ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೫೫

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೩೬ ಶ್ರೀಮದ್ಭಾಗವತವು [ಅಧ್ಯಾ, ೩. ಎಲೈ ಮಹಾತ್ಮನೆ ! ಇನ್ನು ಹೆಚ್ಚು ಮಾತಿನಿಂದೇನು, ಯಾವನ ಕಿವಿಯಲ್ಲಿ ಒಂದಾವರ್ತಿಯಾದರೂ ಭಗವನ್ನಾಮವು ಬಿಳುವುದಿಲ್ಲವೋ ,ಆ ಮನುಷ್ಯನು ನಾಯಿಗಳಿಗೂ, ಊರುಹಂದಿಗಳಿಗೂ, ಒಂಟೆಗಳಿಗೂ, ಕತ್ತೆಗಳಿಗೂ, ಸಮ ನೆಂಟಣಿಸಲ್ಪಡುವ ಕೇವಲಮೃಗಪ್ರಾಯನೇ ಹೊರತು ಬೇರೆಯಲ್ಲ. ತ್ರಿವಿ ಕ್ರಮಾವತಾರವನ್ನೆತ್ತಿ, ಸಮಸ್ತಲೋಕಗಳನ್ನೂ ತನ್ನ ಪಾದಸ್ಪರ್ಶದಿಂದ ಪವಿತ್ರವಾಗಿ ಮಾಡಿದ ಭಗವಂತನ ಚರಿತ್ರೆಗಳನ್ನು ಕೇಳದ ಕಿವಿಗಳು ಹಾಳು ಬಿದ್ದ ಗವಿಗಳೇ ಹೊರತು ಕಿವಿಗಳಲ್ಲ! ಯಾವರ ನಾಲಗೆಯು ಭಗವತಕ್ಕಥೆಗೆ ಳನ್ನು ಒಂದಾವರ್ತಿಯಾದರೂ ಗಾನಮಾಡುವುಮಿಲ್ಲವೋ, ಅಂತವನ ನಾಲ ಗೆಯು,ಹಾಳುಬಾವಿಯಲ್ಲಿ ಬಿದ್ದು ಅರಚುತ್ತಿರುವ ಕಪ್ಪೆಗಳ ನಾಲಗೆಯಂತೆಯೇ ಹೊರತು ಬೇರೆಯಲ್ಲ. ಅಂತವನಿಗೆ ನಾಲಗೆಯಿದ್ದರೂ ಇಲ್ಲದಂತೆಯೇ ಎಣಿ ಸಬಹುದು. ಭೋಗಮೋಕ್ಷ ಪ್ರದನಾದ ಭಗವಂತನ ಪಾದಗಳಿಗೆ ಒಂದಾವ ರ್ತಿಯಾದರ ಭಕ್ತಿಯಿಂದ ಬಗ್ಗದ ತಲೆಯು, ಎಷ್ಮೆ ಅಮೂಲ್ಯವಾದ ಪಟ್ಟು ವಸ್ತ್ರಗಳಿಂದಲೂ, ರಾಜಕಿರೀಟಗಳಿಂದಲೂ ಶೋಭಿತವಾಗಿದ್ದರೂ ಮೈಗೆ ಅದೊಂದು ಭಾರವೇ ಹೊರತು ಬೇರೆಯಲ್ಲ, ಶ್ರೀಹರಿಯ ಪಾದಪೂಜೆ ಗಳನ್ನು ಮಾಡದ ಕೈಗಳು ಎಷ್ಮೆ ಸುವರ್ಣ ಕಟಕಗಳಿಂದ ಶೋಭಿಸುತ್ತಿದ್ದ ರೂ, ಅವುಗಳು ಹೆಣದ ಕೈಗಳಂತಲ್ಲದೆ ಬೇರೆಯಲ್ಲ. ಶ್ರೀ ಮಹಾವಿಷ್ಣುವಿನ ದಿ ವ್ಯಮಂಗಳವಿಗ್ರಹಗಳನ್ನು ನೋಡಿ ಆನಂದವನ್ನನುಭವಿಸದ ಕಣ್ಣುಗಳು ನವಿಲುಕಣ್ಣುಗಳೇ ಹೊರತು ಬೇರೆಯಲ್ಲ. ವಿಷ್ಣು ಕ್ಷೇತ್ರಗಳಿಗೆ ಯಾತ್ರಾರ್ಥ ವಾಗಿ ಹೋಗದ ಮನುಷ್ಯರ ಪಾದಗಳು, ಮರದಕಾಲುಗಳಲ್ಲದೆ ಬೇರೆಯಲ್ಲ, ಮತ್ತು ಯಾವನು ಭಗವದ್ಭಕ್ತರ ಪಾದಧೂಳಿಯಲ್ಲಿ ಅಭಿಲಾಷೆಯಿಲ್ಲದಿರು ವನೋ,ಯಾವನು ಶ್ರೀಹರಿಯ ಪಾದಸಂಬಂಧವುಳ್ಳ ತುಳಸೀದಳದ ಸುಗಂ ಧವನ್ನು ಒಂದಾವರ್ತಿಯಾದರೂ ಆ ಪ್ರಾಣಿಸಿ ತಿಳಿದಿಲ್ಲವೋ ಅಂತವನನ್ನು ಜೀವಚ್ಛವವೆಂದೇಭಾವಿಸಬೇಕು. ಭಗವಂತನನಾಮಗಳನ್ನು ಕೇಳುವಾಗಲೂ ಹೇಳುವಾಗಲೂ, ಯಾವನಿಗೆ ಅದರಿಂದುಂಟಾದ ರಸಾನುಭವದಿಂದ ಕಣ್ಣು ಗಳಲ್ಲಿ ಆನಂದಬಾಷ್ಪವೂ, ಮುಖದಲ್ಲಿ ವಿಕಾಸವೂ,ದೇಹದಲ್ಲಿ ರೋಮಾಂಚ ವೂ, ಉಂಟಾಗುವುದಿಲ್ಲವೋ, ಅವನ ಹೃದಯವು ಉಕ್ಕಿನಿಂದ ನಿರ್ಮಿತವಾ