ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೩೧೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೭೨ ಶ್ರೀಮದ್ಭಾಗವತವು [ಅಧ್ಯಾ, ೮೭ ° ವಲ್ಲವೆ ? * ಇದಲ್ಲದೆ ಜೀವಾತ್ಮಕ್ಕೆ ಶ್ರುತಿಗಳಲ್ಲಿ ಹೇಳಲ್ಪಟ್ಟಂತೆ ನೇತ್ರಾದಿ ರಂಥಗಳಮೂಲಕವಾಗಿ ಶರೀರವನ್ನು ಬಿಟ್ಟು ಹೋಗುವುದು, ಲೋಕಾಂ ತರವನ್ನು ಸೇರುವುದು, ತಿರುಗಿ ಭೂಮಿಗೆ ಬಂದು ಕರಗತಿಯಲ್ಲಿ ತೊಳಲು ವುದು, ಎಂಬೀ ಉತ್ಸಾ೦ತಿ, ಗತಿ, ಆಗತಿ ಮೊದಲಾದ ನಿಯಮಗಳಿಗೂ ಸಂಭವವಿಲ್ಲದೆ ಹೋಗುವುದು, ಯಾವನ ಸ್ವರೂಪದಿಂದಲೇ ಈ ಜಗತ್ತೆಲ್ಲ ವೂ ಹುಟ್ಟುವುದೋ ಆ ಪರಬ್ರಹ್ಮನು, ತಾನೂ ಅದರೊಳಗಿದ್ದು ನಿಯ ಮಿಸುವನೆಂಬ ತತ್ವವನ್ನು ಚೆನ್ನಾಗಿ ಪರಿಶೀಲಿಸದೆ ಹೇಳತಕ್ಕವರ ಮತವು ಕೇವಲ ದೋಷಾಸ್ಪದವು, ಪ್ರಾಮಾಣಿಕರಿಗೆ ಅದು ಅಭಿಮತವಾದುದಲ್ಲ! ಜೀವಪ್ರಕೃತಿಗಳೆರಡಕ್ಕೂ ಉತ್ಪತ್ತಿಯಾದುದರಿಂದ, ಅಜವೆನಿಸಿಕೊಂಡಿ ದ್ಯರೂ, ಅವೆರಡರ ಸಂಯೋಗದಿಂದ ಪ್ರಾಣಿಗಳು ಬಗೆಬಗೆಯ ನಾಮ ರೂಪಭೇದಗಳಿಂದ ತೋರುತ್ತಿರುವುವು, ಸಮುದ್ರದ ಜಲಾವಯವಗಳೇ ವಾಯುಪ್ರೇರಿತಗಳಾಗಿ, ಒಂದೊಂದಕ್ಕೆ ಸೇರಿದಾಗ, ಅದರಿಂದ ಗುಳ್ಳೆಗಳು ಹೊರಡುವುವಲ್ಲವೆ ? ಅದರಂತೆಯೇ ಪ್ರಕೃತಿಪುರುಷರಿಗೆ ಸಹಜವಾದ ಉತ್ಪ ತಿವಿನಾಶಗಳಿಲ್ಲದಿದ್ದರೂ,ಅವಕ್ಕೆ ಪರಸ್ಪರಸಂಯೋಗದಿಂದ ದೇಮನುಷ್ಯಾ ದಿಶರೀರವೆಂಬ ವಿಶಿಷ್ಟವಿರೂಪದಿಂದ ಉತ್ಪತ್ತಿಯಂದು, ಆ ರೂಪೋತ್ಪತ್ತಿ ಯಲ್ಲಿಯೂ ನೀನೇ ಅವುಗಳಿಗೆ ಆಧಾರಭೂತನಾಗಿ ಅಂತವ್ಯಾಪಿಯಾಗಿರುವೆ. ಈ ಪ್ರಾಣಿಗಳೆಲ್ಲವೂ ಕೊನೆಗೆ ಪ್ರಳಯದಶೆಯಲ್ಲಿ, ಸುಗಳು ಸಮುದ್ರ ದಲ್ಲಿಯೂ, ಪುಷ್ಪರಸಗಳು ಜೇಸಿನಲ್ಲಿಯೂ ಲಿನವಾಗುವಂತೆ, ನಾಮರೂಪ ಗಳಿಂದ ಬೇರ್ಪಡಿಸುವುದಕ್ಕೆ ಅವಕಾಶವಿಲ್ಲದ ಹಾಗೆ, ನಿನ್ನಲ್ಲಿ ಲಯಿಸುವುವು. ಮನುಷ್ಯರಿಗೆ ಪ್ರಕೃತಿಸಂಬಂಧದಿಂದ ದೇಹಾತ್ಮಾಭಿಮಾನರೂಪವಾದ ಭ್ರಮವು ಹುಟ್ಟಿ, ಅದೇ ಸಂಸಾರಕಾರಣವಾಗುವುದರಿಂದ, ವಿದ್ವಾಂಸರು ಈ ತತ್ವವನ್ನು ತಿಳಿದು ನಿನ್ನಲ್ಲಿ ದೃಢಭಕ್ತಿಯನ್ನಿಡುವರು. ಹಾಗೆ ನಿನ್ನನ್ನು ಭಕ್ತಿಯೆಂದನುವರ್ತಿಸತಕ್ಕವರಿಗೆ, ಸಂಸಾರಭಯವೆಂಬುದು ಹುಟ್ಟುವುದೇ ಜೀವನು ಯಾವಾಗಲೂ ಸತ್ವಗತನಾಗಿದ್ದ ಪಕ್ಷದಲ್ಲಿ, ದೇಹವನ್ನು ಬಿಟ್ಟು ಹೊರಡುವುದು, ಗತಿ, ಆಗತಿ ಮೊದಲಾದುವಕ್ಕೆ ಅವಕಾಶವಿಲ್ಲ, ಅವನ್ನು ಅನುಸ್ವರ ಪನಾಗಿದ್ದಾಗಲೇ ಇವು ನಡೆಯಬೇಕೆಂದು ಭಾವವು.