ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೫೬

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܗܸܦܘܲܦ ಅಧ್ಯಾ, ೫೪.] ದಶಮಸ್ಕಂಧವು. ತವಾದ ಮೊಹವೇಹೊರತು ವಾಸ್ತವವಲ್ಲ, ನಿಜವಾಗಿ ಶತ್ರುವಾವನು?' ಮಿತ್ರನಾವನು ? ಸಮಸ್ತಜೀವರಾಶಿಗಳಿಗೂ ಅಂತರಾತ್ಮನಾಗಿರತಕ್ಕವನು ಈಶ್ವರನೊಬ್ಬನೇ! ಆದುದರಿಂದ ಎಲ್ಲವನ್ನೂ ಈಶ್ವರಸ್ವರೂಪದಿಂದ ತಿಳಿಯ ಬೇಕು. ಆ ಸತ್ಯೇಶ್ವರನು ಕಾವ್ಯದಲ್ಲಿ ಅಗ್ನಿ ಯಂತೆ ಗೂಢವಾಗಿರುವನು. ಆಕಾಶದಂತೆ ಒಳಗೂ, ಹೊರಗೂ ವ್ಯಾಪಿಸಿರುವನು. ಹಾಗಿದ್ದರೂ ತಾನು ಸೇರಿರತಕ್ಕ ಅವಸ್ತುವಿನ ಗುಣದೋಷಗಳಿಗೆಮಾತ್ರ ತಾನು ಗುರಿಯಾಗಲಾ ರನು ಹೀಗೆ ಸತ್ವವ್ಯಾಪಿಯಾದ ಆ ಪರಮಾತ್ಮನಿಗೆ ಈ ಜಗತ್ತೆಲ್ಲವೂ ಶರೀರ ವಾಗಿರುವಾಗ, ಜಗತ್ತಿನಲ್ಲಿ ಒಬ್ಬರಿಗೊಬ್ಬರಿಗೆ ಈ ಶತ್ರುತ್ವವಿತ್ರತ್ಯಾದಿ ಭೇದವು ಹೇಗೆ ತಾನೇ ಸಂಭವಿಸುವುದು? ಪರಮಾತ್ಮನಿಗೊಬ್ಬನಿಗೆ ಶರೀರ ವಾಗಿರುವ ಈ ಪ್ರಪಂಚವನ್ನು ಬೇರೆಬೇರೆ ರೂಪದಿಂದ ತಿಳಿಯುವುದು ಕೇವಲಬುದ್ದಿಮೋಹವಲ್ಲದೆ ಬೇರೆಯಲ್ಲ. ದೇಹವೆಂಬುದು ಭೂಮಿ ಮೊದ ಲಾದ ಪಂಚಭೂತಗಳಿಂದಲೂ, ಗಂಧ ಮೊದಲಾದ ಆ ಪಂಚಭೂತಗುಣ ಗಳಿಂದಲೂ, ಇಂದ್ರಿಯಗಳಿಂದಲೂ ಏರ್ಪಟ್ಟಿರುವುದು, ಇದಕ್ಕೆ ಉತ್ಪತ್ತಿ ವಿನಾಶಗಳೆರಡೂ ಉಂಟು, ಆತ್ಮನಾದರೋ ನಿತ್ಯವಾದುದು. ಆ ಆತ್ಮನಿಗೆ ಪ್ರಕೃತಿಯಿಂದಲೇ ದೇಹಸಂಬಂಧವಾಗುವುದು, ಅದರಿಂದ ಜೀವಾತ್ಮನು ಜ ರಾಮರಣರೂಪವಾದ ಸಂಸಾರದಲ್ಲಿ ತೊಳಲುತ್ತಿರುವನು. ಅಮ್ಮ ರುಕ್ಕಿಣಿ! ಜೀವನಿಗಿರುವಂತೆ ಪರಮಾತ್ಮನಿಗೆ ಅಸತ್ತಾದ ದೇಹದೊಡನೆ ಸಂಬಂಥವಾ ಗಲಿ, ವಿಯೋಗವಾಗಲಿ ಉಂಟಾಗಲಾರದು. ಏಕೆಂದರೆ, ಆ ದೇಹದ ಉತ್ಸತಿಗಾಗಲಿ, ಅದಕ್ಕೆ, ಜೀವನೊಡನೆ ಸಂಯೋಗವಿಯೋಗಗಳಿಗಾಗಲಿ, ಪರಮಾತ್ಮನ ಸಂಕಲ್ಪವೇ ಮೂಲವು. ಇವು ಆ ಪರಮಾತ್ಮನ ಇಚ್ಛಾನು ಸಾರವಾಗಿಯೇ ನಡೆಯಬೇಕಾದುದರಿಂದ, ಅವನನ್ನು ಕಟ್ಟಿಡಲಾರವು. ಸೂರ್ನು ನೇಂದ್ರಿಯವನ್ನು ಪ್ರಕಾಶಗೊಳಿಸತಕ್ಕವನಾಗಿಯೂ, ಆ ಇಂದ್ರಿಯಕ್ಕೆ ಕಾಣತಕ್ಕ ರೂಪವನ್ನು ತೋರಿಸತಕ್ಕವನಾಗಿಯೂ ಇದ್ದರೂ, ತಾನು ದೂರಸ್ಥನಾಗಿ, ಅದರ ಸಂಬಂಧವಿಲ್ಲದಿರುವಂತೆ, ಪರಮಾತ್ಮನು ತನ್ನ ಸಂಕಲ್ಪದಿಂದಲೇ ಈ ದೇಹವನ್ನು ನಡೆಸತಕ್ಕವನಾಗಿದ್ದರೂ, ದೂರದಲ್ಲಿ ರುವವನಂತೆ, ಅದರ ಸಂಬಂಧದಿಂದುಂಟಾದ ದೋಷಕ್ಕೆ ತಾನು ಭಾಗಿಯಾ