ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೬೯

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܦܐܬܦ ಶ್ರೀಮದ್ಭಾಗವತವು [ಅಧ್ಯಾ, ೮೪. ತಿಳಿಯದೆ,ನಿನ್ನನ್ನು ಮನುಷ್ಯನೆಂದೇ ಭ್ರಮಿಸಿ ಮೋಸಹೋಗುವೆವು, ಆಹಾ ನಿನ್ನ ಚರಿತ್ರವು ಅತಿವಿಚಿತ್ರವಾದುದು! ನೀನು ಕರ್ಮಾಧೀನವಾದ ವಿಕಾರಗ ಳಿಲ್ಲದವನಾಗಿದ್ದರೂ, ಸೃಷ್ಟಿಗೆ ಮೊದಲು ಕಾರಣಾವಸ್ಥೆಯಲ್ಲಿರುವಾಗ ನಾಮರೂಪವಿಭಾಗಗಳೊಂದೂ ಇಲ್ಲದ ಚೇತನಾಚೇತನಗಳೆರಡನ್ನೂ ಶರೀ ರವಾಗಿ ಹೊಂದಿ,ಒಬ್ಬನೇ ಒಬ್ಬನಾಗಿ ತೋರುವೆ! ಆಮೇಲೆ ಆ ಚಿದಚಿತ್ತುಗ ಇನ್ನೇ ನಾಮರೂಪವಿಭಾಗಗಳಿಂದ, ಅನೇಕವಿಧವಾಗಿ ಸೃಷ್ಟಿಸಿ, ಅದನ್ನು ನೀನೇ ರಕ್ಷಿಸುತ್ತಿದ್ದು, ಕೊನೆಗೆ ನೀನೇ ಸಂಹರಿಸುವೆ!ಆದರೆ ನೀನೊಬ್ಬನುಮಾ ತ್ರ ಈ ವಿಕಾರಗಳೊಂದಕ್ಕೂ ಈಡಾಗತಕ್ಕವನಲ್ಲ!ಭೂಮಿಯು ತಾನೊಂದೇ ಆಗಿದ್ದರೂ, ಮಣ್ಣು,ಮಡಿಕೆ,ಹರಿವಿ, ಮೊದಲಾದ ವಿಕಾರಗಳಿಂದ ಬೇರೆಬೇರೆ ನಾಮರೂಪಭೇದಗಳನ್ನು ಹೊಂದುವಂತೆ, ನೀನೇ ನಿನ್ನ ಶರೀರದಲ್ಲಿ ಅನೇಕ ನಾಮರೂಪಭೇದಗಳನ್ನು ತೋರಿಸುವೆ. ಹೀಗೆ ನೀನು ಸರಸ್ವರೂಪನಾ ಗಿದ್ದರೂ, ಪ್ರಕೃತಿಪುರುಷವಿಲಕ್ಷಣನಾದ ಪರಮಾತ್ಮನಾಗಿದ್ದರೂ, ವರ್ಣಾ ಶ್ರಮಭೇದವುಳ್ಳ ಜೀವನಂತೆ ಕಾಣುತ್ತ, ದುಷ್ಟನಿಗ್ರಹಶಿಷ್ಯ ಪರಿಪಾಲನ ಕ್ಯಾಗಿ ಈ ಮನುಷ್ಯ ದೇಹವನ್ನು ಧರಿಸಿರುವೆ! "ನೀನು ಧರಿಸತಕ್ಕ ಮ ನುಷ್ಯದೇಹವೂ ಕೂಡ ಶುದ್ಧಸತ್ವಮಯವಾದುದೇಹೊರತು, ಪ್ರಾಕೃತದೇ ಹದಂತೆ ದೋಷಾಸ್ಪದವಲ್ಲ. ನೀನು ಲೀಲಾರ್ಥವಾಗಿ ಕೈಕೊಂಡ ಕಾರಿಗಳಿಂ ದಲೇ, ಈ ಪ್ರಪಂಚಕ್ಕೆ ಸನಾತನವಾದ ವೇದಮಾರ್ಗವನ್ನು ತೋರಿಸುತ್ತಿರುವೆ. ಹೀಗೆ ಲೋಕದಲ್ಲಿ ವೇದಧರ್ಮಗಳನ್ನು ನೆಲೆಗೊಳಿಸಬೇಕೆಂಬ ಉದ್ದೇಶದಿಂದ ಲೇ ಆವತರಿಸಿದ ನಿನಗೆ,ಆ ವೇದವನ್ನೇ ನಂಬಿದನಮ್ಮಂತಹ ಬ್ರಾಹ್ಮಣರನ್ನು ಗೌರವಿಸುವುದೇನೋ ಯುಕ್ತವೇ ? ಆ ವೇದಗಳಿಂದಲೇ ತಪಸ್ರ, ಧರ್ಮ ವೂ, ವ್ಯಕ್ತವ್ಯಕ್ಕಗಳೆನಿಸಿಕೊಂಡ ದೇಹಾತ್ಮ ಸ್ವರೂಪವೂ, ಇವೆರಡಕ್ಕಿಂತ ಲೂ ವಿಲಕ್ಷಣವಾದ ಪರಮಾತ್ಮ ಸ್ವರೂಪವೂ ಇವೆಲ್ಲವೂ ಸ್ಪಷ್ಟವಾಗಿ ತಿಳಿ ಯುವುವು. ಶುದ್ಧಬ್ರಹ್ಮಸ್ವರೂಪವಾದ ಆ ವೇದವೇ ನಿನ್ನ ಹೃದಯವು. ಆ ವೇದದಿಂದಲೇ ನಿನ್ನ ಸ್ವರೂಪವನ್ನು ಕಂಡುಕೊಳ್ಳಬೇಕು, ಈ ಲೋಕದಲ್ಲಿ ಆ ವೇದಗಳಿಗೆ ಬ್ರಾಹ್ಮಣಕುಲವೇ ಆಧಾರವಾದುದರಿಂದ, ನಿನ್ನ ಸ್ವರೂಪವನ್ನು ತಿಳಿಸುವುದಕ್ಕೆ ಬ್ರಹ್ಮಕುಲವೇ ಸ್ಥಾನವಾಗಿರುವುದು, ಅಂತಹ ಬ್ರಾಹ್ಮಣ