ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೩೦೬

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೩೬ ಅಧ್ಯಾ, ೮೭] ದಶಮಸ್ಕಂಥವು. ಸಂಸಾರವೆಂಬ ಮೃತ್ಯುವಿನ ಬಾಯಲ್ಲಿ ಬಿಳಲಾರರು. ನೀನು ಸಮಸ್ತಕ್ಕೂ ಉಪಾದಾನಕಾರಣನಾದುದರಿಂದ, ನಿನ್ನಿಂದ ಸೃಷ್ಟ್ಯವಾದ, ಮತ್ತು ದೇವ ಮನುಷ್ಯಾದಿಭೇದಗಳಿಂದ ವಿಚಿತ್ರವಾದ ಜೀವಗಳಲ್ಲಿ ನೀನೂ ಅಂತರಾತ್ಮನಾ ಗಿಪ್ರವೇಶಿಸಿಯೇ, ಅವುಗಳ ಕಾಠ್ಯವನ್ನು ನಿರ್ವಹಿಸುತ್ತಿರುವೆ.ಆಗ್ನಿ ಯು ಹೆಚ್ಚು ಕಡಿಮೆಯಿಲ್ಲದ ಒಂದೇ ತೇಜಸ್ಸಿನಿಂದ ಬೆಳಗುವುದಾಗಿದ್ದರೂ, ತಾನು ಸೇರಿದ ಹುಲ್ಲು, ಕಡ್ಡಿ, ಮೊದಲಾದ ಆಶ್ರಯವಸ್ತುಗಳ ಆಕಾರಕ್ಕೆ ತಕ್ಕಂತೆ ಹೆಚ್ಚು ಕಡಿಮೆಯಾಗಿ ತೋರುವಂತೆ, ಸೀನೂ ನಿನ್ನಿಂದ ನಿರ್ಮಿತವಾದ ಆಯಾಜೀವಶರೀರಗಳಿಗೆ ತಕ್ಕಂತೆ, ಜ್ಞಾನದಲ್ಲಿ ಹೆಚ್ಚು ಕಡಿಮೆಗಳನ್ನು ತೋರಿಸು, ಅವುಗಳನ್ನೇ ಅನುಕರಿಸುತ್ತಿರುವೆ. ಆ ಶರೀರೆಗಳು ಕಂಡಿಹೋ ದರೂ ಅದರಿಂದ ನೀಗೆ ಯಾವವಿಧವಾದ ಕುಂದಕವೂ ಇರುವುದಿಲ್ಲ, ಏಕೆಂ ದರೆ, ನಿನ್ನ ಸ್ವರೂಪವು ಅಖಂಡಾನಂದಮಯವಾದುದು, ಆಯಾಕಾರ ವಸ್ತುಗಳ ದೋಷವು ನಿನ್ನ ನ್ನು ತಗುಲಲಾರದು. ಅಂತಹ ನಿನ್ನ ನಿತ್ಯಸ್ತ ರೂಪವನ್ನು ಶುದ್ಧ ಮನಸ್ಕರಾದ ಯೋಗಿಗಳೇ ಉಪಾಸನೆಯಿಂದ ತಿಳಿಯ ಬಲ್ಲರು. ನಿನ್ನಿಂದ ಸೃಷ್ಟವಾದ ದೇವಮನುಷ್ಯಾದಿದೇಹಗಳೇ ನಿನಗೆ ನಿವಾಸ ಸ್ಥಾನವು, ಆಶ್ಚರ ಶಕ್ತಿಯುಳ್ಳ ಸಿನ್ನ ಸಂಕಲ್ಪ ರೂಪಜ್ಞಾನದಿಂದಲೇ ನೀನು ಪುರುಷಾಕಾರವನ್ನು ಧರಿಸುವೆ. ನೀನು ಪುರುಷಾಕಾರದಲ್ಲಿದ್ದರೂ ಸಮಸ್ತ ವಸ್ತುಗಳ ಒಳಗೂ, ಹೊರಗೂ ವ್ಯಾಪಿಸಬಲ್ಲವನು. ಸ್ವರೂಪಸ್ವಭಾವಗ ಇಲ್ಲಿ ಸಂಕೋಚವಿಲ್ಲದವನು. ಈ ವಿಧವಾದ ನಿನ್ನ ಪುರುಷ ಸ್ವರೂಪವು ವೇದಾಂತಗಳಿಂ:ಲೇ ಪ್ರತಿಪಾದಿಸಲ್ಪಡುವುದು, ಹೀಗೆ ಪುರುಷಾಕಾರವುಳ್ಳ ನಿನ್ನ ವಿಗ್ರಹವನ್ನೂ , ನಿನ್ನ ನಾ ರಾಧಿಸುವುದಕ್ಕೆ ಉಪಯುಕ್ತವಾದ ಮನು ಜನ್ಮವನ್ನೂ, ಕೆಲವು ಜ್ಞಾನಿಗಳು ವಿಚಾರದಿಂದ ನಿಶ್ಚಯಿಸಿಕೊಂಡು, ಪ್ರಾ ಸೇಂದ್ರಿಯಗಳನ್ನು ಜಯಿಸಿ, ವೇದಪ್ರತಿಪಾದ್ಯವಾಗಿಯೂ, ಆಶ್ರಿತರಿಗೆ ಸಂಸಾರನಿವರ್ತಕವಾಗಿಯೂ ಇರುವ ನಿನ್ನ ಪಾದಾರವಿಂದವನ್ನು ದೃಢ ವಿಶ್ವಾಸದಿಂದ ಉಪಾಸಿಸುವರು. ಎಷ್ಮೆ ಶ್ರಮಪಟ್ಟರೂ ನಿನ್ನ ನಿಜಸ್ವ ರೂಪವನ್ನು ತಿಳಿಯುವುದು ಇತರರಿಗೆ ಸಾಧ್ಯವಿಲ್ಲವೆಂಬುದನ್ನು ತಿಳಿದೇ, ನೀನು ರಾಮಕೃಷ್ಣಾದಿರೂಪದಿಂದ ನಿನ್ನ ಮಹಿಮೆಯನ್ನು ಪ್ರಕಾಶಪಡಿಸುತ್ತಿರುವೆ.