ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೩೪೫

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪ov ಶ್ರೀಮದ್ಭಾಗವತವು [ಅಧ್ಯಾ. ೯೦. ಗಳೂ ಎಷ್ಟೊಪ್ರಯತ್ನ ಪಡುವರೋ, ಅಂತಹ ಮಹಾಲಕ್ಷ್ಮಿಯೇ ಅವನಿಗೆ ಅನನ್ಯಾರ್ಹಶೇಷಭೂತೆಯಾಗಿರುವಾಗ, ಅವನ ಪ್ರಭಾವವನ್ನು ಎಷ್ಟೆಂದು ಹೇಳಬಹುದು ? ಪರಮಕಾರುಣಿಕನಾದ ಆ ಶ್ರೀಕೃಷ್ಣನು, ತನ್ನ ಹೆಸರ ನ್ನು ಒಂದಾವರ್ತಿ ಕಿವಿಯಿಂದ ಕೇಳಿದವರಿಗೂ, ಬಾಯಿಂದಾಡಿದವರಿಗೂ, ಅರಜ್ಞಾನವಿಲ್ಲದೆ ಬಾಯಿಗೆ ಬಂದಂತೆ ತನ್ನ ನಾಮವನ್ನು ಭರಿಸಿದವರಿಗೂ ಅಶುಭಗಳೆಲ್ಲವನ್ನೂ ನೀಗಿಸಿ, ಕ್ಷೇಮವನ್ನುಂಟುಮಾಡುವನು. ಆತನೇ ಧರ ಪ್ರವರ್ತಕನು, ಕಲಾಭಿಮಾನಿಯಾದ ಸುದರ್ಶನಚಕ್ರವೇ ಯಾವನ ಆಯುಧವೆನಿಸಿರುವುದೋ, ಅಂತಹ ಭಗವಂತನಾದ ಶ್ರೀಕೃಷ್ಣನು, ಭೂಭಾರಪರಿಹಾರರೂಪವಾದ ಕಾಠ್ಯವನ್ನು ನಡೆಸಿದೊಂದು ಚಿತ್ರವಲ್ಲ. ಸಮಸ್ತಪ್ರಾಣಿಗಳಿಗೂ ಆಧಾರಭೂತನಾದ ಆ ಭಗವಂತನು, ತನಗೆ ಕರಾಢೀನವಾದ ಜನನವಿಲ್ಲದಿದ್ದರೂ, ದೇವಕೀದೇವಿಯ ಗರ್ಭದಲ್ಲಿ ಜನಿಸಿ ದನೆಂಬ ನಾಮಮಾತ್ರಕ್ಕೆ ಪಾತ್ರನಾಗಿ, ಯದುವೀರರೆಂಬ ಭುಜಗ ಳಿಂದ ಲೋಕದಲ್ಲಿ ಅಧರ ವನ್ನು ನಿರೂಲಮಾಡಿದನು ಮತ್ತು ಬೃಂದಾವನದಲ್ಲಿರುವ ತರು, ಗುಲ್ಕ, ಲತಾಡಿ ಸ್ಥಾವರಗಳಿಗೂ, ಪಶುಪಕ್ಷಿ ಮೃಗಾದಿಜಂಗಮಗಳಿಗೂ, ತನ್ನೊಡನೆ ಯಾವುದೋ ಒಂದು ವಿಧವಾದ ಸಂಬಂಧದಿಂದ, ಮೋಕ್ಷಪ್ರತಿಬಂಧಕವಾದ ಪಾಪವನ್ನು ನೀಗಿಸಿ ಉತ್ತಮ ಗತಿಯನ್ನು ಂಟುಮಾಡಿದನು, ಮುದ್ದುಬೀರುವ ತನ್ನ ಮುಖವಿಕಾಸದಿಂದಲೇ ಗೋಪಸಿಯರ ಮನಸ್ಸನ್ನು ಮೋಹಗೊಳಿಸಿ, ಅವರಿಗೂ ಉತ್ತಮಗತಿ ಯನ್ನು ಅನುಗ್ರಹಿಸಿದನು. ಹೀಗೆ ಸಕಲಜಗದುದ್ಧಾರಕನಾದ ಶ್ರೀ ಕೃಷ್ಣ ನು ಸಕ್ಕೋತ ನಾಗಿರಲಿ ! ಓ ಪರೀಕ್ಷಿದ್ರಾಜಾ ! ವೇದಗಳ ಮೂಲಕ ವಾಗಿ ಮೊದಲು ತನ್ನಿಂದ ನಿರ್ಣಯಿಸಲ್ಪಟ್ಟ ಧರಗಳನ್ನು ರಕ್ಷಿಸುವುದಕ್ಕಾ ಗಿಯೇ, ಮನುಷ್ಯ ದೇಹವನ್ನು ಕೈಕೊಂಡು, ಆ ಮನುಷ್ಯನಟನೆಗಳಿಂದಲೇ ತನ್ನ ಆಪಾರಮಹಿಮೆಯನ್ನು ತೋರಿಸಿದ ಆ ಕೃಷ್ಣನ ಚರಿತ್ರಗಳು, ಕಿವಿ ಯಿಂದ ಕೇಳಿದವರಿಗೂ, ಬಾಯಿಂದಾಡಿದವರಿಗೂ, ಭಕ್ತಿಪ್ರತಿಬಂಧಕಗ ಳಾದ ಸಮಸ್ತಪಾಪಗಳನ್ನೂ ನೀಗಿಸುವುವು. ಆತನ ಪಾದಾರವಿಂದದಲ್ಲಿ ಭಕ್ತಿಯನ್ನ ಪೇಕ್ಷಿಸತಕ್ಕವನು, ಅವಶ್ಯವಾಗಿ ಅದನ್ನು ಕೇಳಬೇಕು, ಪ್ರತಿ