ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೩೨೮

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭೮೬, ಅಧ್ಯಾ, ಆಕೆ.] ದಶಮಸ್ಕಂಧವು. ರುದುರನೆ ನೋಡುತ್ತ • ಮಹೇಶ್ವರಾ ! ನೀನು ನನ್ನ ಮೈಯನ್ನು ಮುಟ್ಟ ಬೇಡ! ನೀನು ಲೋಕದ ನಡತೆಯೆಲ್ಲವನ್ನೂ ಬಿಟ್ಟು ದಾರಿತಪ್ಪಿ ನಡೆಯತಕ್ಕೆ ವನು”ಎಂದು ಆ ರುದ್ರನ ಅಂಗಸ್ಪರ್ಶಕ್ಕೆ ಸಮ್ಮತಿಸದೆಹೋದನು, ಈ ಮಾ ತನ್ನು ಕೇಳಿ ರುದ್ರನ ಕಣ್ಣುಗಳು ಕೆಂಡದಂತೆ ಕೆಂಪಾದುವು. ಶೂಲವನ್ನೆತ್ತಿ ಕೊಂಡು ಆ ಭಗುವನ್ನು ಆಕ್ಷಣವೇ ಕೊಂದುಬಿಡುವುದಕ್ಕಾಗಿ ಯತ್ನಿಸಿ ದನು, ಆಗ ಸಮೀಪದಲ್ಲಿದ್ದ ಪಾಶ್ವತಿಯು, ಪತಿಯ ಕಾಲಿಗೆ ಬಿದ್ದು, ಸಾಂತ್ವ ವಾಕ್ಯಗಳಿಂದ ಸಮಾಧಾನಪಡಿಸಿದಳು. ಆಮೇಲೆ ಬೃಗುವು ಅಲ್ಲಿಂದಹೊರ ಟು ವೈಕುಂಠಕ್ಕೆ ಹೋದನು.ಆಗ ವಿಷ್ಣುವು ಅಲ್ಲಿ ಸುಖನಿದ್ರೆಯನ್ನು ಮಾಡು ತಿರಲು, ಭಗವು ನೆಟ್ಟಗೆ ಮುಂದೆಬಂದು, ಲಕ್ಷ್ಮಿ ದೇವಿಗೆ ನಿವಾಸಭೂತ ವಾದ ಆ ಭಗವಂತನ ವಕ್ಷಸ್ಥಲದಮೇಲೆ ಕಾಲಿಂದೊದೆದನು. ಒಡನೆಯೇ ಶ್ರೀಹರಿಯು ಧಿಗ್ಗನೆ ಹಾಸಿಗೆಯಿಂದೆದ್ದು, ಲಕ್ಷ್ಮೀಸಹಿತನಾಗಿ ಆ ಮಹರ್ಷಿ ಯ ಪಾದಗಳನ್ನು ಹಿಡಿದು ನಮಸ್ಕರಿಸಿ, ಹೀಗೆಂದು ಹೇಳುವನು. ಬ್ರಾಹ್ಮ ಥೋತ್ಸಮಾ ! ನಿನಗೆ ಸುಖಾಗಮನವೆ ? ಈ ಆಸನದಮೇಲೆ ಕುಳಿತು ಸ್ವಲ್ಪ ಹೊತ್ತು ವಿಶ್ರಮಿಸಿಕೊಳ್ಳಬೇಕು, ಸ್ವಾಮೀ ! ತಾವು ಬಂದುದನ್ನು ತಿಳಿಯದೆ ನಿದ್ರೆಯಿಂದ ಮೈಮರೆತು ಮಲಗಿದ್ದ ನನ್ನ ಇದೊಂದಪರಾಧವನ್ನು ಮನ್ನಿ ಸಬೇಕು ! ಓ ಮಹಾತ್ಮಾ ! ನಿನ್ನ ಪಾದತೀರವು ಗಂಗಾದಿಪಞ್ಞತೀರಗಳ ನ್ನು ಕೂಡ ತೀರಿಕರಿಸತಕ್ಕುದು. ಆದುದರಿಂದ ಆ ನಿಮ್ಮ ಪಾದತೀರ ಸಂಬಂಧದಿಂದ ತನ್ನ ನ್ಯೂ, ತನ್ನಲ್ಲಿರುವ ಲೋಕಗಳನ್ನೂ, ಲೋಕಪಾಲ ಕರನ್ನೂ ಪಾವನಮಾಡಬೇಕು, ತಮ್ಮ ಪಾದಸ್ಪರ್ಶವಾದುದರಿಂದ ಈಗಲೇ ನಾನು ಪವಿತ್ರನಾದೆನು, ನನ್ನ ಎದೆಯು ಲಕ್ಷ್ಮಿಗೆ ನಿತ್ಯನಿವಾಸ ಯೋಗ್ಯವಾಯಿತು.” ಎಂದನು. ಹೀಗೆ ಮೃದುಗಂಭೀರವಾಕ್ಯದಿಂದ ಮಹಾ ವಿಷ್ಣುವು ತನ್ನಲ್ಲಿ ಪ್ರಾರ್ಥಿಸುವುದನ್ನು ಕೇಳಿ ಭಗುವು, ಸಂತೋಷದಿಂದ ಮೈಮರೆತು,ಕಣ್ಣುಗಳಲ್ಲಿ ಆನಂದಬಾಷ್ಪವನ್ನು ಸುರಿಸುತ್ತ, ಆ ಭಗವಂತನ ಮುಂದೆ ಯಾವ ಮಾತನ್ನೂ ಆಡುವುದಕ್ಕೆ ತೋರದೆ, ಅಲ್ಲಿಂದ ತಟ್ಟನೆ ಹಿಂತಿರುಗಿ, ಬ್ರಹ್ಮವಾದಿಗಳಾದ ಮುನಿಗಳು ಸತ್ರಯಾಗವನ್ನು ನಡೆಸುತ್ತಿದ್ದ ಸ್ಥಳಕ್ಕೆ ಬಂದು, ತಾನು ನಡೆಸಿ ಬಂದ ವೃತ್ತಾಂತಗಳೆಲ್ಲವನ್ನೂ ಅವರಿಗೆ ವಿವ