ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೨೪

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ, ೧೯.] ಪ್ರಥಮಸ್ಕಂಧವು. ೨೦ ರ್ಷಿಗಳೇ! ಸತ್ಯಲೋಕದಲ್ಲಿ ಮೂರ್ತಿಮತ್ತಾದ ವೇದಸಮೂಹದಂತೆ ಪ್ರಕಾ ಶಿಸುವ ನೀವೆಲ್ಲರೂ ನಾನಾದಿಕ್ಕುಗಳಿಂದ ಇಲ್ಲಿಗೆ ಬಂದು ಸೇರಿರುವಿರಿ!ನಮ್ಮಂ ತವರನ್ನು ಅನಗ್ರಹಿಸುವುದೇ ನಿಮಗೆ ಸ್ವಭಾವವು. ಇಷ್ಟೇ ಹೊರತು ಈ ಲೋಕದಲ್ಲಿಯಾಗಲಿ, ಪರಲೋಕದಲ್ಲಿಯಾಗಲಿ, ನಿಮಗೆ ಆಗಬೇಕಾದ ಪ್ರಯೋಜನವೇನೂ ಇಲ್ಲವು. ಆದುದರಿಂದ ನಿಮ್ಮನ್ನಾಶ್ರಯಿಸಿ ನಾನು ನಡೆಸಬೇಕಾದ ಕಾರವೊಂದುಂಟು. ಅದನ್ನು ಪ್ರಾರ್ಥಿಸಿಕೊಳ್ಳುವೆನು. ಸಾ ಯುವುದಕ್ಕೆ ಸಿದ್ಧನಾದ ಮನುಷ್ಯನು, ತನ್ನ ಕರಣತ್ರಯಗಳಿಂದಲೂ ನಡೆಸ ಬೇಕಾದ ಕರ್ಮವಾವುದುಂಟೋ ಅದನ್ನು , ನೀವು ಚೆನ್ನಾಗಿ ವಿಮರ್ಶಿಸಿ ನನಗೆ ತಿಳಿಸಬೇಕು” ಎಂದನು. ಹೀಗೆ ಪ್ರಶ್ನೆ ಮಾಡುತ್ತಿರುವ ಆ ಪರಿಕ್ಷಿದ್ರಾ ಜನಿಗೆ ತಕ್ಕ ಪ್ರತ್ಯುತ್ತರವನ್ನು ಹೇಳುವುದಕ್ಕಾಗಿ ಆ ಮಹರ್ಷಿಗಳೆಲ್ಲರೂ ಆ ಲೋಚಿಸುತ್ತಿರುವಸಮಯಕ್ಕೆ ಸರಿಯಾಗಿ, ಸೈಜ್ಞೆಯಿಂದ ಭೂಮಂಡಲವ ನ್ನು ಸುತ್ತುತ್ತಿದ್ದ ವ್ಯಾಸಪುತ್ರನಾದ ಶುಕಮುನಿಯು ಅಕಸ್ಮಾತ್ತಾಗಿ ಅಲ್ಲಿಗೆ ಬಂದು ಸೇರಿದನು. ಆ ಶುಕಮಹರ್ಷಿಯು ಮಧ್ಯಯೌವನದಲ್ಲಿದ್ದರೂ ಸ್ವಲ್ಪ ಮಾತ್ರವೂ ವಿಷಯಾಸಕ್ತಿಯಿಲ್ಲದೆ, ಕೇವಲವಿರಕ್ತನಾಗಿಯೇ ತಿರುಗುತ್ತಿದ್ದ ವನು ಮೈಮೇಲೆ ಆಶ್ರಮಸಂಬಂಧವಾದ ಚಿಹ್ನೆಗಳೊಂದಾದರೂ ಇಲ್ಲದೆ ಅವಧೂತವೇಷದಿಂದೊಪ್ಪತಿದ್ದನು. ಮತ್ತು ಆತನು ಬ್ರಹ್ಮಾತ್ಮಕವಾದ ಆತ್ಮಾನುಭವದಿಂದಲೇ ಆನಂದಿಸುತ್ತಿದ್ದವು. ನೋಡಿದವರೆಲ್ಲರಿಗೂ ಅವನ ವೇಷವು ಕೇವಲಹಾಸ್ಯಾಸ್ಪದವಾದ ಸ್ಥಿತಿಯಲ್ಲಿದ್ದಿತು. ಇದಕ್ಕಾಗಿಯೇ ಅವ ನ ಹೋದಕಡೆಗಲ್ಲೆಲ್ಲಾ ಬಾಲಕರು ಅವನನ್ನು ಸುತ್ತಿ ಮುತ್ತಿಕೊಂಡು ಪರಿ ಹಾಸ್ಯ ಮಾಡುತ್ತಿರುವರು, ಅವನ ಕರಚರಣಾದ್ಯವಯವಗಳೆಲ್ಲವೂ ಬಹಳ ಸುಕುಮಾರಗಳಾಗಿದ್ದುವು. ಆತನು ಇನ್ನೂ ಹದಿನಾರುವಯಸ್ಸಿನ ಕುಮಾ ರನು, ಅತಿಸುಂದರವಾದ ಅವನ ನೆತ್ತಿಯ, ವಿಶಾಲವಾದ ಕಣ್ಣುಗಳೂ, ಉ ಬ್ಬಿದ ಮೂಗೂ, ಒಂದಕ್ಕೊಂದು ಸಮಾನವಾದ ಕಿವಿಗಳೂ,ಬಾಗಿದಹುಬ್ಬು ಗಳೂ,ಲೋಕಮೋಹಕಗಳಾಗಿದ್ದುವು. ಅವನ ಕಂಠವು ಶಂಖವನ್ನು ಹೋಲು ತಿರುವುದು.ಅವನ ಭುಜಗಳೆರಡೂ ಮಾಂಸದಿಂದ ತುಂಬಿಶೋಭಿಸುತ್ತಿದ್ದುವು ಅವನ ಎದೆಯು ವಿಶಾಲವಾಗಿ ಉಬ್ಬಿತು. ಸುಳಿಯಂತಿರುವ ನಾಭಿಯಿಂದ