ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೪೩

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೧೬ ಶ್ರೀಮದ್ಭಾಗವತವು (ಅಧ್ಯಾ, ೫೩• ಗಳಗಳೂಜಲಸೇಜನಾದಿಗಳಿಂದಲಂಕರಿಸಲ್ಪಟ್ಟವು, ಮನೆಮನೆಬಾಗಿಲುಗಳಲ್ಲಿ ಯೂ ಧ್ವಜಗಳೂ, ಪತಾಕೆಗಳೂ, ತೋರಣಗಳೂ ತೂಗಾಡುತ್ತಿದ್ದುವು. ಅಲ್ಲಿನ ಸ್ತ್ರೀಪುರುಷರೆಲ್ಲರೂ ಗಂಧಪುಷ್ಪಾದಿಗಳಿಂದಲೂ, ರತ್ನಾಭರಣಗಳಿಂ ದಲೂ, ಅಮೂಲ್ಯ ವಸ್ತುಗಳಿಂದಲೂ ಅಲಂಕರಿಸಿಕೊಂಡು, ಸಂಭ್ರಮದಿಂದ ಓಡಾಡುತಿದ್ದರು. ಎಲ್ಲಿ ನೋಡಿದರೂ ಆಗರುರೂಪಗಳೂ, ಸುಗಂಧದೀಪಗ ಭೂ, ಫುಮನುವಿಸುತಿದ್ದುವು. ಭೀಷ್ಮಕನೂಕೂಡ, ತನ್ನ ಮಗಳ ವಿವಾಹ ಕ್ಕೆ ಮೊದಲು, ಪಿತೃಗಳನ್ನೂ, ದೇವತೆಗಳನ್ನೂ, ಬ್ರಾಹ್ಮಣರನ್ನೂ ವಿಧ್ಯುಕ್ತ ವಾಗಿ ಪೂಜಿಸಿ, ಅನೇಕಬ್ರಾಹ್ಮಣರಿಗೆ ಭೋಜನವನ್ನಿಕ್ಕಿಸಿ, ಅವ ರಿಂದ ತನ್ನ ಮಗಳಿಗೆ ಸ್ವಸ್ತಿವಾಚನವನ್ನು ಮಾಡಿಸಿದನು. ಇಷ್ಟರಲ್ಲಿ ಅಂತಃಪರಸ್ತ್ರೀಯರು ರುಕ್ಕಿಣಿಗೆ ಮಂಗಳಸ್ನಾನವನ್ನು ಮಾಡಿಸಿ, ಆ ಮೂಲ್ಯವಾದ ವಸ್ತ್ರವನ್ನು ಡಿಸಿ, ಪುಸ್ನಾಭರಣಗಳಿಂದ ಅವಳ ಮೈಯನ್ನ ಲಂ ಕರಿಸಿದರು. ಬ್ರಾಹ್ಮಣರೆಲ್ಲರೂ ಋಗ್ಯಜುಸ್ಯಾಮಮಂತ್ರಗಳಿಂದ ವಧುವಿಗೆ ರಕ್ಷಾಕಾರಗಳನ್ನು ನಡೆಸಿದರು. ಅಥJಮಂತ್ರದಲ್ಲಿ ನಿಪುಣನಾದ ಪುರೊ ಹಿತನೊಬ್ಬನು, ದುಷ್ಟಗ್ರಹಶಾಂತಿಗಾಗಿ ಹೋಮವನ್ನು ಮಾಡಿದನು. ಭೀಷ್ಟಕನು ಕಾಲೋಚಿತವಾದ ಕಾಕ್ಯಗಳನ್ನು ಬಲ್ಲವನಾದುದರಿಂದ, ಆ ಬ್ರಾಹ್ಮಣರೆಲ್ಲರಿಗೂ, ಬೆಳ್ಳಿಬಂಗಾರಗಳನ್ನೂ, ವಸ್ತ್ರಗಳನ್ನೂ , ಗೋವುಗಳ ನ್ಯೂ ,ಎಳ್ಳು, ಬೆಲ್ಲ, ಮುಂತಾದ ದಾನವಸ್ತುಗಳನ್ನೂ ಯಥೇಷ್ಟವಾಗಿ ಕೊ “ು ತೃಪ್ತಿಪಡಿಸಿದನು. ಹೀಗೆಯೇ ಆತ್ತಲಾಗಿ ಶಿಶುಪಾಲನ ತಂದೆಯಾದ ದಮಘೋಷನೂಕೂಡ, ಮಂತ್ರಜ್ಞರಾದ ಬ್ರಾಹ್ಮಣರಮೂಲಕವಾಗಿ ತನ್ನ ಮಗನಿಗೆ ಅಭ್ಯುದಯಕಾರಗಳೆಲ್ಲವನ್ನೂ ಮಾಡಿಸಿ, ರಥ, ಗಜ, ತುರಗ, ಪದಾತಿಗಳೆಂಬ ಚತುರಂಗಸೈನ್ಯಗಳಿಂದ ಪರಿವೃತನಾಗಿ ಕುಂಡಿನಪುರಕ್ಕೆ ಹೊರಟನು ದಮಘೋಷನು ಹೊರಟುಬರುವ ಸುದ್ದಿಯನ್ನು ಕೇಳಿದೊಡನೆ, ಭೀಷ್ಟಕನು ತನ್ನ ಸೈನ್ಯಗಳೊಡನೆ ಇದಿರುಗೊಂಡು ಬಂದು, ಬೀಗನಾದ ಅ ವನಿಗೆ ನಡೆಸಬೇಕಾದ ಗೌರವಗಳೆಲ್ಲವನ್ನೂ ನಡೆಸಿ, ಅವನನ್ನು ಕರೆತಂದು ಆ ವನ ನಿವಾಸಕ್ಕಾಗಿ ಹೊಸದಾಗಿ ಕಟ್ಟಿದ ಒಂದು ಮಂದಿರದಲ್ಲಿ ಳಿಸಿದನು. ಇಷ್ಟರಲ್ಲಿ, ಸಾಲ್ವ, ಜರಾಸಂಧ, ದಂತವಕ್ಕ, ವಿಡೂರಥ,ಪೌಂಡ್ರಕ್ರಮೋದ