ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೭

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶ್ರೀಮದ್ಭಾಗವತಮಾಹಾತ್ಮವು. ದೆ, ಕೊನೆಗೆ ಕೃಷ್ಣ ಪರಮಾತ್ಮನಿಗೆ ಲೀಲಾಸ್ಥಾನವಾಗಿ " ಯಮುನಾ ತೀರಕ್ಕೆ ಬಂದು ಸೇರಿದನು. ಅಲ್ಲಿ ನಡುವಯಸ್ಸಿನ ಹೆಂಗಸೊಬ್ಬಳು ಕೇವಲ ದುಃಖಾಕುಲೆಯಾಗಿ ಕುಳಿತಿದ್ದಳು. ಅವಳ ಪಾರ್ಶ್ವದಲ್ಲಿ ವೈದ್ಯರಿಬ್ಬರು ಪ್ರಜ್ಞೆಯಿಲ್ಲದೆ ಮೇಲುಸಿರುಬಿಡುತ್ತ ಮಲಗಿದ್ದರು. ಆ ಯುವತಿಯು ಅವ ರಿಬ್ಬರನ್ನೂ ನಾನಾವಿಧವಾಗಿ ಉಪಚರಿಸಿ ಸಮಾಧಾನವನ್ನು ಹೇಳುತ್ತ, ತನ್ನ ಕಷ್ಟವನ್ನು ನೀಗುಸುವರಾರೆಂದು ನಾನಾದಿಕ್ಕುಗಳಿಗೆ ಕಣ್ಣಿಟ್ಟು, ನೋಡುತ್ತ, ಸಂಕಟವನ್ನು ತಡೆಯಲಾರದೆ ಅವರ ಮುಂದೆ ಕುಳಿತು ಬಹಳವಾಗಿ ರೋದಿಸುತಿದ್ದಳು. ಬೇರೆ ನೂರಾರುಮಂದಿ ಸ್ತ್ರೀಯರು ಅವಳಿಗೆ ಬಾರಿಬಾರಿಗೂ ದುಃಖಸಮಾಧಾನವನ್ನು ಮಾಡಿ ಉಪಚರಿಸು ತಿದ್ದರು. ಈ ಸನ್ನಿವೇಶವನ್ನು ನೋಡಿ ನಾರದನಿಗೆ! * ಆಶ್ಚರೈವು ಹುಟ್ಟಿತು. ಅದರ ನಿಜಾಂಶವನ್ನು ತಿಳಿಯಬೇಕೆಂಬ ಕುತೂಹಲದಿಂದ ನಾರದನು ಮುಂದೆ ಬರುವಷ್ಟರಲ್ಲಿ, ಆ ತರುಣಿಯೇ ಸಂಭ್ರಮದಿಂದ ತಟ್ಟನೆ ಮೇಲೆದ್ದು ಬಂದು ('ಎಲೆ ಸೌಮ್ಯನೆ! ಸಿಲ್ಲು ನಿಲ್ಲು! ನನ್ನ ವ್ಯಸನವನ್ನು ನೀಗಿ ಸು! ನಿನ್ನ ದರ್ಶನಮಾತ್ರದಿಂದಲೇ ಸಮಸ್ತಲೋಕವೂ ಪಾಪವನ್ನು ನೀಗಿ ಸುಖವನ್ನು ಹೊಂದುವುದರಲ್ಲಿ ಸಂದೇಹವಿಲ್ಲ. ನನ್ನ ಮುಂದಿನ ಭಾಗ್ಯಕ್ಕೆ ನಿನ್ನ ದರ್ಶನವೇ ಸೂಚಕವಾಗಿರುವುದು. ನಿನ್ನ ಮಾತಿನಿಂದ ನನಗೆ ತಪ್ಪದೆ ಈ ದುಃ ಖವು ನೀಗಬಹುದು.” ಎಂದಳು. ಆಗ ನಾರದನು ಅವಳನ್ನು ಕುರಿತು, (ಎಲೆ ಭದ್ರೆ! ನೀನು ಯಾರು ? ಈ ವೈದ್ಯರಾರು?ನಿನ್ನನ್ನು ಸುತ್ತಿ ಉಪಚರಿಸುತ್ತಿ ರುವ ಈ ಸೀಯರಾರು ? ನಿನ್ನ ದುಃಖಕ್ಕೆ ಕಾರಣವೇನು?” ಎಂದು ಕೇಳಿ ದನು. ಅದಕ್ಕಾ ತರುಣಿಯು ನಾರದನನ್ನು ಕುರಿತು (ಎಲೈ ಮಹಾತ್ಮನೆ! ನಾ ನು ಭಕ್ತಿಯು! ಈ ವೈದ್ಯರಿಬ್ಬರೂ ಜ್ಞಾನವೈರಾಗ್ಯಗಳೆಂಬ ನನ್ನ ಮಕ್ಕಳು! ಕಲಿದೋಷದಿಂದ ಇವರಿಗೆ ಈ ದುರವಸೆಯುಂಟಾಗಿರುವುದು. ಈ ಸ್ತ್ರೀಯ ರೆಲ್ಲರೂ ಗಂಗಾದಿಪುಣ್ಯನದಿಗಳು. ಇವರೆಲ್ಲರೂ ನನ್ನ ಸೇವಾರವಾಗಿಯೇ ಇಲ್ಲಿಗೆ ಬಂದಿರುವರು ! ದೇವತೆಗಳೂ ನನ್ನನ್ನು ಎಷ್ಟೋ ಪ್ರೀತಿಯಿಂದಾದ ರಿಸುತಿದ್ದರೂ, ನನ್ನ ಮನಸ್ಸಿಗೆ ನೆಮ್ಮದಿಯಿಲ್ಲದಂತಿದೆ. ಎಲೆ ಪೂಜ್ಯನೆ ! ನನ್ನ ಪೂವೃತ್ತಾಂತವೆಲ್ಲವನ್ನೂ ಇನ್ನೂ ವಿಶದವಾಗಿ ತಿಳಿಸುವೆನು ಕೇಳು.