ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೩೦೪

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೬8 ಅಧ್ಯಾ, ೮೭.) ದಶಮಸ್ಕಂಧವು. ಲ್ಪಡುವುದು, ಕಾಠ್ಯರೂಪವಾದ ಈ ಜಗತ್ತು ಯಾವುದರಿಂದ ಉತ್ಪನ ವಾಗುವುದೋ, ಕೊನೆಗೆ ಯಾವುದರಲ್ಲಿ ಲಯದೊಂದವುದೋ ಆ ಬ್ರಹ್ಮವು ಪ್ರಪಂಚಕ್ಕಿಂತ ಬೇರೆನಿಸಲಾರದು, ಹೇಗೆಂದರೆ, ಮಣ್ಣು, ಗಡಿಗೆ, ಹರವಿ ಮೊದಲಾದ ವಿಕಾರಗಳನ್ನು ಹೊಂದಿದಾಗಲೂ ಅದಕ್ಕೆ ಮಣ್ಣೆಂ ಬ ವ್ಯವಹಾರವು ತಪ್ಪದಿರುವಂತೆ ಈ ಜಗತ್ತೂ ಕೂಡ ಆ ಬ್ರಹ್ಮಕ್ಕಿಂ ತಲೂ ಬೇರೆಸಿಸಲಾರದು, ಹೀಗೆ ಸೀನೇ ಸರಸ್ವರೂಪನಾಗಿಯೂ, ಸತ್ಯ ಕಾರಣನಾಗಿಯೂ ಇರುವುದರಿಂದ, ಜ್ಞಾನಿಗಳಾದ ಋಷಿಗಳೆಲ್ಲರೂ ನಿನ್ನನ್ನೇ ಧ್ಯಾನಿಸುತ್ತ ನಿನಗಾಗಿಯೇ ಕರ್ಮಗಳನ್ನು ನಡೆಸುತ್ತಿರುವರು. ದೇವಾ ! ಶೂನ್ಯವಾದ ಆಕಾಶದಲ್ಲಿ ಕಾಲಿಟ್ಟವನು, ತಲೆಕೆಳಗಾಗಿ ಕೆಳಗೆ ಬಿಳಬೇಕಾ ಗುವುದು. ಸ್ಥಿರವಾದ ನೆಲದಲ್ಲಿ ಕಾಲಿಟ್ಟವನು ಬಿಳಲಾರನು. ಹಾಗೆಯೇ ನಿನ್ನನ್ನು ದೈತಿಸಿ ನಡೆಸಿದ ತ್ರಿಕರಣವ್ಯಾಪಾರಗಳೂ, ನಿನ್ನ ಆರಾಧನ ರೂಪಗಳಾಗಿ, ಸಂಸಾರತಾಪವನ್ನು ನೀಗಿಸುವುವು. ಹಾಗಿಲ್ಲದೆ ಇತರದೇವತೆ ಗಳನ್ನು ದ್ವೇಶಿಸಿ ನಡೆಸಿದಾಗ, ಆವೇ ಪತನಹೇತುಗಳಾಗುವುವು. ಆದುದ ರಿಂದ ಋಷಿಗಳು ತಮ್ಮ ತ್ರಿಕರಣಗಳನ್ನೂ ನಿನ್ನಲ್ಲಿಯೇ ನಿಲ್ಲಿಸುವರು. ಸೃಷ್ಟಿ ಸ್ಥಿತಿ ಲಯಗಳೆಂಬ ಮೂರುಕಾಠ್ಯಗಳಿಗೂ ನಿರ್ವಾಹಕನಾದ ಓ ದೇವಾ ! "ವಿವೇಕಿಗಳಾದ ನಿತ್ಯಸೂರಿಗಳು, ಶ್ರವಣಕೀರ್ತನಾದಿಗಳಿಂದ ಸಮಸ್ತ ಪಾಪಗಳನ್ನೂ ನಿವಾರಿಸತಕ್ಕ ನಿನ್ನ ಕಥಾಮೃತಸಾಗರದಲ್ಲಿ ಓಲಾ ಡುವುದರಿಂದಲೇ ಅಧ್ಯಾತ್ಮಿಕಾದಿತಾಪಗಳನ್ನು ತಪ್ಪಿಸಿಕೊಂಡಿರುವರು. ಇನ್ನು ನಿನ್ನ ಸಂತತ ಧ್ಯಾನದಲ್ಲಿರತಕ್ಕವರು ಆ ತಾಪತ್ರಯವನ್ನು ತಪ್ಪಿಸಿ ಕೊಳ್ಳುವುದೇನಾಶ್ಚರವು. ಓ : ಪರಮಾ ! ನಿನ್ನ ವಿಷಯವಾದ ಜ್ಞಾನ ದಿಂದ, ರಾಗದ್ವೇಷಾದಿಮನೋವ್ಯಾಪಾರಗಳನ್ನೂ , ಜರಾಮರಣಾದಿಕಾಲ ಗುಣಗಳನ್ನೂ ಜಯಿಸಿ, ನಿತ್ಯಜ್ಞಾನಾನಂದಮಯವಾದ ನಿನ್ನ ಸ್ವ ರೂಪವನ್ನು ಸಮಾಧಿಯಿಂದ ಸಾಕ್ಷಾತ್ಕರಿಸತಕ್ಕವರಿಗೆ ತಾಪತ್ರ ಯವು ಬಿಟ್ಟು ಹೋಗುವುದೇನಾಶ್ಚರೈವು. ಓ ! ಪ್ರಭೂ ! ನಿನ್ನ ನಾಶ ಯಿಸುವುದಕ್ಕೆ ಅನುಕೂಲವಾದ ಜನ್ಮವು ಲಭಿಸಿರುವಾಗಲೂ, ನಿನ್ನ ನ್ನು ಬಿಟ್ಟು, ಇಂದ್ರಿಯತೃಪ್ತಿಯಲ್ಲಿ ಆಸೆಯುಳ್ಳವರ ಜನ್ಮವು ಕೇವಲ ನಿರರ್ಥಕ