ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೬೦

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ, ೧೧.! ಪ್ರಥಮಸ್ಕಂಧವು. ೧೪ ಪ್ರವೇತಿಸಿದನು ಆ ಸ್ತ್ರೀಯರೆಲ್ಲರೂ ಬಹುಕಾಲಕ್ಕೆ ತಮ್ಮನ್ನಗಲಿ ಹಿಂತಿ ರುಗಿ ಬಂದ ಕೃಷ್ಣನನ್ನು ನೋಡಿದೊಡನೆ ಪರಮಾನಂದಭರಿತರಾಗಿ, ಲಜ್ಜೆ ಯಿಂದ ಕುಗ್ಗಿದ ಮುಖವುಳ್ಳವರಾಗಿ, ತಮ್ಮ ತಮ್ಮ ಶಯನಾಸನಗಳನ್ನು ಬಿಟ್ಟು ಘಟ್ಟಿನಮೇಲೆದ್ದು ನಿಂತರು ಮತ್ತು ಇದಕ್ಕೆ ಮೊದಲು ಈ ಕೃಷ್ಣಗಮನಕ್ಕಾ ಗಿ ತಾವು ತೊಡಗಿದ್ದವ್ರತಗಳನ್ನೂ ಬೇಗನೆ ಮುಗಿಸಿಕೊಂಡು, ಒಡನೆಯೇ ತ ಮ್ಮ ಮನಸ್ಸಿನಿಂದಲೂ, ತಮ್ಮ ದೃಷ್ಟಿಗಳಿಂದಲೂ, ಶ್ರೀಕೃಷ್ಣನನ್ನಾ ಲಿಂಗಿ ಸಿದುದಲ್ಲದೆ, ಪ್ರದ್ಯುಮ್ಮನೇ ಮೊದಲಾದ ತಮ್ಮ ತಮ್ಮ ಮಕ್ಕಳುಗಳಮೂಲಕ ವಾಗಿಯೂ, ಆಕೃಷ್ಣನ ದೇಹಾಲಿಂಗನರೂಪವಾದ ಆನಂದವನ್ನನುಭವಿಸಿದ ರು ಅವರಲ್ಲಿ ಕೆಲವರು ಬಹಳ ಗಂಭೀರಸ್ವಭಾವವುಳ್ಳವರಾಗಿದ್ದರೂ, ಕೃಷ್ಣದ ರ್ಶನಕಾಲದಲ್ಲಿ ತಮಗುಂಟಾದ ಆನಂದಬಾಷ್ಪವನ್ನು ತಡೆದಿಟ್ಟುಕೊಳ್ಳಲಾ ರವೆ ಹೋದರು. ಕೃಷ್ಣನು ಆ ಸ್ತ್ರೀಯರಿಗೆ ಯಾವಾಗಲೂ ಪಕ್ಕದಲ್ಲಿಯೇ ಇ ದ್ದು, ಅಂತರಂಗದಲ್ಲಿಯೂ ಅವರೆಡನೆಯೇ ಕಲೆತಿರುವನಾದರೂ, ಅವರಿಗೆ ಆ ಮಹಾತ್ಮನ ಪಾದಯುಗ್ಯವು, ನೋಡಿದಾಗಲೆಲ್ಲಾ ಹೊಸವಸ್ತುವನ್ನು ಕಂಡಂತೆ -ಸೆಯನ್ನು ಹುಟ್ಟಿಸುತ್ತಿರುವುದು. ಶೌನಕಾ ? ಕೇವಲಚಂಚಲಸ್ಯ ಭಾವೆಯೆನಿಸಿಕೊಂಡ ಲಕ್ಷ್ಮಿದೇವಿಯೇ, ಆತನ ಪಾದಕಮಲವನ್ನು ಎಡೆಬಿಡದೆ ಆಶ್ರಯಿಸಿರುವಾಗ, ಇತರರು ಅವನ ವಿಯೋಗವನ್ನು ಹೇಗೆ ತಾನೇ ಸಹಿಸ ಬಲ್ಲರು? ಭೂಮಿಗೆ ಭಾರಭೂತರಾಗಿ, ಆಕ್ಷೇಹಿಣೀಸಂಖ್ಯೆಯಿಂದ ಸೈನ್ಯಗಳ ನ್ನು ಹೆಚ್ಚಿಸಿಕೊಂಡು, ವೀರೋದ್ರಿಕ್ತರಾಗಿದ್ದ ಕ್ಷತ್ರಿಯರನ್ನ ಡಗಿಸುವುದ ಕ್ಯಾಗಿಯೇ ಕೃಷ್ಣನು, ಗಾಳಿಯ) ಬಿದಿರು ಮೆಳೆಯಲ್ಲಿ ಬೆಂಕಿಯನ್ನು ಹುಟ್ಟಿ ಸಿ, ಕಾಡನ್ನು ಸುಡುವಂತೆ, ಕೌರವ ಪಾಂಡವರಲ್ಲಿಯೇ ವೈರವವನ್ನು ಹುಟ್ಟಿ ಸಿ, ತಾನು ಆಯುಧವನ್ನೆ ಹಿಡಿಯದೆ, ಅವರಲ್ಲಿಯೇ ಒಬ್ಬರಿಂದೊಬ್ಬರನ್ನು ಕೊಲ್ಲಿಸಿ, ದುಷ್ಟ ಕ್ಷತ್ರಿಯರನ್ನು ನಿರ್ಮೂಲಮಾಡಿದನು. ಶೌನಕಾ ! ಆ ಪರಮಾತ್ಮನೇ ತನ್ನ ಸಂಕಲ್ಪದಿಂದ ಈ ಲೋಕದಲ್ಲಿ ಕೃಷ್ಣರೂ ಬಂದವತರಿಸಿ ಸಾಮಾನ್ಯ ಪುರುಷನಂತೆ ಸಂಚರಿಸುವನು. ಸ್ತ್ರೀಯರಿಗೆ ತಾನು ವಶ್ಯನಾಗಿದ್ದು ಪಾಮರನಂತೆ ನಟಿಸುವನು. ಈ ನೆಪದಿಂದ ತಾನೂ ಸಂಸಾರಸುಖವನ್ನನುಭವಿಸುವಹಾಗೆ ತೋರಿಸುವನು. ಮುನೀಂದ್ರಾ! - 10