ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೫೪

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, ೫೪.] ದಶಮಸ್ಕಂಧವು. ೨೧೨೭ ರಾಧಿಯಾಗಿದ್ದರೂ, ಅವನಲ್ಲಿ ನೀನು ಕರುಣೆಯನ್ನು ತೋರಿಸಿ ಮನ್ನಿಸಬೇ ಕು, ಅವನ ಅಪರಾಧಕ್ಕಾಗಿ ನಾನು ನಿನ್ನಲ್ಲಿ ಮರೆಹೊಕ್ಕಿರುವೆನು, ನನ್ನಲ್ಲಿ ಯಾದರೂ ಕೃಪೆಯಿಟ್ಟು ಅವನನ್ನು ಕೊಲ್ಲದೆ ರಕ್ಷಿಸಬೇಕು” ಎಂದಳು. ಓ ಪರೀಕ್ಷಿದ್ರಾಜಾ ! ಹೀಗೆ ರುಕ್ಕಿಣಿಯು ಭಯದಿಂದ ನಡುಗುತ್ತ, ದುಃಖ ದಿಂದ ಬಾಡಿದ ಮುಖವುಳ್ಳವಳಾಗಿ, ಸ್ಪಷ್ಟವಾಗಿ ಬಾಯೆ, ಮಾತಾ ಡುವುದಕ್ಕೂ ಸಾಧ್ಯವಿಲ್ಲದೆ, ಗದ್ಯದಸ್ವರದಿಂದ ಕೃಷ್ಣನ ಕಾಲುಗಳನ್ನು ಹಿಡಿದು, ದೈನ್ಯದಿಂದ ಪ್ರಾರ್ಥಿಸುತ್ತಿರಲು, ಪರಮದಯಾಳುವಾದ ಕೃ «ನು, ಅವಳ ಮಾತನ್ನು ನಿರಾಕರಿಸಲಾರದೆ, ಆ ರುಕ್ಕಿಯಲ್ಲಿದ್ದ ಕೋ ಪವನ್ನ ಡಗಿಸಿಕೊಂಡು ಸುಮ್ಮನಾದನು. ಆದರೇನು ? ದುಷ್ಯನಾದ ಆ ರುಕ್ಕಿಯನ್ನು ಸುಮ್ಮನೆ ಬಿಡಲಾರದೆ, ಅವನು ಧರಿಸಿದ್ದ ವಸ್ತ್ರವನ್ನೇ ಕಿತ್ತು ಅದರಿಂದ ಅವನ ಕೈ ಕಾಲುಗಳನ್ನು ಬಿಗಿದು ಕಟ್ಟಿದನು, ಮತ್ತು ತಾನು ಹಿ ಡಿದಿದ್ದ ಕತ್ತಿಯಿಂದ ಅವನ ತಲೆ ಮತ್ತು ಮೀಸೆಗಳನ್ನು ಮುಪ್ಪಟ್ಟೆಯಾಗಿ ತೆಗೆದು, ಅವನನ್ನು ವಿರೂಪಮಾಡಿಬಿಟ್ಟನು. ಇಷ್ಟರಲ್ಲಿ ಅತ್ತಲಾಗಿ ಯದು ವೀರರು, ಆನೆಯು ತಾವರೆಕೊಳವನ್ನು ಕಲಕುವಂತೆ, ಶತ್ರುಸೈನ್ಯವನ್ನು ಉಲ್ಲೋಲಕಲ್ಲೋಲವಾಗಿ ಮಾಡಿ ಕೃಷ್ಣನಬಳಿಗೆ ಬಂದರು. ಆಗ ಬಲ ರಾಮನು, ಅಲ್ಲಿ ನಾಚಿಕೆಯಂದ ತಲೆಯೆತ್ತಲಾರದೆ ಜೀವಚ್ಛವದಂತೆ ನಿಂತಿ ರುವ ರುಕ್ಕಿಯನ್ನು ನೋಡಿ ಕನಿಕರಗೊಂಡು, ಕೃಷ್ಣನು ಅವನ ಕೈಕಾಲು ಗಳಿಗೆ ಬಿಗಿದಿದ್ದ ಕಟ್ಟುಗಳನ್ನು ತನ್ನ ಕೈಗಳಿಂದ ಬಿಚ್ಚಿ, ಕೃಷ್ಣನನ್ನು ನೋಡಿ ಹೀಗೆಂದು ಹೇಳುವನು. (ಕೃಷ್ಣಾ! ನೀನು ಹೀಗೆ ಮಾಡಿದುದು ಸರಿಯಲ್ಲ! ಇದು ನಮಗೆ ಯೋಗ್ಯವಾದ ಕಾರವಲ್ಲ. ಈತನು ನಮಗೆ ಬಂಧುವಲ್ಲವೆ? ಇವನಿಗೆ ಹೀಗೆ ತಲೆಮೀಸೆಗಳನ್ನು ವಪನಮಾಡಿ ವಿರೂಪಮಾಡಿದುದು ವಧ ಪ್ರಾಯವೇ ಹೊರತು ಬೇರೆಯಲ್ಲ. ನೀನು ಹೀಗೆ ಮಾಡಬಾರದಾಗಿತ್ತು” ಎಂದು ಹೇಳಿ, ರುಕ್ಕಿಣಿಯನ್ನು ಕುರಿತು ಅಮ್ಮ ರುಕ್ಕಿಣಿ ! ನಿನ್ನ ಅಣ್ಣನಿಗೆ ಈ ಅವಮಾನವುಂಟಾದುದಕ್ಕಾಗಿ ಮನಸ್ಸಿನಲ್ಲಿ ಚಿಂತಿಸಬೇಡ. ಕೃಷ್ಣನು ಉದ್ದೇಶಪೂರೈಕವಾಗಿ ಇದನ್ನು ಮಾಡಿದನೆಂದು ನಾವು ತಿಳಿಯಬಾರದು, ಮ ನುಷ್ಯನಿಗೆ,ಸುಖವಾಗಲಿ, ದುಃಖವಾಗಲಿ, ಮಾನವಾಗಲಿ, ಅವಮಾನವಾಗಲಿ,