ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೬೮

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೪೧ ಅಧ್ಯಾ, ೫೬.] ದಶಮಸ್ಕಂಧವು. ಆಪ್ರಸೇನನೂ, ಅವನ ಕುದುರೆಯೂ, ಸತ್ತು ಬಿದ್ದಿರುವುದನ್ನೂ, ಅಲ್ಲಿಂದ ಮುಂದೆಸಿಂಹದಹೆಜ್ಜೆಯ ಗುರುತುಗಳನ್ನೂ ಕಂಡನು. ಹೆಜ್ಜೆಯ ಗುರುತನ್ನೆ ಹಿಂಬಾಲಿಸಿ, ಇನ್ನೂ ಸ್ವಲ್ಪ ದೂರ ಹೋದಮೇಲೆ, ಒಂದಾನೊಂದು ಪಕ್ವತದ ತಪ್ಪಲಲ್ಲಿ ಆ ಸಿಂಹವುಸಂಕೃತವಾಗಿದ್ದ ಗುರುತುಗಳು ಕಂಡುಬಂದುವು. ಆದ ರ ಸಮೀಪದಲ್ಲಿ ಗಾಢಾಂಧಕಾರದಿಂದ ಕವಿದಿದ್ದ ಒಂದಾನೊಂದು ಗುಹೆಯ ನ್ಯೂ ಕಂಡನು. ತನ್ನೊಡನೆ ಬಂದಿದ್ದ ಜನರೆಲ್ಲರನ್ನೂ ಆ ಗುಹೆಯ ಬಾಗಿಲಲ್ಲಿ ನಿಲ್ಲಿಸಿ, ತಾನೊಬ್ಬನೇ ಆ ಬಿಲದೊಳಗೆ ಪ್ರವೇಶಿಸಿದನು. ಆ ಗುಹೆಯಲ್ಲಿ ಒಂದಾನೊಂದು ಕರಡಿಯ ಮರಿಯು, ಆ ಮಣಿಯನ್ನು ಕೈಯಲ್ಲಿಟ್ಟುಕೊಂ ಡು ಆಡುತಿತ್ತು.ಕೃಷ್ಣನು ಆ ಕರಡಿಯನ್ನು ಕೊಂದು ರತ್ನವನ್ನು ತರಬೇಕೆಂ ದು ನಿಶ್ಚಯಿಸಿ, ಸಮಯವನ್ನು ನಿರೀಕ್ಷಿಸುತ್ತ, ಸ್ವಲ್ಪ ಹೊತ್ತಿನವರೆಗೆ ಅಲ್ಲಿ ಯೇ ನಿಂತಿದ್ದನು. ಹೀಗೆ ಅಪೂರತೇಜಸ್ಸುಳ್ಳ ಮನುಷ್ಯನೊಬ್ಬನು ನಿರ್ಭಯ ವಾಗಿ ತನ್ನ ಗುಹೆಯೊಳಗೆ ಬಂದುದನ್ನು ಕಂಡು, ಮಗುವಿಗೆ ಕಾವಲಾಗಿ ಒಂದಾನೊಂದು ಹೆಣ್ಣು ಕರಡಿಯು ಭಯದಿಂದ ಅರಚಿಕೊಂಡಿತು, ಈ ಶಬ್ದ ವನ್ನು ಕೇಳಿದೊಡನೆ ಮಹಾಬಲಾಢನಾದ ಜಾಂಬವಂತನು, ಕೋಪದಿಂದ ಗರ್ಜಿಸುತ್ತ ಅಲ್ಲಿಗೆ ಬಂದನು. ಆ ಕೋಪಾವೇಶದಲ್ಲಿ ಜಾಂಬವಂತನು, ಆ ಕೃಷ್ಣನೇ ತನ್ನ ಪ್ರಭುವೆಂಬುದನ್ನು ತಿಳಿಯಲಾರದೆ, ಯಾವನೋ ಸಾಮಾ ನ್ಯ ಮನುಷ್ಯನೆಂಬ ಭಾವದಿಂದ, ಕೃಷ್ಣನೊಡನೆ ಯುವನ್ನಾರಂಭಿಸಿದನು. ಕೃಷ್ಣಜಾಂಬವಂತರಿಬ್ಬರಿಗೂ ಭಯಂಕರವಾದ ದ್ವಂದ್ವಯುದ್ಧವು ನಡೆ ಯಿತು. ಅವರಿಬ್ಬರೂ ಒಬ್ಬರನ್ನೊಬ್ಬರು ಜಯಿಸಬೇಕೆಂಬ ಹಟದಿಂದ ಸಮಾನಬಲವನ್ನು ತೋರಿಸಿ, ಮಾಂಸಕ್ಕಾಗಿ ಹೋರಾಡುವ ಗಿಡುಗಗಳಂತೆ, ಒಬ್ಬರಿಗೊಬ್ಬರು ವಿವಿಧಾಯುಧಗಳಿಂದೂ, ಮರಗಳಿಂದಲೂ, ಕಲ್ಲುಗಳಿಂ ದಲೂ, ತೋಳುಗಳಿಂದಲೂ, ಹೊಡೆದಾಡುತಿದ್ದರು, ಕೊನೆಗೆ ಇಬ್ಬರೂ ವ ಪ್ರಮುಷ್ಟಿಗಳಿಂದ ಹೊಡೆದಾಡುವುದಕ್ಕೆ ಆರಂಭಿಸಿದರು. ಇಪ್ಪತ್ತೆಂಟು ದಿನಗಳವರೆಗೆ ಹಗಲುರಾತ್ರಿಯೂ ವಿಚ್ಛಿತಿಯಿಲ್ಲದೆ ಯುದ್ಧವು ನಡೆಯಿತು. ಕೊನೆಕೊನೆಗೆ ಜಾಂಬವಂತನ ಬಲವು ತಗ್ಗು ಬಂದಿತು. ವಜ್ರಫಾತದಂತೆ