ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೩೨೦

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಥ್ಯಾ. ೮೮.] ದಶಮಸ್ಕಂಧವು. ೨೩೮೧ ವಾಗ, ಈಗ ನೀನು ಕೇಳಿದ ಪ್ರಶ್ನೆ ಯನ್ನೇ ಕೇಳಿದನು, ಆಶ್ರಿತರಿಗೆ ಉತ್ತಮ ಪುರುಷಾರ್ಥವಾದ ಮೋಕ್ಷವನ್ನು ಕೈಗೂಡಿಸುವುದಕ್ಕಾಗಿಯೇ ಯದುಕುಲ ದಲ್ಲಿ ಅವತರಿಸಿದ ಶ್ರೀಕೃಷ್ಣನು, ಒಂದೆರಡುಮಾತುಗಳಲ್ಲಿಯೇ ಅದರ ಸಾ ರಾಂಶವನ್ನು ಹೀಗೆಂದು ತಿಳಿಸಿರುವನು.(ಓ!ಧರ್ಮರಾಜಾ'ನಾನು ಯಾರನ್ನು ಅನುಗ್ರಹಿಸಬೇಕೆಂದು ಸಂಕಲ್ಪಿಸುವೆನೋ, ಮೊದಲುಅವರಥನವನ್ನೂ,ಭೋ ಗಸಾಮಗ್ರಿಗಳನ್ನೂ ಮೆಲ್ಲಗೆ ಅಪಹರಿಸಿಬಿಡುವೆನು. ಇದರ ಕಾರಣವೇನೆಂದು ಕೇಳುವೆಯಾ?ಮನುಷ್ಯನು ಧನಹೀನನಾಗಿ ಕಷ್ಟಪಡುತ್ತಿರುವಾಗ ಅವನನ್ನು ಸ್ವಜನರೆಲ್ಲರೂ ತಾವಾಗಿ ಬಿಟ್ಟು ಹೋಗುವರು. ಅದರಿಂದ ಅವನಿಗೆ ಸ್ವಜ ನಾಭಿಮಾನವು ತಪ್ಪುವುದು ಅವನಿಗೆ ದಾರಿದ್ರದಶೆಯು ಹೆಚ್ಚು ಇಬಂದ ಹಾಗೆಲ್ಲಾ ಇಹಲೋಕಸುಖದಲ್ಲಿ ನಿರಾಶೆಯುಂಟಾಗಿ, ಪರಲೋಕದ ಮೇಲೆ ದೃಷ್ಟಿಯ) ಹೋಗುವುದು, ಲೌಕಿಕಸುಖದ ಆಸೆಯನ್ನೇ ಬಿಟ್ಟು ಸಾಧುಗಳಾದ ನನ್ನ ಭಕ್ತರೊಡನೆ ಸಹವಾಸಮಾಡುವನು. ಆ ಸಹವಾಸಬ ಲದಿಂದ ನನ್ನ ಅನುಗ್ರಹಕ್ಕೆ ಪಾತ್ರನಾಗುವನು. ಕ್ರಮಕ್ರಮವಾಗಿ ಅವನ ಮನಸ್ಸು ಶುದ್ಧವಾದಮೇಲೆ, ಅವನಿಗೆ ಪ್ರಕೃತಿಪುರುಷರಿಗಿಂತಲೂ ವಿಲಕ್ಷಣ ವಾಗಿಯೂ, ಸೂಕ್ಷವಾಗಿಯೂ, ಜ್ಞಾನಸ್ವರೂಪಮಾತ್ರವಾಗಿಯ, ಕಾಲದೇಶಾದಿಪರಿಚ್ಛೇದವಿಲ್ಲದುದಾಗಿಯೂ ಇರುವ ಬ್ರಹ್ಮ ಸ್ವರೂಪ ವನ್ನು ತೋರಿಸುವೆನು.ಹೀಗೆ ನಾನು ನನ್ನ ನ್ನು ಭಜಿಸತಕ್ಕವರಿಗೆ ಮೊದಲು ಕಷ್ಟವನ್ನೇ ತಂದಿಡುವುದರಿಂದ, ದೂರದೃಷ್ಟಿಯಿಲ್ಲದ ಕೆಲವರು, ನನ್ನನ್ನು ಬಿಟ್ಟು ತತ್ಕಾಲಕ್ಕೆ ಸುಖಪ್ರದರಾಗಿದ್ದರೂ, ಕೊನೆಗೆ ದುಃಖಪ್ರದ ರಾಗಿಯೂ, ತಾವೇ ಕರ್ಮಪಾಶದಲ್ಲಿ ಸಿಕ್ಕಿ ದುಃಖಿತರಾಗಿಯೂ ಇರುವ ಇತರದೇವತೆಗಳನ್ನು ಭಜಿಸುವರು. ಆ ದೇವತೆಗಳೇ ತಮಗೆ ನಿತ್ಯಸುಖ ಪ್ರದರೆಂದು ಭ್ರಮಿಸುವರು. ಇದಲ್ಲದೆ ರುದ್ರಾದಿದೇವತೆಗಳೆಲ್ಲರೂ, ತಮ್ಮ ನ್ನು ಭಜಿಸತಕ್ಕ ವರವಿಷಯದಲ್ಲಿ ಬಹುತೀಘ್ರವಾಗಿ ಸಂತೋಷಪಡುವ ಸೈ ಭಾವವುಳ್ಳವರು. ಆದುದರಿಂದ ತಮ್ಮನ್ನು ಭಜಿಸತಕ್ಕವರಿಗೆ ಕೇಳಿದ ಭೋಗ್ಯ ಶ್ವದ್ಯಾದಿಗಳನ್ನು ಬೇಗನೆ ಅನುಗ್ರಹಿಸಿಬಿಡುವರು, ಅವರಿಂದ ವರವನ್ನು ಪಡೆದ ಭಕ್ತರೂಕೂಡ, ಆ ಐಶ್ವರದಿಂದ ಮತ್ತರಾಗಿ, ದಾರಿತಪ್ಪಿನಡೆಯುತ್ತ, ಕೊ