ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೯೮

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, ೮೩.] ದಶಮಸ್ಕಂಧವು. ೨೩೯ ಆಜ್ಞಾಪಿಸಬೇಕು ! ನಾನು ಪ್ರತ್ಯಕ್ಷನಾಗಿರುವಾಗ ನನ್ನಲ್ಲಿ ಮುಕ್ತಿಯನ್ನು ಕೇಳಿಕೊಳ್ಳದೆ ನನ್ನ ಸೇವೆಯನ್ನು ಬಯಸುವುದೇಕೆ ?” ಎಂದು ನೀನು ಕೇಳು ವೆಯಾ ? ದೇವಾ ! ನಿನ್ನ ದರ್ಶನವೇ ಮುಕ್ತಿ ! ನೀನು ಕಣ್ಣಿಗೆ ಗೋಚ ರಿಸದಿರುವವರೆಗೆ ಮಾತ್ರವೇ ಮನುಷ್ಯನಿಗೆ ತಾಪತ್ರಯಸಂಬಂಧವೇ ಹೊರತು, ನಿನ್ನನ್ನು ಕಣ್ಣಾರೆ ಕಂಡಮೇಲೆ, ಅದಕ್ಕಿಂತಲೂ ಅತಿಶಯವಾದ ಶ್ರೇಯಸ್ಸೇನಿರುವುದು ? ಆದುದರಿಂದ ಈಗ ನಿನ್ನ ಪಾದಸೇವೆಯೇ ನನ್ನ ಅಭೀಷ್ಟವು. ” ಎಂದನು. ಇದನ್ನು ಕೇಳಿ ಆಶ್ರಿತದುಃಖನಿವಾರಕನಾದ ಕೃಷ್ಣನು, ಆ ಬ್ರಾಹ್ಮಣನ ಕೈಯನ್ನು ಹಿಡಿದು ಮಂದಹಾಸಪೂಕವಾಗಿ ಹೀಗೆಂದು ಹೇಳುವನು. ಓ ಬ್ರಾಹ್ಮಣತ್ರಮಾ ! ಈ ಮಹರ್ಷಿಗಳೆಲ್ಲರೂ ನಿನ್ನನ್ನು ಅನುಗ್ರಹಿಸುವುದಕ್ಕಾಗಿಯೇ ಇಲ್ಲಿಗೆ ಬಂದಿರುವರೆಂದು ತಿಳಿ ! ಇವರೆಲ್ಲರೂ ಯಾವಾಗಲೂ ನನ್ನಲ್ಲಿ ನಟ್ಟ ಮನಸ್ಸುಳ್ಳರಾದುದರಿಂದ, ಇವಕಡೆಯಲ್ಲಿ ನಾವೇ ಇರುವೆನು ಹೀಗೆ ನನ್ನೊಡನೆ ನಿತ್ಯಸಂಬಂಧವುಳ್ಳ ಈ ಮಹಾತ್ಮರು, ತಮ್ಮ ಪಾದರೇಣುಸಂಬಂಧದಿಂದ ಲೋಕವನ್ನು ಪಾವನಮಾಡುವುದಕ್ಕಾಗಿಯೇ ಅಲ್ಲಲ್ಲಿ ಸಂಚರಿಸುತ್ತಿರು ವರು, ದೇವತಾ ಪ್ರತಿಮೆಗಳೂ, ಪುಣ್ಯಕ್ಷೇತ್ರಗಳ, ಪುಣ್ಯತೀರಗಳೂ, ಬಹಳದೀರ್ಘಕಾಲದವರೆಗೆ ದರ್ಶನಸ್ಪರ್ಶನಾದಿಗಳಿಂದ ತಮ್ಮನ್ನು ಸೇವಿ ಸಿದ ಮನುಷ್ಯರನ್ನು ಪಾವನಮಾಡುವುವು, ಅವುಗಳಿಗೆ ಆ ಮಹಿಮೆಯುಂ ಟಾದುದೂ ಇಂತಹ ಭಕ್ತರ ಕಟಾಕ್ಷಸಂಬಂಧದಿಂದಲೇ ಬಂದುದೆಂದು ತಿಳಿ! ಓ ಬಾಹ್ಮಣೋತ್ತಮಾ ! ಪ್ರಾಣಿವರ್ಗದಲ್ಲಿ ಮನುಷ್ಯ ಜನ್ಮವು ಶ್ರೇಷ್ಠ ವೆನಿಸಿರುವುದು, ಅದರಲ್ಲಿಯೂ ಬ್ರಾಹ್ಮಣನು ಜಾ ತಿಮಾತ್ರದಿಂದಲೇ ಶ್ರೇಷ್ಠ ತಮನೆನಿಸುವನು. ಆ ಬ್ರಾಹ್ಮಣರಲ್ಲಿಯೂ ತಪಸ್ವಿಯಾದವನು ಉತ್ತಮನು, ವೇದಾಂತವಿದ್ಯೆ ಯನ್ನು ಅಧಿಕುಸಿದವನು ಅವನಿಗಿಂತಲೂ ಉತ್ತಮನು. ನಿತ್ಯಸಂತೋಷವುಳ್ಳವನು ಅವನಿಗಿಂತಲೂ ಉತ್ತಮನು. ನನ್ನ ಉಪಾಸನೆಯಲ್ಲಿ ನಿರತನಾದವನು, ಇವರೆಲ್ಲರಿಗಿಂತಲೂ ಮೇಲೆಂಬು ದನ್ನು ಹೇಳಬೇಕಾದುದೇನು ? ಹೆಚ್ಚೇಕೆ ? ನನಗೆ ಎರಡುಭುಜವುಳ್ಳ ಈ ರೂಪವಾಗಲಿ, ನಾಲ್ಕು ಭುಜಗಳುಳ್ಳ ನನ್ನ ದಿವ್ಯರೂಪವಾಗಲಿ, ಬ್ರಾ 149 B