ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೯೪

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆಧ್ಯಾ. ೭.] ದ್ವಿತೀಯಸ್ಕಂಧವು ೦೭೫ ಲುಗಳಿಂದ ಕೂಡಿದ ಭಗವಂತನು, ಆ ತನ್ನ ಎರಡು ಕೂದಲುಗಳೇ ಈ ಭೂ ಭಾರವನ್ನು ನೀಗಿಸಬಲ್ಲುದೆಂಬ ಭಾವವನ್ನು ತೋರಿಸುವುದಕ್ಕಾಗಿ, ಈ ಎರಡು ಬಣ್ಣಗಳುಳ್ಳ ಎರಡುರೂಪದಿಂದವತರಿಸುವನು. ಇವರಿಬ್ಬರೂ ವಸು ದೇವನಿಗೆ ಪುತ್ರರಾಗುವರು. ರೋಹಿಣೀದೇವಿಯಲ್ಲಿ ಬಲರಾಮನೂ, ದೇವ ಕೀದೇವಿಯಲ್ಲಿ ಕೃಷ್ಣನೂ ಜನಿಸುವರು. ಇವರಿಬ್ಬರಲ್ಲಿ ಶ್ರೀಕೃಷ್ಣನನ್ನು ಸಾಕ್ಷಾಷ್ಟುವೆಂದೇ ಹೇಳವರು. ಅಂತಹ ಕೃಷ್ಣನು ಜನಗಳಿಗೆ ಸಾಮಾನ್ಯ ಮನುಷ್ಯನಂತೆಯೇ ಕಾಣುತ್ತ, ಅತಿಮಾನುಷಕೃತ್ಯಗಳಿಂದ ತನ್ನ ಮಹಿಮೆ ಯನ್ನು ಆಗಾಗ ತೋರಿಸುತ್ತಿರುವನು. ಈತನು ನಡೆಸುವ ಒಂದೆರಡು ಅದ್ಭುತಕಾರಗಳನ್ನೂ ತಿಳಿಸುವೆನು ಕೇಳು. ಈ ಕೃಷ್ಣನು ಮೂರುತಿಂಗಳ ಕೂಸಾಗಿರುವಾಗಲೇ ಕಂಸನಿಂದ ಪ್ರೇರಿತೆಯಾದ * ಪೂತನೆಯೆಂಬ ರಾಕ್ಷ ಯು, ಸೈನದಲ್ಲಿ ವಿಷವನ್ನು ತುಂಬಿಕೊಂಡು, ಆ ಸಣ್ಣ ಮಗುವಿಗೆ ಮೊಲೆ ಯೂಡಿಸುವ ನೆವದಿಂದ ಅವನನ್ನು ಕೊಲ್ಲಬೇಕೆಂದು ನಂದಗೋಕುಲಕ್ಕೆ ಬರು ವಳು. ಇವಳ ನಡೆತೆಯನ್ನು ನೋಡಿ ಗೋಪಸ್ತ್ರೀಯರು ಸಂದೇಹಪಟ್ಟು, ಅನೇಕವಿಧದಿಂದ ತಡೆಯುತಿದ್ದರೂ ಕೇಳದೆ, ಆ ರಾಕ್ಷಸಿಯು ಮಗುವನ್ನು ಬಲಾತ್ಕಾರದಿಂದೆತ್ತಿ ತೊಡೆಯಲ್ಲಿರಿಸಿಕೊಂಡು ಸೈನ್ಯವನ್ನು ಕೊಡುತ್ತಿರುವಾ ಗ, ಸಣ್ಣ ಮಗುವಾದ ಕೃಷ್ಣನು, ಹಾಲುಕುಡಿಯುವ ನೆವದಿಂದಲೇ ಆಕೆಯ ಪ್ರಾಣವಾಯುಗಳನ್ನು ಹೀರಿಬಿಡುವನು. ಹೀಗೆಯೇ ಮತ್ತೊಮ್ಮೆ ಕಂಸ ನಿಂದ ಪ್ರೇರಿತನಾದ ಶಕಟಾಸುರನೆಂಬ ರಾಕ್ಷಸನು, ಈತನನ್ನು ಕೊಲ್ಲುವುದ ಕಾಗಿ ಬಂಡಿಯ ರೂಪದಿಂದ ಬರಲು, ಬಾಲನಾದ ಕೃಷ್ಣನು ಬಂಡಿಯ ನ್ನು ತನ್ನ ಕಾಲಿನಿಂದ ಮೆಟ್ಟುವ ನೆವದಿಂದ ಆ ರಾಕ್ಷಸನನ್ನು ಕೊಲ್ಲು ವನು. ಮತ್ತೊಮ್ಮೆ ಕೃಷ್ಣನು ದುಶ್ಲೇಷ್ಮೆಯನ್ನು ಮಾಡಿದನೆಂದು ಕೇಳಿ ಯಶೋದಾದೇವಿಯು ಕೋಪಗೊಂಡು, ಅವನನ್ನು ಹಗ್ಗದಿಂದ ಬಿಗಿದು ರ್ಥಗಳೆಂಬ ಭಾವವನ್ನೂ ತಿಳಿಸುವುದಕ್ಕೇ ಹೊರತು, ರಾಮಕೃಷ್ಣರು ಕೇಶಾವತಾರ ವೆಂಬ ಅಭಿಪ್ರಾಯದಿಂದ ಹೇಳಿದುದಲ್ಲವೆಂದು ಗ್ರಾಹ್ಯವು,

  • ಇಲ್ಲಿ ಪೂತನೆಯು ಉಲೂಕಾ (ಗೂಬೆಯ) ರೂಪದಿಂದ ಬಂದುದಾಗಿ ಪರಾ ಹಾಂತರಪ್ರಸಿದ್ಧಿಯುಂಟು.