ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೯೩

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

.೨೬೫೪ ಶ್ರೀಮದ್ಭಾಗವತವು [ಅಧ್ಯಾ, ೮೬. ಸ್ವಲ್ಪ ಮಾತ್ರವೂ ಹೆಚ್ಚಾಗಿ ಅಪೇಕ್ಷಿಸುತ್ತಿರಲಿಲ್ಲ. ಪಂಚಮಹಾಯ ಜ್ಯಗಳೇ ಮೊದಲಾದ ತನ್ನ ನಿತ್ಯಕರ್ಮಗಳಿಗೆ ಲೋಪವಿಲ್ಲದೆ ನಡೆಸುತ್ತಿ ದನು. ಆಗ ಆ ದೇಶಕ್ಕೆ ಬಹುಳಾಶ್ವನೆಂಬವನು ರಾಜನಾಗಿದ್ದನು. ಆತನೂ ಈ ಶ್ರುತದೇವನಂತೆಯೇ ಅಹಂಕಾರಮಮಕಾರಗಳನ್ನು ಬಿಟ್ಟು, ಶಾಂತ ಚಿತ್ತನಾಗಿದ್ದನು. ಆತನೂ ಕೃಷ್ಣನಲ್ಲಿ ವಿಶೇಷಭಕ್ತಿಯನ್ನು ತೋರಿಸು ತಿದ್ದನು. ಹೀಗಿರುವಾಗ ಒಮ್ಮೆ ಶ್ರೀ ಕೃಷ್ಣನು, ತನಗೆ ಪರಮಭಕ್ತರಾದ ಅವರಿಬ್ಬರನ್ನೂ ಅನುಗ್ರಹಿಸಬೇಕೆಂದ ಬುದ್ಧಿಯಿಂದ, ಅನೇಕ ಋಷಿಗಳನ್ನು ತನ್ನೊ ಡನೆ ಕೆರೆದುಕೊಂಡು, ದಾರುಕಪ್ರೇರಿತವಾದ ರಥವನ್ನೇರಿ, ಅವರಿದ್ದ ಮಿಥಿಲಾಪುರಿಗೆ ಹೊರಟನು. ಓ ಪರೀಕ್ಷಿದ್ರಾಜಾ ! ಕೃಷ್ಣನು ಹೊರಟಾಗ ಅವನ ಹಿಂದೆ, ನಾರದ, ವಾಮದೇವ, ಆತ್ರಿ, ವ್ಯಾಸ, ಪರಶುರಾಮ, ಆಸಿತ, ಆರುಣ, ಬೃಹಸ್ಪತಿ, ಕಣ್ಣೂ, ಮೈತ್ರೇಯ, ಚ್ಯವನರೇ ಮೊದಲಾದ ಮಹ ರ್ತಿಗಳೊಡನೆ ನಾನೂ ಅಲ್ಲಿಗೆ ಹೊರಟನು. ಕೃಷ್ಣನು ಬಂದ ವೃತ್ತಾಂತ ವನ್ನು ಕೇಳಿದೊಡನೆ, ಅಲ್ಲಿನ ಪುರವಾಸಿಗಳೂ,ದೇಶವಾಸಿಗಳೂ, ರಾಜಕುಮಾ ರರೂ ಇದಿರುಗೊಂಡು ಬಂದು, ಬ್ರಾಹ್ಮಣರು ಶುಕ್ರಾಗ್ರಹಗಳೊಡನೆ ಉದಿಸಿಬರುವ ಸೂಲ್ಯವನ್ನು ಹೇಗೋಹಾಗೆ ಅರ್ಫಾದಿಗಳಿಂದ ಪೂಜಿಸಿದ ರು, ಕೃಷ್ಣನು ಬರುತ್ತಿರುವಾಗ ಆನರ, ಧನ್ವ, ಕುರುಜಾಂಗಲ, (ಕುರುಕ್ಷೇ ತ್ರ) ವಂಗ, ಮ, ಪಾಂಚಾಲ, ಕುಂತಿ, ಮಧು, ಕೇಕಯ, ಕೋಸಲ, ಅಗ್ಗೆ ಮೊದಲಾದ ಅನೇಕದೇಶಗಳ ಸ್ತ್ರೀಪುರುಷರೆಲ್ಲರೂ, ಹಸನ್ಮುಖದಿಂ ದಲೂ, ಪ್ರಸನ್ನ ದೃಷ್ಟಿಯಿಂದಲೂ, ಸುಂದರವಾದ ಶ್ರೀ ಕೃಷ್ಣನ ಮ .ಖಲಾವಣ್ಯರಸವನ್ನು ತಮ್ಮ ನೇತ್ರಾಂಜಲಿಗಳಿಂದ ತೃಪ್ತಿಯಿಲ್ಲದೆ ಪಾನ ಮಾಡುತಿದ್ದರು. ಲೋಕಗುರುವಾದ ಶ್ರೀ ಕೃಷ್ಣನು ತನ್ನ ದರ್ಶನದಿಂದಲೇ ಪಾವನರಾದ ಆ ಜನರೆಲ್ಲರನ್ನೂ, ತನ್ನ ಕಟಾಕ್ಷವೀಕ್ಷಣದಿಂದಲೂ ಅನು ಗ್ರಹಿಸುತ್ತ, ಅಲ್ಲಲ್ಲಿ ದೇವತೆಗಳಿಂದಲೂ, ಮನುಷ್ಯರಿಂದಲೂ ಕೀರ್ತಿಸಲ್ಪ ಡುತ್ತಿರುವ ಪರಿಶುದ್ಧವಾದ ತನ್ನ ಯಶಸ್ಸನ್ನು ಕಿವಿಯಿಂದ ಕೇಳುತ್ತ,ಮೆಲ್ಲಗೆ ವಿದೇಹದೇಶಕ್ಕೆ ಬಂದು ಸೇರಿದನು. ಕೃಷ್ಣನು ಬಂದನೆಂಬ ವೃತ್ತಾಂತವ ನ್ನು ಕೇಳಿದೊಡನೆ, ಅಲ್ಲಿನ ಪೌರಜಾನಪದಜನಗಳೆಲ್ಲವೂ ಕೈಕಾಣಿಕೆಗಳೊಡನೆ