ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೯೩

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೬೪ ಶ್ರೀಮದ್ಭಾಗವತವು [ಅಧ್ಯಾ, ೫೯. ಸ್ತುತಿಸುವಳು. « ದೇವದೆವಾ, ನಿನಗೆ ನಮಸ್ಕಾರವು! ಓ ಶಂಖಚಕ್ರಗಧಾ ದರಾ ! ನಿನಗೆ ವಂದನವು, ಭಕ್ತರ ಇಷ್ಟಾನುಸಾರವಾಗಿ ನಾನಾಮೂರ್ತಿ ಗಳನ್ನು ಧರಿಸತಕ್ಕi ಪರಮಾತ್ಮನಾದ ನಿನಗೆ ನಮಸ್ಕಾರವು. ಓ ಪದ್ಯ ನಾಭಾ ! ಪದ್ಯಮಾಲಾಲಂಕೃತಾ ! ಓ ಪುಂಡರೀಕಾಕ್ಷಾ ! ಕಮಲದಂತೆ ಪಾದವುಳ್ಳ ಓ ಕೃಷ್ಣಾ! ನಿನಗೆ ನಮಸ್ಕಾರವು, ವಾಸುದೇವಾ ! ಷಾಡುಣ್ಯಪರಿಪೂರ್ಣನೂ, ಸಾಂತರಾತ್ಮನೂ, ಜಗತ್ತಿಗೆಲ್ಲಾ ಆದಿಕಾ ರಣನೂ ಮನ್ನಾದಿಪುರುಷರೂಪನೂ ಆದ ನಿನಗೆ ನಮಸ್ಕಾರವು, ನಿತ್ಯಾನಂದ ಪೂರ್ಣನಾದ ನಿನಗೆ ನಮಸ್ಕಾರವು ದೇವಾ ! ಸೀನು ಉತ್ಪತ್ತಿಯಾದವನು ಈ ಸಮಸ್ತ ಜಗತ್ತಿಗೂ ಉತ್ಪತ್ತಿ ಕಾರಣನು, ಪರಬ್ರಹ್ಮನು. ಅನಂತಶಕ್ತಿ ಯುಳ್ಳವನು, ಉಚ್ಚಾವಚಗಳಾದ ಸಮಸ್ತಭೂತಗಳಲ್ಲಿಯೂ ಅಂತ ರಾತ್ಮನು, ಆ ಜೀವಾತ್ಮಗಳೆಲ್ಲಕ್ಕಿಂತಲೂ ಬೇರೆಯಾದ ಪರಮಾತ್ಮನು. ಇಂತಹ ನಿನಗೆ ನಮಸ್ಕಾರವು. ಓ ವಿಭೂ! ನೀನೇ ಈ ಜಗತ್ತಿನ ಸೃಷ್ಟಿ ಕಾರ್ ಕ್ಯಾಗಿ ಪೂರ್ಣವಾದ ರಜೋಗೂಣವನ್ನೂ, ಸ್ಥಿತಿಕಾರಕ್ಕಾಗಿ ಸತ್ವಗುಣ ವನ್ನೂ , ಸಂಹಾರಕಾರಞ್ಞಾಗಿ ತಮೋಗುಣವನ್ನೂ ಸ್ವೀಕರಿಸಿ, ಬ್ರಹ್ಮ ಏಷ್ಟು ರುದ್ರರೂಪದಿಂದ ಆಯಾ ಕಾರಗಳನ್ನು ನಡೆಸುತ್ತಿರುವೆ. ಸೀನು ಸೃಷಿಸಂಹಾರಕಾಠ್ಯಗಳಿಗಾಗಿ ಬ್ರಹ್ಮರುದ್ರಾಟಜೀವಗಳಲ್ಲಿ ಅನುಷ್ಯ ವೇಶಮಾಡತಕ್ಕವನಾದರೂ, ಒಮ್ಮೊಮ್ಮೆ ರಕ್ಷಣಕಾರದಲ್ಲಿ ಮಾತ್ರ, .ಹಾಗೆ ಇತರಜೀವಗಳಲ್ಲಿ ಅನುಪ್ರವೇಶವಿಲ್ಲದಂತೆ ನಿನ್ನ ಪೂರ್ಣಾಂಶದಿಂದಲೇ ಆವತ ರಿಸಿ ಲೋಕವನ್ನು ದ್ಧರಿಸುವೆ ! ಪ್ರಕೃತಿ ಪುರುಷ ಕಾಲವೆಂಬಿವುಗಳೆಲ್ಲವೂ ನೀನೇ ! ಮತ್ತು ಭೂಮಿಯಾದ ನಾನೂ, ಆಗ್ನಿ , ಜಲ, ವಾಯು, ಆಕಾಶ ವೆಂಬ ಇತರಭೂತಗಳೂ, ಶಬ್ದಾತನ್ನಾತ್ರಗಳೂ, ಇಂದ್ರಿಯಗಳ , ಆ ಇಂದ್ರಿಯಗಳಿಗೆ ೨ಷ್ಣಾ ತೃಗಳಾದ ದಿಕ್ಕು, ವಾಯು, ಮೊದಲಾದ ದೇವತೆ ಗಳೂ, ಅಹಂಕಾರ ಮಹತ್ತತ್ವಗಳೂ, ಸಮಸಚರಾಚರಗಳೂ ನಿನ್ನ ಸ್ವ ರೂಪವೇ ಆಗಿರುವು ದರಿಂದ, ನಿನ್ನನ್ನು ಬಿಟ್ಟು ಬೇರೆ ವಸ್ತುವಿಲ್ಲ. ನಿನಗೆ ಶರೀ ರಭೂತಗಳಾದ ಈವಸ್ತುಗಳನ್ನು ಸ್ವತಂತ್ರವೆಂದು ಭಾವಿಸುವುದು ಕೇವಲ ಭಮವು ಮಣ್ಣಿನಿಂದ ಗಡಿಗೆಗಳು ಹೇಗೋ ಹಾಗೆ, ಇವೆಲ್ಲವೂ ನಿನ್ನ ಸ್ವ