ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೭೨

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨.೪೫ ಅಧ್ಯಾ, ೫೭.] ದಶಮಸ್ಕಂಧವು. ಪ್ಪಿಸಿ ನಮಸ್ಕರಿಸಿದನು. ಆಗ ಕೃಷ್ಣನು ಸತ್ರಾಜಿನಲ್ಲಿ ಪ್ರಸನ್ನನಾಗಿ, ಶಾಸ್ಕೊಕ್ಕವಾಗಿ ಸತ್ಯಭಾಮೆಯನ್ನು ಮದಿವೆಮಾಡಿಕೊಂಡನು. ಓ 'ಪರೀ ದ್ರಾಜಾ ! ರೂಪದಲ್ಲಿಯೂ, ಗುಣದಲ್ಲಿಯೂ, ಔದಾಲ್ಯದಲ್ಲಿಯೂ, ಲೋ ಕೊರೆಯೆನಿಸಿಕೊಂಡ ಆಸತ್ಯಭಾಮೆಯನ್ನು ಇದುವರೆಗೆ ಎಷ್ಟೋ ರಾಜಾ ಧಿರಾಜರೆಲ್ಲರೂ ಪ್ರಾರ್ಥಿಸಿದ್ದರು. ಅವರೊಬ್ಬರನ್ನೂ ಮೋಹಿಸದಿದ್ದ ಸತ್ಯ. ಭಾಮೆಯು, ಸಾಕ್ಷಾದ್ಭಗವಂತನಾದ ಶ್ರೀಕೃಷ್ಣನ ಕೈಸೇರಿದಳು! ಶಾಸ್ಕೋ ಕವಾಗಿ ವಿವಾಹವು ನಡೆದಮೇಲೆ,ಕೃಷ್ಣನು ಸತ್ರಾಜಿತನ್ನು ನೋಡಿ, ಓ, ಸೌಮ್ಯಾ ! ಈ ಸ್ಯಮಂತಕರತ್ನವು ನಿನ್ನಲ್ಲಿಯೇ ಇರಲಿ ! ಇದನ್ನು ಸೂರ ದೇವನು ಭಕ್ತನಾದ ನಿನಗೆ ಅನುಗ್ರಹಿಸಿಕೊಟ್ಟಿರುವನು. ಆದುದರಿಂದ ಇದು ನಿನ್ನಲ್ಲಿರಬೇಕಾದುದೇ ಉಚಿತವು ! ಇದು ನಿನ್ನಲ್ಲಿದ್ದರೂ, ಇದರ ಪ್ರ. ಭಾವದಿಂದ ಕಾಮಡಾಮರಾದಿಬಾಧೆಗಳೆಲ್ಲವೂ ನೀಗುವುದರಿಂದ, ಆ ಫಲಕ್ಕೆ ನಾವೆಲ್ಲರೂ ಭಾಗಿಗಳಾಗುವೆವಲ್ಲವೆ?” ಎಂದು ಆ ರತ್ನ ವನ್ನು ಹಿಂತಿರುಗಿ ಕೊ ಟ್ಟು ಬಿಟ್ಟನು, ಇದು ಐವತ್ತಾರನೆಯ ಅಧ್ಯಾಯವು. ( ಶತಧನ್ಯನೆಂಬವನು ಸತ್ರಾಜಿತನ್ನು ಕೊಂದು, ಅವನ ) ಲ್ಲಿದ್ದ ಸ್ಯಮಂತಕರತ್ನವನ್ನು ಅಪಹರಿಸಿಕೊಂಡು “ ಹೋಗಲು, ಕೃಷ್ಣನು ಶತಧನ್ವನನ್ನು ಕೊ೦ದುದು. ಓ ಪರೀಕ್ಷಿದ್ರಾಜಾ ! ಇಷ್ಟರಲ್ಲಿ ಅತ್ತಲಾಗಿ ಪಾಂಡವರೂ, ಕುಂತಿ ಯೂ 'ಅರಗಿನ ಮನೆಯಲ್ಲಿ ದಗ್ಧರಾದರೆಂಬ ಸುದ್ದಿಯು, ಎಲ್ಲೆಲ್ಲಿಯೂ ಹರಡಿ ಕೊಂಡಿತು, ಕ್ರಮಕ್ರಮವಾಗಿ ಈ ವೃತ್ತಾಂತವು ಕೃಷ್ಣನ ಕಿವಿಗೂ ಬಿದ್ದಿತು. ಸತ್ವಜ್ಞನಾದ ಕೃಷ್ಣನು ನಿಜಸ್ಥಿತಿಯನ್ನು ಬಲ್ಲವ ನಾಗಿದ್ದರೂ, ರಹಸ್ಯವನ್ನು ಹೊರಪಡಿಸದೆ, ಮನುಷ್ಯಲೀಲೆಯನ್ನೇ ನಟಿಸು ತ್ಯ, ತನ್ನ ಬಂಧುಗಳಾದ ಪಾಂಡವರಿಗೂ, ಕುಂತಿಗೂ, ಕುಲೋಚಿತವಾದ ಅಪರಸಂಸ್ಕಾರಗಳನ್ನು ನಡೆಸಬೇಕೆಂದು ಬಲರಾಮನನ್ನೂ ಸಂಗಡಕರೆದು ಕೊಂಡು ಹಸ್ತಿನಾವತಿಗೆ ಬಂದನು, ಅಲ್ಲಿ ಪಾಂಡವರ ಮರಣಕ್ಕಾಗಿ ದುಃಖಿ.