ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೭೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೩೪ ಶ್ರೀಮದ್ಭಾಗವತವು [ಅಧ್ಯಾ, ೮೪. ಸ್ವರೂಪವನ್ನು ಹೇಗೆ ತಾನೇ ತಿಳಿಯಬಲ್ಲನು? ಓಕೃಷ್ಣಾ ! ಹೀಗೆ ನಿನ್ನ ಸಾ ಕ್ಷಾತ್ಕಾರವು ಎಂತವರಿಗೂ ದುರ್ಲಭವಾಗಿದ್ದರೂ, ನಮಗೆ ಈಗ ನಿನ್ನನ್ನು ಪ್ರತ್ಯಕ್ಷವಾಗಿ ಕಾಣುವ ಭಾಗ್ಯವು ಲಭಿಸಿತು. ಸಮಸ್ತಪಾಪನಿವಾರಕಗಳಾದ ಗಂಗಾಔತೀರಗಳಿಗೂ ಮೂಲಭೂತವಾಗಿ, ಭಕ್ತಿಯೋಗಪರಿಪಾಕವುಳ್ಳ ಯೋಗಿಗಳು ತಮ್ಮ ಹೃದಯದಿಂದಮಾತ್ರ ಸಾಕ್ಷಾತ್ಕರಿಸತಕ್ಕುದಾಗಿರುವ ನಿನ್ನ ಪಾದಾರವಿಂದವನ್ನು , ಈಗ ನಾವುಪ್ರತ್ಯಕ್ಷವಾಗಿ ನೋಡುವಂತಾಯಿತು. ಕರವಾಸನೆಗಳನ್ನೂ , ಆತ್ಮವನ್ನು ಮರೆಸತಕ್ಕ ಅಜ್ಞಾನವನ್ನೂ ಭಕ್ತಿಪ ರಿಪಾಕದಿಂದ ನೀಗಿಸಿಕೊಂಡವರೇ ನಿನ್ನ ಸಾನ್ನಿಧ್ಯವನ್ನು ಹೊಂದುವರು. ಆದುದರಿಂದ ನಮಗೂ ಆವಿಧವಾದ ಭಕ್ತಿಯುಂಟಾಗುವಂತೆ ಅನುಗ್ರಹಿಸ ಬೇಕು.” ಎಂದರು. ಓ ಪರೀಕ್ಷಿದ್ರಾಜಾ ! ಹೀಗೆ ಆ ಮಹರ್ಷಿಗಳೆಲ್ಲರೂ ಕೃಷ್ಣನನ್ನು ಕಂಡು, ಅವನ ಗುಣಗಳನ್ನು ಕೊಂಡಾಡಿ, ಆಮೇಲೆ ಧೃತರಾಷ್ಟ್ರ ಯುಧಿಷ್ಠಿರಾದಿಗಳನ್ನೂ ಕಂಡು ಮಾತಾಡಿಸಿ,ಅವರ ಅನುಮತಿಯನ್ನು ಪಡೆ ದು, ತಮ್ಮ ತಮ್ಮ ಆಶ್ರಮಗಳಿಗೆ ಹಿಂತಿರುಗುವ ಸನ್ನಾಹದಲ್ಲಿದ್ದರು. ಆಗ ಮಹಾಯಶಸ್ವಿಯಾದ ವಸುದೇವನು, ಅವರಬಳಿಗೆ ಬಂದು, ಪಾದಪ್ರಣಾ ಮವನ್ನು ಮಾಡಿ ಹೀಗೆಂದು ಪ್ರಾರ್ಥಿಸುವನು. « ಓ ಮಹರ್ಷಿಗಳಿರಾ ! ಸಕಲದೇವತಾಸ್ವರೂಪರಾದ ನಿಮ್ಮನ್ನು ವಂದಿಸುವೆನು, ನನ್ನ ಇದೊಂದು ಪ್ರಾರ್ಥನೆಯನ್ನು ಲಾಲಿಸಬೇಕು, ಪ್ರಾಚೀನಪುಣ್ಯಪಾಪಕಮ್ಮಗಳೆ ಲ್ಲವೂ ಭಕ್ತಿಯೋಗವನ್ನು ಹುಟ್ಟಿಸುವುದಕ್ಕೆ ಪ್ರತಿಬಂಧಕಗಳೆಂದು ಕೇಳಿರು ವೆನು. ವರ್ಣಾಶ್ರಮಗಳಿಗೆ ಅನುಗುಣಗಳಾದ ಕರಗಳಿಂದ ಪ್ರಾರಬ್ಧ ಕಮ್ಮ ಗಳು ನೀಗಿ, ಅವು ಭಕ್ತಿಯೋಗಕ್ಕೆ ಸಾಧಕಗಳಾಗುವುವೆಂದೂ ಹೇಳುವರು. ಕರಗಳಿಂದಲೇ ಕರಕ ಯವಾಗುವುದು ಹೇಗೆ ? ಇದರ ತತ್ಯವನ್ನು ನನಗೆ ತಿಳಿಸಬೇಕು” ಎಂದನು. ಸರೈಶ್ವರನಾಗಿಯೂ, ಸತ್ವಜ್ಞನಾಗಿಯೂ ಇರು ವ ಶ್ರೀಕೃಷ್ಣನೇ ತನ್ನ ಗರ್ಭದಲ್ಲಿ ಜನಿಸಿ, ಯಾವಾಗಲೂ ತನ್ನ ಕಣ್ಣ ಮುಂದೆ ಇರುತ್ತಿರುವಾಗಲೂ, ವಸುದೇವನು, ಅವನನ್ನು ಬಿಟ್ಟು, ತಮ್ಮಲ್ಲಿ ಈ ಪ್ರಶ್ನವನ್ನು ಮಾಡಿದುದ ಕ್ಕಾಗಿ, ಅಲ್ಲಿದ್ದ ಋಷಿಗಳೆಲ್ಲರೂ ಸಂ ಭ್ರಾಂತರಾಗಿರಲು ನಾರದನು ಅವರ ಮನೋಭಿಪ್ರಾಯವನ್ನು ತಿಳಿದುಕೊಂ