, ಕೃಷ್ಣನು ಮುಂದೆ ಬಂದು, ಲೀಲಾಮಾತ್ರದಿಂದ ಬಿಲ್ಲಿಗೆ ನಾಣೇರಿಸಿಕಟ್ಟೆ ಒಂದಾವರ್ತಿ ನೀರಿನಲ್ಲಿ ನೋಡಿದಮಾತ್ರದಿಂದಲೇ ಗುರಿಹಿಡಿದು, ಆ ಯಂತ್ರ ವನ್ನು ಬಾಣದಿಂದ ಭೇದಿಸಿ ಕೆಡಹಿದನು. ಆಗ ಸೂಯ್ಯನು ಅಭಿಜಿತ್ತೆಂಬ ಮೂಹೂರ್ತದಲ್ಲಿದ್ದನು. ಭಗವಂತನು ಈ ಮತ್ಯಂತ್ರವನ್ನು ಭೇದಿಸಿ