ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೩೦೮

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೬೯ ಅಢಾ, ೮೭.} ದಶಮಸ್ಕಂಧವು. ಲೋಕದಲ್ಲಿ; ಜನನಮರಣಗಳಿಗೆ ಗುರಿಯಾಗಿರುವ ಯಾವ ಚೇತನನುತಾನೇ ತಿಳಿಯಬಲ್ಲನು? ಅದನ್ನು ತಿಳಿಯುವುದಕ್ಕೆ ಶಾಸ್ತ್ರ ಪ್ರಮಾಣದಿಂದಲ್ಲದೆ ಬೇರೆ ವಿಧದಿಂದ ಸಾಧ್ಯವಿಲ್ಲ. ಏಕೆಂದರೆ, ಆ ನಿನ್ನ ಆದಿಸ್ವರೂಪದಿಂದ ಬ್ರಹ್ಮನು ಹುಟ್ಟಿದನು, ಅದರಮೇಲೆ ಆ ಬ್ರಹ್ಮನಿಂದ ನಿವೃತ್ತಿ ಮಾರ್ಗನಿಷ್ಠರಾದ ಸನಕಾದಿಗಳೂ, ಪ್ರವೃತ್ತಿಧರ್ಮನಿಷ್ಠರಾದ ಮರೀಚಿ ಮೊದಲಾದವರೂ ಹುಟ್ಟಿದರು. ಅವರಿಂದ ಎರಡುವಿಧವಾದ ದೇವಗಣಗಳುಂಟಾದುವು. ಕೊನೆಗೆ ಮನುಷ್ಯರು ಹುಟ್ಟಿರುವರು. ಅಂತಹ ಮನಷ್ಯರಿಗೆ ಆ ಸಿನ್ನ ಪೂರೈ ಸ್ವರೂಪವು ಹೇಗೆತಾನೇ ತಿಳಿಯುವುದು ? ದೇವಾ ! ಸೀನು ಸಮಸ್ತ ವೇದಶಾಸ್ತ್ರಗಳನ್ನೂ ಉಪಸಂಹರಿಸಿ ಹೃದಯದಲ್ಲಿಟ್ಟುಕೊಂಡು ಮಲಗಿ ಬ್ಲಾಗ, ಸೃಷ್ಟಿಗೆ ಮೊದಲು ಚಿದಚಿತ್ಕಾಲಗಳೆಂಬ ತತ್ವಗಳೆಂದೂ ಕಾಣ ದಂತೆಯೇ ಇದ್ದುವು. * ಆದರೆ, ಸೃಷ್ಟಿ ವಿಚಾರದಲ್ಲಿ ಬೇರೆ ಬೇರೆ ಮತ ದವರು ಬೇರೆಬೇರೆ ಸಿಧವಾಗಿ ವಿಕಲ್ಪಿಸುವರು. ತಾರ್ಕಿಕರು ಅಸಮ್ಮ ವ್ಯಕ್ಕೆ ಉತ್ಪತ್ತಿಯನ್ನೂ (ಸತ್ತೆಯನ್ನೂ) ಸವ್ಯಕ್ಕೇ ಮೃತಿಯ ನ್ಯೂ ನಿರೂಪಿಸುವರು. ಚಾಕಮತದವರು ಆತ್ಮನಿಗೇ ದೇವಮನುಷ್ಯಾದಿ ಭೇದಗಳನ್ನೂ , ಸಣ್ಣದು ದೊಡ್ಡದೆಂಬ ಆಕಾರವಿಭೇದಗಳನ್ನೂ ಹೇಳುವರು. ಮೀಮಾಂಸಕೆ ದೇವತೆಗಳಿಗೂ, ಮನುಷ್ಯರಿಗೂ ವಾಣಿಜ್ಯಫಲದಂತೆ ಪರಸ್ಪರೋಪಕಾರರೂಪವಾಗಿರುವ ಸ್ವರ್ಗಾ ಫಲಗಳನ್ನು ಸತ್ಯವೆಂದೇ ನಿರೂಪಿಸುವರು. ಈ ತಾರ್ಕಿಕಾದಿಮತದವರೆಲ್ಲರೂ, ಈ ವಿಧವಾಗಿ ತಮ್ಮಲ್ಲಿ ತಾವು ಭ್ರಾಂತಿಗೊಂಡಿರುವುದು ಮಾತ್ರವಲ್ಲದೆ, ಸಲ್ಲದ ಯುಕ್ತಿಗೆ ಳಿಂದ ಲೋಕಕ್ಕೂ ಅದನ್ನೆ ಉಪದೇಶಿಸುವರು. ಸಿರಿಶ್ಚರವಾದಿಗಳು ಸತ್ಯಾದಿಗುಣಪ್ರಚುರನಾದವನು ಜೀವನೇಹೋರತು, ಆ ಜೀವನಿಗಿಂತಲೂ ವಿಲಕ್ಷಣ ನಾದ ಈಶ್ವರನೇ ಇಲ್ಲವೆಂದು ಹೇಳುವರು. ಈ ಮತಭೇದಗಳೆಲ್ಲವೂ ನಿನ್ನ ನಿಜಸ್ಥಿತಿಯನ್ನು ತಿಳಿಯಲಾರದ ಅಜ್ಞತೆಯಿಂದ ಏರ್ಪಟ್ಟು ದೇಹ ರತು ಬೇರೆಯಲ್ಲ ? ಜೀವಪ್ರಕೃತಿಗಳಿಗಿಂತಲೂ ವಿಲಕ್ಷಣನಾಗಿ, ಜ್ಞಾನಸ್ಸ

  • ಇಲ್ಲ “ಏಕೋಹತ್ಯೆ ನಾರಾಯಣ ಆಸೀತ್, ನಬ್ರಹ್ಮಾ ನೇಶಾನೋ ನೇ ಮೇ ದ್ಯಾವಾಪೃಥಿವೀ” ಎಂಬೇ ಶ್ರುತ್ಯರವು ಪ್ರದಿಪಾದಿಸಲ್ಪಡುವುದು.