ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೮೦

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ, ೧೪.] ಪ್ರಥಮಸ್ಕಂಧವು ೧೬೫ ಮಹಾವಿಪತ್ತು ಸಂಭವಿಸಬಹುದೆಂದೆಣಿಸಬೇಕಾಗಿದೆ. ಆದೋ! ಅತ್ತಲಾಗಿ ನೋಡು!ಒಂದು ನರಿಯು ಸೂರನಿಗಿದಿರಾಗಿ ನಿಂತು ಬಾಯಿಂದ ಬೆಂಕಿಯು ರಿಯನ್ನು ಕಕ್ಕುತ್ಯ, ಅತಿಭಯಂಕರಧ್ವನಿಯಿಂದ ಅರಚುತ್ತಿರುವುದು ! ಇತ್ತ ಲಾಗಿ ಒಂದುನಾ ಯು ನಿರ್ಭಯವಾಗಿ ಬಂದು ನನ್ನ ಮುಂದೆ ನಿಂತು ಗೋಳಿಡುವುದನ್ನು ನೋಡಿದೆಯಾ? ಗೋವು ಮೊದಲಾದ ಪ್ರಶಸ್ತಮೃಗಗೆ ಳೆಲ್ಲವೂ ನನ್ನನ್ನು ಅಪ್ರದಕ್ಷಿಣವಾಗಿ ಸುತ್ತುತ್ತಿರುವುವು ! ಆನೆ ಕುದುರೆ ಮೊದಲಾದ ನಮ್ಮ ವಾಹನಗಳೆಲ್ಲವೂ ಏನೋ ದುಃಖದಿಂದ ಗೋಳಿಡು ವಂತೆ ಕಣ್ಣುಗಳಲ್ಲಿ ನೀರನ್ನು ತುಳುಕಿಸುತ್ತಿರುವುವು. ಇತ್ತಲಾಗಿ ಒಂದು ಪಾರಿವಾಳವು ಯಮದೂತನಂತೆ ಮುಂದೆ ಬಂದು, ಆರ್ತಧ್ವನಿಯಿಂದಕೂಗು ನನ್ನ ಮನಸ್ಸನ್ನು ನಡುಗಿಸುತ್ತಿರುವುದು.ಇದೋ!ಇಲ್ಲಿ ಎರಡುಗೂಬೆಗಳು ಹಗಲಲ್ಲಿಯೂ ನಿದ್ರೆಮಾಡದೆ, ಇದಿರಿದಿರಾಗಿ ಕುಳಿತು, ಒಂದಾದಮೇಲೆ ಮ ತೊಂದು ಕೂರಧ್ವನಿಯಿಂದ ಊಳಿಡುತ್ತಿರುವುನ್ನು ನೋಡಿದೆಯಾ? ಇವರ ಡೂ ಸೇರಿ ಈ ನಮ್ಮ ದೇಶವನ್ನು ಹಾಳುಮಾಡುವುದಕ್ಕಾಗಿ ಒಂದಕ್ಕೊಂದು ಮಾತಾಡಿಕೊಳ್ಳುವಂತೆ ತೋರುವುದು. ದಿಕ್ಕುಗಳೆಲ್ಲವೂ ಕೆಂದೂಳಿಯಿಂದ ಕವಿದಿರುವುವು ನೋಡು! ಸಮಸ್ಯಕುಲಪತಗಳೊಡನೆ ಭೂಮಿಯು ನಡು ಗುತ್ತಿರುವುದು! ಅಕಾಲಮೇಘುಸಮೂಹಗಳೊಡನೆ ಕೂರವಾದ ಸಿಡಿಲು ಬಿಳುತ್ತಿರುವುದು ನೋಡು!ಸೂರಿನ ಸುತ್ತಲೂ ಪರಿವೇಷವು ಕಾಣುವುದನ್ನು ನೋಡು! ಗಾಳಿಯು ಅತಿಕ್ರೂರವಾಗಿ ಬೀಸು,ನೆಲದ ದೂಳನ್ನೆಬ್ಬಿಸಿ, ಅಂ ತರಿಕ್ಷವೆಲ್ಲವನ್ನೂ ಕತ್ತಲೆಕವಿದಂತೆ ಮಾಡುತ್ತಿರುವುದು ನೋಡು! ಮೇಘುಗ ಳು ಸುತ್ತಲೂ ಭಯಂಕರವಾದ ರಕ್ತಧಾರೆಯನ್ನು ವರ್ಪಿಸುತ್ತಿರುವುವು. ಸೂರನು ಕಾಂತಿಗುಂದುತ್ತಿರುವನು.ಆಕಾಶದಲ್ಲಿ ಗ್ರಹಗಳು ಒಂದಕ್ಕೊಂದು ಹೋರಾಡುತ್ತಿರುವುವು. ಭೂಮ್ಯಾಕಾಶಗಳೆರಡೂ ಅಲ್ಲಲ್ಲಿ ಗುಂಪುಗಟ್ಟಿದ ಪಿ ಶಾಚಗಣಗಳಿಂದ ದಹಿಸಲ್ಪಡುವಂತೆ ಕಾಣುವುವು ನೋಡು! ನದೀನದಿಗಳೂ ಸರೋವರಗಳೂ, ಪ್ರಾಣಿಗಳ ಮನಸ್ಕೂ ಬಹಳವಾಗಿ ಕಲಗಿರುವುವು. ಅಗ್ನಿ ಕಾರಗಳಲ್ಲಿ ಆಜ್ಯದಿಂದ ಹೋಮಮಾಡಿದಾಗಲೂ ಅಗ್ನಿ ಯು ಜ್ವಲಿಸುವುದಿ ಲ್ಲ. ಆಹಾ! ಕಾಲಗತಿಯು ಹೇಗಿರುವುದೋ ತಿಳಿಯಲಿಲ್ಲವಲ್ಲಾ! ಎಳಗರುಗಳು