ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೮

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶ್ರೀಮದ್ಭಾಗವತಮಾಹಾತ್ಮವು, ನಾನು ಮೊದಲು ದ್ರವಿಡದೇಶದಲ್ಲಿ ಹುಟ್ಟಿದವಳು. ಕರ್ಣಾಟಕದೇಶದಲ್ಲಿ ಬಳೆದವಳು. ಮಹಾರಾಷ್ಟ್ರದೇಶದ ಕೆಲವುಭಾಗಗಳಲ್ಲಿ ಮಾತ್ರ ಮೂಲೆ ಮೂಲೆಗಳಲ್ಲಿ ಅಡಗಿದ್ದು, ಕೊನೆಗೆ ಗುರ್ಜರದೇಶದಲ್ಲಿ ಕೇವಲಜೀರ್ಣದ ಯನ್ನು ಹೊಂದಿದನು. ಅಲ್ಲಿ ಅತಿಭಯಂಕರವಾದ ಕಲಿಸಂಬಂಧದಿಂದ ಪಾ ಷಂಡಿಗಳ ಬಾಧೆಗೆ ಸಿಕ್ಕಿ, ಶಕ್ತಿಗುಂದಿ, ಈ ನನ್ನ ಮಕ್ಕಳೊಡನೆ ಬಹಳ ದೀನ ದಶೆಯನ್ನು ಹೊಂದಿದನು. ಆದರೆ ಒಮ್ಮೆ ನಾನು ಅಕಸ್ಮಾತ್ತಾಗಿ ಬೃಂದಾ ವನಕ್ಕೆ ಹೋದಾಗ, ಅಲ್ಲಿ ನನಗೆ ತಿರುಗಿ ಈ ರೂಪವೂ, ಈ ಯೌವನವೂ ಪ್ರಾಪ್ತವಾಗಿ ಹೊಸಯುವತಿಯಂತಾದರೂ, ಇಲ್ಲಿ ಮಲಗಿರುವ ನನ್ನ ಮಕ್ಕಳುಮಾತ್ರ, ಇನ್ನೂ ತಲೆಯೆತ್ತಲಾರದೆ ಮಲಗಿರುವರು. ಈ ಸ್ಥಳ ವನ್ನು ಬಿಟ್ಟು ವಿದೇಶಕ್ಕಾದರೂ ಹೋಗುವೆನೆಂದರೆ, ಈ ನನ್ನ ಮಕ್ಕಳು ಬಹಳ ಜೀರ್ಣದಶೆ ಯಲ್ಲಿರುವುದರಿಂದ ಅದಕ್ಕೂ ಅವಕಾಶವಿಲ್ಲದೆ ಬಹಳ ವಾಗಿ ದುಖಿಸುತ್ತಿರುವೆನು. ಎಲೈ ಮುನಿಸತ್ತಮನೆ ! ಲೋಕದಲ್ಲಿ ತಾ ಯಿಯು ವೃದ್ಧಳಾಗಿ, ಮಕ್ಕಳು ಯೌವನವುಳ್ಳವರಾಗಿರುವುದು ಸಹಜವು. ನಾವು ಮೂವರೂ ಒಂದಾಗಿರುವ ಕಾಲದಲ್ಲಿ, ನಾನು ಯುವತಿಯಾಗಿಯೂ, ಈ ನನ್ನ ಮಕ್ಕಳು ವೃದ್ಧರಾಗಿಯೂ ಇರುವುದಕ್ಕೆ ಕಾರಣವೇನೋ ತಿಳಿಯಲಿಲ್ಲ. ಈ ವೈಪರೀತ್ಯವನ್ನು ನೋಡಿ ನನ್ನ ಮನಸ್ಸಿನಲ್ಲಿ ಆಶ್ಚರವೂ, ದುಃಖವೂ ಹೆಚ್ಚುತ್ತಿರುವುದು. ಎಲೈಮಹಾತ್ಮನೆ ! ಇದರ ಕಾರಣವೇನೆಂಬು ದನ್ನು ನೀನು ನನಗೆ ದಯೆಯಿಟ್ಟು ತಿಳಿಸುವೆಯಾ ? ” ಎಂದಳು. ಅದಕ್ಕಾ ನಾರದನು (ಎಲೆ ಭದ್ರೆ! ಇದರ ಕಾರಣವೆಲ್ಲವನ್ನೂ ನಾನು ಜ್ಞಾನದೃಷ್ಟಿ ಯಿಂದ ತಿಳಿದು ಹೇಳುವೆನು. ದುಃಖವನ್ನು ಬಿಡು. ಶ್ರೀಮನ್ನಾರಾಯಣನು ನಿನಗೆ ಸುಖವನ್ನು ೧ಟುಮಾಡುವನು” ಎಂದು ಹೇಳಿ, ಕ್ಷಣಮಾತ್ರದಲ್ಲಿಯೇ ತನ ಜ್ಞಾನದೃಷ್ಟಿಯಿಂದ ಅದರ ಪೂರ್ವವೃತ್ತಾಂತಗಳೆಲ್ಲವನ್ನೂ ಚೆನ್ನಾಗಿ ತಿಳಿದು ಹೇಳಲಾರಂಭಿಸಿದನು. ---

  • ಇಲ್ಲಿ ಉತ್ಪನ್ನಾ ದ್ರವಿಡೀ ಸಾಹಂ ವೃದ್ಧಿಂ ಕರ್ಣಾಟಕೇ ಗತಾ | ಕೈಚಿತ್ರ್ಯ ಚನ್ನ ಹಾರಾಷ್ಟ್ರ ಗುರ್ಜರೇ ಜೀರ್ಣತಾಂ ಗತಾ||” ಎಂದು ಮೂಲವು.